
ನನ್ನ ಕಂಡು ನೀನೇಕೆ ಮರುಗುತೀ
ಅಂದು ನಾ ಎಷ್ಟೇ ಭರವಸೆ ನೀಡಿದರು
ನೀ ನನ್ನ ನಂಬಲಿಲ್ಲ
ನನ್ನ ಬರಿಗೈ ನಿನ್ನಲ್ಲಿ ಅನುಮಾನ ಮುಡಿಸಿತ್ತೆ?
ನನ್ನ ಭವಿತವ್ಯದ ಬಗ್ಗೆ ನಿನಗೆ ಚಿಂತೆ ಇತ್ತೇ?
ನನ್ನ ಪ್ರೀತಿಯ ಆಳ ತೋರಿಸಲು
ನಾ ಎಷ್ಟೇ ಪ್ರಯತ್ನಿಸಿದರೂ ನೀ ಅದಕ್ಕೆ ಅವಕಾಶ ಕೊಡಲಿಲ್ಲ
ವರ್ಷಾನುವರ್ಷ ಬೆಳೆದು ಹೆಮ್ಮರವಾದ ನಮ್ಮ ಪ್ರೀತಿಗೆ
ನೀ ಒಂದೇ ಮಾತಿನಲ್ಲಿ ತುಂಡರಿಸಿದೆ
ಎಂದೂ ದುಖಿತನಾಗದ ನಾನು ನಿನಗಾಗಿ ಅತ್ತುಬಿಟ್ಟೆ
ನನ್ನ ಕಣ್ಣೀರು ಒರೆಸುವ ಪ್ರಯತ್ನ ಕೂಡ ಮಾಡದ ನೀನು
ಅದೇಕೆ ಹಾಗೆ ಹೊರಟು ಹೋದೆ ...?
ಆದರು ನಾ ಸಾವರಿಸಿಕೊಂಡು ಮನದಲ್ಲೇ ಹೇಳಿಕೊಂಡೆ
ನಿನ್ನ ಬದುಕು ಹಸನಾಗಲೆಂದು ....!
ಇಂದು
ನಿನ್ನ ಕಂದನೊಂದಿಗೆ ನನ್ನ ನೋಡಿದ ನೀನು
ನನ್ನ 'ನಶ್ವರ' ಬದುಕನ್ನು ನೋಡಿ ಏಕೆ ಮರುಗುತ್ತಿಯೇ..?
ಬಿಡು,
ನಿನ್ನ ಸಂಭ್ರಮವೇ ನನಗೆ
ಬದುಕಿನ ಬಗ್ಗೆ ಭರವಸೆ ಮೂಡಿಸಿದೆ...
ನೀ ಸುಖಿಯಾದಾಗ
ಆ ಸುಖದ ನೆನಪಲ್ಲೇ ಈ ಜನ್ಮವನ್ನು ಕಳೆಯುವ ನಿರ್ಧಾರ ನನ್ನದು
'ತ್ಯಾಗ'ದಲ್ಲಿರುವ ಸಾರ್ಥಕ್ಯ ನಿನಗೇನು ಗೊತ್ತು?
No comments:
Post a Comment