ಬದುಕಿನ ಬಹುಪಾಲು ಸಂದರ್ಭಗಳಲ್ಲಿ ಅನಿರೀಕ್ಷಿತಗಳು, ಅಪಾಯಗಳು, ಸಂಬಂಧಗಳು, ಸಂಕಷ್ಟಗಳು, ಸುಖ-ಸಂತೋಷಗಳು, ದುಃಖ-ದುಮ್ಮಾನಗಳು ಸಂಭವಿಸಿದರೂ ಧೃತಿಗೆಡದೆ, ಹಿಗ್ಗದೆ, ಕುಗ್ಗದೆ, ಮುನ್ನಡೆಯುವುದೇ ಬದುಕು...ಅದೇ ನನ್ನ ಬದುಕಿನ ಶೈಲಿ ! (ವಿ.ಸೂ. ಬರವಣಿಗೆ ಟ್ರಾನ್ಸ್ಲೇಟ್ ಮಾಡುವಾಗ ವ್ಯಾಕರಣ ದೋಷ ಇಣುಕಿದರೆ ಮನ್ನಿಸುವ ಔದಾರ್ಯ ನಿಮ್ಮದಾಗಲಿ)
Thursday, April 26, 2012
ನೀನು ನಾನು ಮತ್ತು ಮಳೆ.......!
ಜೋರು ಮಳೆಯ ಕಂಡು
ನೆನಪಾದೆ ಗೆಳತಿ
ಅಂದು ನಾವಿಬ್ಬರು ಜೊತೆ ಜೊತೆಗೆ ಹೆಜ್ಜೆ ಹಾಕಿದ್ದು
ಇದೆ ಬೇಸಗೆ ಮಳೆಯಲ್ಲಿ
ನನಗಿನ್ನು ಚಂದ ನೆನಪಿದೆ
ನೀ ಅಂದು
ಹೇಳಿದ್ದು
ಇಂದು ಮಳೆ ಬಂದೆ ಬರುವುದೆಂದು
ನಿನ್ನ ಮಾತು
ನಿಜವೇ ಆಯಿತಲ್ಲ ಗೆಳತಿ
ಇಳೆ ತಂಪಾಯಿತು ಅಂದು
ಮಳೆಯಲ್ಲಿ ಅಂದು ನಡೆದಷ್ಟು
ನಮಗೆ ಜಗತ್ತಿನ ಅರಿವೇ ಇರಲಿಲ್ಲ
ತುಂತುರು ಮಳೆಯ ಆಸ್ವಾದಿಸುವ
ಆ ನಮ್ಮ ಮನಸ್ತಿತಿ ಕಂಡು
ಜನ ನೋಡುತ್ತಲೇ ಇದ್ದರು
ನಮ್ಮತ್ತ ಆದರು
ನಮಗೆಲ್ಲಿತ್ತು ಅವರತ್ತ
ಗಮನ...?
ಎಲ್ಲ ಮಳೆಯಲು
ನನ್ನ ಪದೇ ಪದೇ
ಕಾಡುವುದು
ನೀನೆ
ನಂತರ
ಮಧುರ ನೆನಪುಗಳ ನೆನಪಿಸುವುವಳು
ನೀನೆ ...
ಬೇಸಗೆ ಮಳೆಯ ಜೊತೆ
ಆರಂಭವಾದ ನಮ್ಮ
ಬೆಸುಗೆ
ಅದ್ಬುತ ವರ್ಷಧಾರೆ ...
ನಾ ಇಳೆ
ನೀ ಮಳೆ
ಇದು
ನಿರಂತರ
ಸಮ್ಮಿಲನ...!
-ಹೆಚ್.ಆರ್.ಪ್ರಭಾಕರ್
Subscribe to:
Posts (Atom)