ಬದುಕಿನ ಬಹುಪಾಲು ಸಂದರ್ಭಗಳಲ್ಲಿ ಅನಿರೀಕ್ಷಿತಗಳು, ಅಪಾಯಗಳು, ಸಂಬಂಧಗಳು, ಸಂಕಷ್ಟಗಳು, ಸುಖ-ಸಂತೋಷಗಳು, ದುಃಖ-ದುಮ್ಮಾನಗಳು ಸಂಭವಿಸಿದರೂ ಧೃತಿಗೆಡದೆ, ಹಿಗ್ಗದೆ, ಕುಗ್ಗದೆ, ಮುನ್ನಡೆಯುವುದೇ ಬದುಕು...ಅದೇ ನನ್ನ ಬದುಕಿನ ಶೈಲಿ ! (ವಿ.ಸೂ. ಬರವಣಿಗೆ ಟ್ರಾನ್ಸ್ಲೇಟ್ ಮಾಡುವಾಗ ವ್ಯಾಕರಣ ದೋಷ ಇಣುಕಿದರೆ ಮನ್ನಿಸುವ ಔದಾರ್ಯ ನಿಮ್ಮದಾಗಲಿ)
Friday, January 11, 2013
ನಾನು ...ಮತ್ತು ನಾನೂ ...........
ಬದುಕಿನ ಬಂಡಿ
ಸಾಗುತ್ತಿದೆ ಸಾಗುತ್ತಿದೆ
ಪ್ರತಿ ನಿತ್ಯ ಸ್ವಾರ್ಥ ದೆಡೆಗೆ
ಅದು ಮನುಷ್ಯತ್ವದ ಮರೀಚಿಕೆಯಾ
ಪ್ರೀತಿಯ ಅದೃಶ್ಯವಾ
ನಂಬಿಕೆಗೆ ದ್ರೋಹವಾ
ಉತ್ತರವಿಲ್ಲದ ಪ್ರಶ್ನೆಗಳು
ಏನಾದರು ಸರಿ
ನಾ ಸುಖಿಯಾಗಬೇಕು
ಎಂಬ ಹಂಬಲವಾ
ಪರ ಚಿಂತೆ ಎನಗೇಕೆ ಎಂಬ
ವೇದಾಂತವಾ
ಯಾರು ಏನಾದರೇನು ಎಂಬ
ಭಂಡತನವಾ
ಉತ್ತರವಿಲ್ಲದ ಪ್ರಶ್ನೆಗಳು...
ಹುಟ್ಟಿನಿಂದಾ ಸಾವಿನ ವರೆಗೆ
ಬಾಲ್ಯದಿಂದ ವ್ರುಧ್ಹಪ್ಯದ ವರೆಗೆ
ಪ್ರತಿ ಕ್ಷಣ ತನ್ನ ವಿಶ್ವರೂಪ
ತೋರುತ್ತಿದೆ ಈ ಸ್ವಾರ್ಥ
ಇದು ಮನುಷ್ಯನ ಅತಿರೆಖವಾ
ಆಸೆಬುರುಕುತನದ
ಪರಮಾವಧಿಯಾ
ಕ್ರೌರ್ಯದ ಪರಾಕಷ್ಟೇಯಾ
ಉತ್ತರವಿಲ್ಲದ ಪ್ರಶ್ನೆಗಳು
ಜೀವರಾಶಿಗಳಲ್ಲಿ
ತಾನೇ ಶ್ರೇಷ್ಠ ಎಂದು ಬೀಗುವ
ಅಹಂಭಾವ ಒಂದು ಕಡೆ
ಎನಗಿಂತ ಬುದ್ದಿಜೀವಿಯಿಲ್ಲ
ಎಂದು ತೋರ್ಪಡಿಸುವ ಕಾತುರ
ಮತ್ತೊಂದೆಡೆ
ಇವೆರಡರ ನಡುವೆ
ಮತ್ತದೇ ಲೋಲುಪತನ
ಅದೇ ನಿಕೃಷ್ಟತೆ
ಅದೇ ಎಲ್ಲವೂ ತನಗೇ ಬೇಕೆಂಬ
ಹಟಮಾರಿತನ
ಇದಕ್ಕೆ ಕೊನೆ ಉಂಟಾ
ಮತ್ತದೇ ಉತ್ತರವಿಲ್ಲದ
ಪ್ರಶ್ನೆಗೆಳು......!!!!!!!!!
-ಹೆಚ್.ಆರ್. ಪ್ರಭಾಕರ್
Subscribe to:
Post Comments (Atom)
No comments:
Post a Comment