
ಚಿಂತೆ ಯಾಗಿದೆ ಬದುಕಿಗೆ
ಮುಂದೇನೋ ಎಂಬ ಆತಂಕ ಕಾಡಿದೆ
ನಾವು ನಂಬಿ ಬದುಕಿದ ಆ ಭೂ ತಾಯಿಯಿಂದ
ನಮ್ಮನ್ನು ಬೇರ್ಪಡಿಸುವ ನಿರಂತರ ಹುನ್ನಾರ
ಇದಕಿಲ್ಲವೇ ಕೊನೆ..
ಅಪ್ಪ ಅಮ್ಮ ನನಗೆ ಕಲಿಸಿದ್ದು ಕೃಷಿಯನ್ನೇ
ಅಣ್ಣ ತಮ್ಮ ಹೆಗಲು ಕೊಟ್ಟದ್ದು ಕೃಷಿಗೆ
ಬಂದು ಬಾಂಧವರು ಕೈ ಹಿಡಿದು ನಡೆಸಿದ್ದು ಇತ್ತ
ಸಂಧ್ಯಾ ಕಾಲ ಸಮೀಪಿಸಿದರು
ನಾ ಇರುವುದು ಇಲ್ಲೇ ಪ್ರಾಣ ಬಿಡುವುದು ಇಲ್ಲೇ
ಕೈಯಲ್ಲಿ ಹಣವಿಲ್ಲದಿದ್ದರು ನಾ ಬದುಕು ಸಾಗಿಸಿದೆ
ಮನೆಯಲ್ಲಿ ದವಸ ಇದ್ದಾರೆ ಸಾಕು ಅದೇನೋ ಧೈರ್ಯ
ಆ ಧೈರ್ಯವೇ ಇಂದಿನವರೆಗೂ ಕೈ ಹಿಡಿದು ನಡೆಸಿದ್ದು
ಅದರಿಂದಲೇ ಮಕ್ಕಳಿಗೆ ಅಕ್ಷರ ಕಲಿಸಿದ್ದು
ಇಂದು ನನ್ನ ಮಗ ಹೇಳಿದ ನಾ ನಗರಕ್ಕೆ ಒಲಸೆ ಹೋಗುವೆನೆಂದು
ಅಲ್ಲೇ ಒಂದು ಕೆಲಸಕ್ಕೆ ಸೇರಿ ಕಾರು ಬೈಕು ಖರೀದಿಸಿ
ನಿನ್ನ ಸಾಕುವನೆಂದು
ಇದೆಂತಹ ಶೋಕಿಯ ಗೀಳು ಇವನಿಗೆ
ಅಲ್ಲಿ ಮತ್ತೊಬ್ಬರ ಮುಂದೆ ಕೈ ಚಾಚುವುದು
ಮಮ್ಮಲ ಮರುಗಿದೆ
ಮಗ ಹೊರಟೆ ಬಿಟ್ಟ ನನ್ನ ಮಾತು ಕೇಳದೆ
ಅಲ್ಲಿ ಹೋಗಿ ಸೇರಿದನಂತೆ ಯಾವುದೋ ಆಫೀಸಿಗೆ
ವರುಷ ಗಳು ಕಳೆಯಿತು,
ಆರಂಬದಲ್ಲಿ ಆಗಾಗ ಬರುತ್ತಿದ್ದ..ಈಗ ವರುಷಕ್ಕೆ ಒಮ್ಮೆ ಬರುವುದು ದುರ್ಲಬ
ದುಖ ಉಮ್ಮಳಿಸಿ ಬರುತಿದೆ
ಹೆತ್ತವರ ಮರೆತ ದುಖ ಒಂದೆಡೆ ಆದರೆ
ಊರನ್ನು ಮರೆತ ದುಖ ಮತ್ತೊಂದೆಡೆ
ಅವನಿಗೆ ಬದುಕು, ಸಂಸ್ಕೃತಿ ಕಲಿಸಿದ
ಹಳ್ಳಿ ಇಂದು ಅವನಿಗೆ ಅಪಥ್ಯ
ಸಿಟಿಯ ಮೋಜು ಅವನಲ್ಲಿ ಮರೆಸಿದೆ ಬಾಂಧವ್ಯ
ಮತ್ತೆ ಕೇಳಿದೆ ಮಗನ ನೀ ಆಗಾಗ ಬಾ ಎಂದು
ನಾ ಆ ಹಳ್ಳಿಗೆ ಬರಲು ಮನಸಿಲ್ಲ
ನೀ ಇಲ್ಲಿ ಬಂದರೆ ನಿನ್ನ ಚೆನ್ನಾಗಿ ನೋಡಿಕೊಳ್ಳುವೆ
ನಾ ಹೇಗೆ ಹೋಗಲಿ ಈ ಭೂ ತಾಯಿಯ ಬಿಟ್ಟು
ನಾ ಹೇಳಿದೆ
ನನ್ನ ಬದುಕಿಲ್ಲೇ ಸಾವು ಇಲ್ಲೇ
ಬರುವುದಾದರೆ ನೀ ಆಗಾಗ ಬಾ ಇಲ್ಲವಾದರೆ ನಿನ್ನಷ್ಟಕ್ಕೆ ನೀನಿರು
ಮನಸು ರೋಧಿಸುತಿದೆ ಮತ್ತೆ ಮತ್ತೆ
ಯಾರ ಬಳಿ ಹೇಳಲಿ ನಾ ನನ್ನ ನೋವು..?
-ಹೆಚ್.ಆರ್.ಪ್ರಭಾಕರ್
ಭೂಮಿಯನ್ನೇ ನ೦ಬಿ ಬದುಕನ್ನು ಸಾಗಿಸುತ್ತಿರುವ್ ರೈತನ `ರೋಧನ'ವನ್ನು ಚೆನ್ನಾಗಿ ಅಭಿವ್ಯಕ್ತಿಸಿದ್ದೀರಿ. ಅಭಿನ೦ದನೆಗಳು.ನನ್ನ ಬ್ಲಾಗ್ ಗೆ ಭೇಟಿ ಕೊಡಿ.
ReplyDeletedhanyavaadagalu...
ReplyDelete