Pages

Tuesday, September 27, 2011

ಪರ್ವಕಾಲ (ಭಾಗ -3)




(ಮೊದಲ ಎರಡು ಭಾಗ ಓದಿ ನಂತರ ಇದನ್ನು ಓದಿಕೊಳ್ಳಿ)

ಅವಳು ಅತ್ತ ಹೋಗುತ್ತಿದ್ದ ಹಾಗೆ ನನಗೆ ಚಿಂತೆ ಶುರು ಆಯಿತು ನನ್ನ ಬದುಕಿನಲ್ಲಿ ನಡೆದ ಒಂದು ಘಟನೆಯನ್ನು ಹೇಳುವುದೋ ಬೇಡವೋ ಎಂದು. ಹೇಳಿದರೆ ಅವಳು ಏನೆಂದುಕೊಳ್ಳುವಲೋ..

ರಾತ್ರಿ ಎಲ್ಲ ಇದೆ ಚಿಂತೆ..ಪದೇ ಪದೇ ಅವಳ ಮೆಸೇಜ್ ಬರುತ್ತಿತ್ತು ನಾನು ಅದಕ್ಕೆ ಉತ್ತರಿಸುತ್ತಿದ್ದೆ ....ರಾತ್ರಿ ಹನ್ನೆರಡಾಯಿತು...ಗುಡ್ ನೈಟ್ ಡಿಯರ್...ಅಂದಳು..
ನಾನು ಗುಡ್ ನೈಟ್ ಅಂದು...ಮಲಗಲು ಯೆತ್ನಿಸಿದೆ..

ಆದರೆ ನಿದ್ದೆ ಹತ್ತಿರವೂ ಸುಳಿಯಲಿಲ್ಲ

ಒಮ್ಮೆ ಪ್ರೀತಿಯ ಮುಳುಗಿದಾಗ ಪ್ರತಿ ಪ್ರೇಮಿಯ ನಡುವೆ ಅಂತರ ಇರಬಾರದು..ಗುಟ್ಟುಗಳು ಇರಬಾರದು ಎಲ್ಲ ವಿಚಾರಗಳನ್ನು ಮುಕ್ತವಾಗಿ ಚರ್ಚಿಸಬೇಕು...ಇಬ್ಬರ ಮನಸು ಬಿಳಿ ಹಾಳೆಯ ರೀತಿ ಇರಬೇಕು ಎಂಬ ನಮ್ಬಿಕೆಯವ ನಾನು...ಈ ಘಟನೆ ತುಂಬಾ ಹಳೆಯದು ಅಲ್ಲ ತೀರ ೬ ತಿಂಗಳ ಅಂತರದ್ದು ಅಷ್ಟೇ..ಅವಳು ಡೆಲ್ಲಿ ಪ್ರವಾಸಕ್ಕೆ ಹೋದಾಗ ನನಗೆ ಗೊತ್ತಾಗಿದ್ದು...

ಇಲ್ಲಿ ತಪ್ಪು ಒಪ್ಪಿನ ವಿಚಾರಕ್ಕಿಂತ ಅವಳ ಮನಸ್ಸಿಗೆ ಬೇಸರವಗುತ್ತದೆಯೇನೋ ಎಂಬ ದಿಗಿಲು..

ಬೆಳಗಾಯಿತು...

ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ..ತಯಾರಾದೆ...ಮೆಸ್ಜ್ ಬಂತು, ಡಿಯರ್ ..ಇನ್ನು ಅರ್ಧ ಗಂಟೆ ಕಣೋ ನಮ್ಮ regular place ಗೆ ಬರ್ತೀನಿ ಬಾ ಆಯ್ತಾ..ಅಂದಳು..

ಓಕೆ..ಅಂದೇ...

ಆ ಸ್ಥಳಕ್ಕೆ ಹೋಗುವ ಹೊತ್ತಿಗೆ ಅವಳು ಕಾಯುತ್ತ ಕುಳಿತಿದ್ದಳು..ನಾನು ಹೋದೆ..ಹಾಯ್ ...ಡಿಯರ್..ಅಂದು...ಓಡಿ ಬಂದು ಬುಜಕ್ಕೆ ಒರಗಿದಳು..

ಹೇಳು ರಾಜ ...ನಾನು ನಿನ್ನ ಬಗ್ಗೆನು ಕೇಳಬೇಕು...ನಾನಿಲ್ಲದ ಸಮಯದಲ್ಲಿ ನೀ ಏನು ಮಾಡುತ್ತಿದ್ದೆ..ತುಂಬಾ ಬೋರ್ ಆಯ್ತಾ..ನನ್ನ ಮೇಲೆ ಕೊಪಾ ಬಂತಾ ...ಸಾರೀ ರಾಜ...ಅಂದಳು...

ಪರವಾಗಿಲ್ಲ ಬಿಡು ಚಿನ್ನ ಈಗ ನೀನು ನನ್ನ ಜೊತೆ ಇದಿಯಲ್ಲ...ಅಷ್ಟು ಸಾಕು...ನಿನ್ನ ಮೇಲೆ ನಾನು ಕೋಪ ಮಾಡ್ಕೊತೀನ...ಡಿಯರ್..ಕಳ್ಳಿ..ಹೀಗೆನ ನೀ ನನ್ನ ಅರ್ಥ ಮಾಡ್ಕೊಂಡಿರೋದು...?

ಇಲ್ಲ ರಾಜ ಸುಮ್ನೆ ಕೇಳಿದೆ..ನನ್ನ ಬಂಗಾರು ಹಾಗೆಲ್ಲ ನನ್ನ ಮೇಲೆ ಕೋಪ ಮಾಡ್ಕೊಲ್ಲೋಲ್ಲ ಅಂತ ನನಗೆ ಗೊತ್ತು ಕಣೋ..ಅಂದಳು..

ಪುಟ್ಟ ನಾ ನಿನಗೆ ಒಂದು ವಿಷ್ಯ ಹೇಳಬೇಕು...ಅಂದೇ..ಏನೋ ಅದು..ಅದಕ್ಕೆ permission ಕೇಳಬೇಕ..ಅಂದಳು..ಓಕೆ..ಸಾರಿ ಅಂದೇ..

ನಾ ಹೇಳಲು ಶುರು ಮಾಡಿದೆ..

ಒಮ್ಮೆ ನಮ್ಮ ಪರಿಚಯದವರ ಮನೆಗೆ ಹೋಗಿದ್ದೆ...ಒಂದು ವರ್ಷದ ಹಿಂದೆ..ಅಲ್ಲೊಬ್ಬಳು ಹುಡುಗಿ ಬಂದಿದ್ದಳು..ಅವಳ ಹೆಸರು ಸ್ನೇಹ..ಅಂತ..MBA ಮಾಡುತ್ತಿದ್ದಳು..ಅಲ್ಲಿ ಅವರು ಇವಳನ್ನು ನನಗೆ ಪರಿಚಯ ಮಾಡಿಸಿದರು..ನೋಡಿದ ಕೂಡಲೇ ತುಂಬಾ innocent ಹುಡುಗಿ ಅನ್ನಿಸಿತು..ಮೊದಲ ಭೇಟಿಯಲ್ಲೇ ತುಂಬಾ ಹರಟೆ ಹೊಡೆದ್ವಿ ...ಅವಳು ತುಂಬಾ ಮಾತಾಡುತ್ತ ಮಾತಾಡುತ್ತ ನನ್ನ ಬಗ್ಗೆ ಕೇಳುತ್ತ ಹೋದಳು..ಒಂದೆರಡು ತಾಸು ಅಂದು ಅಲ್ಲಿ ಟೈಮ್ ಪಾಸ್ ಮಾಡಿದ್ವಿ..

ನಂತರ ನಾನು ಮನೆಗೆ ಬಂದೆ..

ಒಂದೆರಡು ದಿನ ಕಳೆದ ಮೇಲೆ ಅವಳಿಂದ ಫೋನ್ ಬಂತು...ನಾನು..ಕೇಳಿದೆ ಯಾರು ಎಂದು...ಅವಳು ಯಾರು ಅಂತ ಗೊತ್ತಾಗ್ಲಿಲ್ವ..ಬುದ್ದು..ಅಂದಳು..ಅರೆ ಯಾರಪ್ಪ ನನ್ನ ಹೀಗಂತಾರೆ ಅಂತ ಯೋಚಿಸಿದೆ...ಅಷ್ಟರಲ್ಲಿ ಅವಳೇ ಹೇಳಿದಳು ನಾನ್ ರೀ ಸ್ನೇಹಾ..ಅಂದಳು..

ಒಹ್..ಹಾಯ್..ಹೇಗಿದ್ದೀರ ಅಂದೇ..i am great...ಅಂದಳು..ಕಾಲೇಜ್ಗೆ ಹೋಗಿಲ್ವಾ

ಇಲ್ಲ ರೀ ಇವತ್ತು ಚಕ್ಕರ್ ಹಾಕಿದ್ದೇನೆ..ಅಮ್ಮನ ಜೊತೆ ನಮ್ಮ ಮಾವನ ಮನೆಗೆ ಹೋಗಬೇಕಿತ್ತು..ಅದಕ್ಕೆ..ಅಂದಳು.

ಮುಂದೆ..?

ಏನಿಲ್ಲ ನೀವ್ ಹೇಳ್ಬೇಕು..handsome..ಅಂದಳು..ಒಹ್..comman yaar..ಅಂದೇ..

ಯಾಕೆ ನಾನ್ ಹೇಳಿದ್ದು ಸುಳ್ಳ..ಅಂದಳು.ಮತ್ತೇನು ಅಂದೇ..?

ಏನಪ್ಪಾ ಈ ಹುಡುಗರು compliments ಕೊಟ್ಟರು ಬೇಡ ಅಂತಾರೆ..ಅಂದಳು..

ಎನಿವೇ ...ಥ್ಯಾಂಕ್ಸ್ ಅಂದೇ..ಹೇಗಿದೆ...ಜೀವನ...? ಅದೇ ಮಾಮೂಲಿ ಬದುಕು ಕಣ್ರೀ ಅಂದೇ..

ನಾನು ಆಗಾಗ ಈ ತರ ತೊಂದರೆ ಕೊಡ್ತಾ ಇರ್ತೀನಿ ಓಕೆ ನ..ಅಂದಳು..ನೋ ಪ್ರಾಬ್ಲಮ್ ಅಂದೇ.

ಅಂದು ಆಫೀಸಿನಲ್ಲಿ ತುಂಬಾ ಕೆಲಸ ಇತ್ತು ರಾತ್ರಿ ಒಂಬತ್ತು ಘಂಟೆ ದಾಟಿತ್ತು ಮನೆಗೆ ಬಂದು ರಿಲಾಕ್ಷ್ ಮಾಡುತ್ತಿದ್ದೆ..ಮತ್ತೆ ಫೋನ್ ರಿಂಗ್ ಆಯಿತು..

ಅವಳೇ ?

ಹಾಯ್ ಸ್ನೇಹ..ಅಂದೇ..ಹಾಯ್ ಅಂದಳು..ಹೀಗೆ ಹರಟುತ್ತ ಹೋದೆವು..

ನಾ ಹೇಳಿರಲಿಲ್ವಾ ನಿಮಗೆ ತೊಂದರೆ ಕೊಡ್ತಾ ಇರ್ತೀನಿ ಅಂದಳು..ಪರವಾಗಿಲ್ಲ ಹೇಳೇ (? ) ಅಂದೇ..

wat..? ಅಂದಳು..

ನೋಡು ನೀ ಇನ್ನು ಪ್ರತಿ ದಿನ ಫೋನ್ ಮಾಡ್ತೀಯ ಅಂತ ಗೊತ್ತಾಯ್ತು..ಸೊ ..you are my friend..ಇನ್ನು ಹೋಗಿ ಬನ್ನಿ ...ಈ ಮರ್ಯಾದೆ ಬೇಕಾ ? ಅಂದೇ..

ಆಯಿತು..ಬಿಡೋಲೋ..ಅಂದಳು..

ನೀನು ತುಂಬಾ ಫಾಸ್ಟ್ ಕಣೆ..ಅಂದೇ ನಿನ್ನ ಸಹವಾಸಕ್ಕೆ ಬಿದ್ದೆನಲ್ಲ...ಫಾಸ್ಟ್ ಅಗ್ಲೆಬೇಕಲ್ವಾ.ಅಂದಳು..

ಹೀಗೆ ನಡೆಯುತ್ತಿತ್ತು..ಪ್ರತಿ ದಿನ ನಮ್ಮ ಸಂಭಾಷಣೆ..ಅವಳು ಕಾಲೇಜಿನ ವಿಚಾರ, ಮನೆಯ ವಿಚಾರ, ಅವಳ ಗೆಳತಿಯರ ವಿಚಾರ ಎಲ್ಲ ಹೇಳುತ್ತಾ ಹೋಗುತ್ತಿದ್ದಳು...ನಾನು ನನ್ನ ಆಫೀಸಿನ ವಿಚಾರ ಮನೆಯ ವಿಚಾರ ಎಲ್ಲ ಹೇಳುತ್ತಿದ್ದೆ..

ಮಧ್ಯೆ ಮಧ್ಯೆ ಒಂದಷ್ಟು ಮೆಸೇಜ್ ..ನಾನು ತುಂಬಾ ಬ್ಯುಸಿ ಅಂತ ಗೊತ್ತಿದ್ದರು..ಹೇಯ್ ..ಎಫ್.ಎಂ. ಹಾಕೋ..ಒಳ್ಳೆ ಹಾದು ಬರುತ್ತಿದೆ..ನಿನ್ನ ಇಷ್ಟದ ಹಾದು..ಅನ್ನುತ್ತಿದ್ದಳು..

ನಾನು..ನಾ ಬ್ಯುಸಿ ಇದೀನಿ ಕಣೆ..ಡಿಸ್ಟರ್ಬ್ ಮಾಡಬೇಡ ಅಂದರು ಅವಳು ಕೇಳುತ್ತಿರಲಿಲ್ಲ..

ಒಂದು ದಿನ ನಾ ಮಾತಿನ ಮಧ್ಯೆ ಯಾವುದೊ ಒಂದು ಸಿಂಪಲ್ ಪ್ರಶ್ನೆ ಕೇಳಿದೆ ಅದಕ್ಕೆ ಅವಳು ಉತ್ತರ ಹೇಳಲಿಲ್ಲ..ನಾನಂದೆ..ಆಹಾ ದೇವರೇ..ಏನಪ್ಪಾ ಇವಳಿಗೆ ಏನು ಗೊತ್ತಿಲ್ಲ ಅಂದೇ

ಅದಕ್ಕವಳು...ಹಲೋ ನನಗೂ ಎಲ್ಲ ಗೊತ್ತು...ಅಂದಳು

ನೀನು ತುಂಬಾ ಪೆದ್ದಿ ಅಂತ ನನಗೆ ಗೊತ್ತು ಬಿಡೆ..

ನನ್ನ ಹತ್ರ ವಾದ ಮಾಡಲು ಬರಬೇಡ ಅಂದೇ..ಸರಿ ಹಾಗಾದ್ರೆ ಇವತ್ತಿಂದ ನಿನಗೆ ಒಂದು ಜವಾಬ್ದಾರಿ ಅಂದಳು..

ಅಬ್ಬ ಏನಪ್ಪಾ ಅದು..

ನೀನು ನನ್ನ General Knowledge ನ improve ಮಾಡ್ಬೇಕು ಆಯ್ತಾ..ಅಂದಳು

ನಾನು ಸರಿ ಅಂದೇ..ಅವತ್ತಿಂದ ಶುರು ಆಯಿತು..ನನ್ನ ಜವಾಬ್ದಾರಿ...

ಅವಳಿಗೆ ಗೊತ್ತಿಲ್ಲದ ಒಂದು ಪ್ರಶ್ನೆ ಕೇಳೋದು..ಚೆನ್ನಾಗಿ ರೇಗಿಸೋದು..ನೀನು ಬುದ್ದು, ಪೆದ್ದಿ, ದಡ್ಡಿ, ಏನು ಗೊತ್ತಲ್ಲ ಬರೀ ಮೇಕ್ ಅಪ್ ಮಾಡೋದಷ್ಟೆ ಗೊತ್ತು ಹಾಗೆ ಹೀಗೆ..ಅಂತ...ಅವಳು ಹಾಗೇನಿಲ್ಲ ಅಂತ..ವಾದ ಮಾಡ್ತಾನೆ ಇರುತ್ತಿದ್ದಳು..

ನಮ್ಮಿಬ್ಬರ ಸ್ನೇಹಾ ಹೀಗೆ ಮುಂದುವರೆಯುತ್ತಿತ್ತು..ಅವಳು ಏನೆ suggestion ಬೇಕಾದ್ರೂ ನನ್ನೇ ಕೇಳುತ್ತಿದ್ದಳು..

ಒಂತರ ತುಂಟತನ ಅಮಾಯಕತೆ..ಸ್ವಲ್ಪ ಹೆಚ್ಚೇ ಇತ್ತು...ಪಟ ಪಟನೆ ನಿರಂತರವಾಗಿ ಮಾತನಾಡುತ್ತಲೇ ಇರುತ್ತಿದ್ದಳು..

(....ಮುಂದುವರೆಯುವುದು )

'ಕ್ರೌರ್ಯ'





ಕಾಡಿನ ಹಾದಿಯಲ್ಲಿ ನಡೆಯುತ್ತಿದ್ದಾಗ

ಕಂಡಿತೊಂದು ಹರಿಣಿ

ಇಷ್ಟ ಪಟ್ಟು ನೋಡಲು ನಾ

ಬೆದರಿ ಓಡಲು ಆರಂಬಿಸಿತು

ಅದರ ಗಾಬರಿ ಕಂಡು ನನಗೆ

ಖೆದವೆನಿಸಿ ಮಂಕಾದೆ

ಒಂದಷ್ಟು ದಿನ ಅದೇ ಗುಂಗು

ಕಾರಣ ಹುಡುಕಲು ಪ್ರಯತ್ನಿಸಿದೆ

ಹೊಳೆಯಲಿಲ್ಲ

ಅದರ ಏಕಾಂತಕ್ಕೆ ಭಂಗ ತಂದಿದ್ದೆ

ಎಲ್ಲ ಪ್ರಾಣಿಗಳು ತುಂಬಾ ಸೂಕ್ಷ್ಮವಲ್ಲ ಎನಿಸಿತು

ಮನುಷ್ಯ ಪ್ರಾಣಿಯನ್ನು ಸೇರಿ

ದಿನೇ ದಿನೇ ಕಾಡು ನಾಡಾಗುತ್ತಿದ್ದು

ಎಲ್ಲಿ ಜೀವಿಸಬೇಕು ಈ ಪ್ರಾಣಿಗಳು

ಮನುಷ್ಯನ ಆಸೆಗೆ ಇನ್ನೆಷ್ಟು ಬಲಿ ಬೇಕೋ..

ಹುಲಿಯೂ ಇದಕ್ಕೆ ಹೊರತಲ್ಲ

ಅದರ ಸಂತತಿಯೂ ಇಂದು ಬೆರಳೆಣಿಕೆ

ಪ್ರಕೃತಿ ಕೊಟ್ಟ ವರದ ನಿರಂತರ ದುರುಪಯೋಗ

ಪ್ರಾಣಿ,ಪಕ್ಷಿ,ವನರಾಶಿ

ಮುಂದಿನ ಪೀಳಿಗೆಗೆ ಇತಿಹಾಸವೇನೋ..

ಪ್ರಾಣಿ ತೊಂದರೆ ಕೊಟ್ಟಾಗ

ಮನುಷ್ಯ ಸುಮ್ಮನಿದ್ದಾನೆಯೇ

ಈಗ ಯೋಚಿಸಿ

ಪ್ರಾಣಿ ಸಂಕುಲ ಏನು ಮಾಡಬೇಕು?

Monday, September 26, 2011

'ಅಮ್ಮ'











ತಪ್ಪು ಹೆಜ್ಜೆ ಇಟ್ಟಲ್ಲೆಲ್ಲ ಸರಿ ದಾರಿ ತೋರಿದೆ

ತೊದಲುತ್ತಿದ್ದಾಗ ಮಾತು ಕಲಿಸಿದೆ

ಹಸಿದಾಗ ಉಣಬಡಿಸಿದೆ

ಉತ್ತಮ ಮನುಷ್ಯನಾಗಲು ನೀತಿ ಕಥೆ ಹೇಳಿದೆ

ಬೇಸರದಲ್ಲಿದ್ದಾಗ ನಗಿಸಲು ಪ್ರಯತ್ನಿಸಿದೆ

ಖುಷಿಯಲ್ಲಿದ್ದಾಗ ಸಂಭ್ರಮಿಸಿದೆ

ಮಾತಾಡಲು ಕಲಿತಾಗ ಹಿಗ್ಗಿದೆ

ನಡೆಯಲು ಪ್ರಯತ್ನಿಸಿದಾಗ ಖುಷಿಗೊಂಡೆ

ಶಾಲೆಗೇ ಹೋಗುವಾಗ ಧೈರ್ಯ ತುಂಬಿದೆ

ಬದುಕಿನ ಒಂದೊಂದೇ ಮೆಟ್ಟಿಲು ಹತ್ತಲು ಇಂಬು ನೀಡಿದೆ

ಅನಾರೋಗ್ಯನಾದಾಗ ಗಾಬರಿ ಪಟ್ಟೆ

ಬದುಕಿನ ಪ್ರತಿ ಘಳಿಗೆಯನ್ನು ತಿದ್ದಿ ತೀಡಿದೆ ,

ನಿನ್ನ ಬದುಕಿನುದ್ದಕ್ಕೂ ತ್ಯಾಗಿಯಾದೆ

ಬದುಕನ್ನು ಬರಿಗಾಲಲ್ಲಿ ನಡೆದೇ

ಕಷ್ಟಗಳನ್ನೇ ಹಾಸು ಹೊದ್ದು ಕಳೆದೆ

ಕಡೆಗೆ

ನಾ ಸಾಧನೆಯತ್ತ ಮುಖ ಮಾಡಿದಾಗ

ನಿನ್ನನ್ನು 'ಸುಖಿ' ಆಗಿಸಲೆಂಬ ಆಸೆ ಪಟ್ಟಾಗ

ಅದರ

ಸವಿಯನ್ನು ಸವಿಯಲು ಒಲ್ಲೆ ಎಂಬಂತೆ

ನಿನ್ನ ಕಾಯಕವನ್ನು ಮಾತ್ರ ನಿಸ್ವಾರ್ಥವಾಗಿ ಮುಗಿಸಿ

ನನಗೆ ಆ 'ಭಾಗ್ಯ' ನೀಡದೆ

ನೀ ನನ್ನನ್ನು ಆಗಲಿದೆ ...

ಅಮ್ಮಾ

ನೀ ಏಕೆ ಹೀಗೆ ಮಾಡಿದೆ ...?

Saturday, September 24, 2011

ಬದುಕು-ಬವಣೆ !!!: 'ಪರ್ವಕಾಲ' (ಭಾಗ-2)

ಬದುಕು-ಬವಣೆ !!!: 'ಪರ್ವಕಾಲ' (ಭಾಗ-2): ( 'ಪರ್ವ ಕಾಲ' ದ ಮೊದಲ ಕಂತು ಓದಿದರೆ ಮಾತ್ರ ನಿಮಗೆ ಸಂಪೂರ್ಣ ಚಿತ್ರಣ ದೊರೆಯಬಹುದು..) ಡೆಲ್ಲಿ ಏರ್ ಪೋರ್ಟ್ನನಲ್ಲಿ ಇಳಿಯುತ್ತಿದ್ದ ಹಾಗೆ ಕಾರು ಬಂದು ನಮ್ಮನ್ನು...

ಕೋಮಲಾಂಗಿ ...!








ಬಾಳ ಪಯಣದಲ್ಲಿ

ನಾ ದೋಣಿಯಲ್ಲಿದ್ದೆ

ಹುಟ್ಟು ಹಾಕುತ್ತ ನಾ ಸಾಗುತ್ತಿದ್ದೆ ಮುಂದೆ ಮುಂದೆ

ತಿಳಿ ನೀರ ಆ ನದಿಯಂಚಿನಲ್ಲಿ

ಕಂಡಿತೊಂದು ಮಿಂಚು

ಆ ಮಿಂಚಿನ ಬಳಿ ಹೋದಂತೆಲ್ಲ

ಅದರ ಪ್ರಕಾಶಮಾನದ ಅರಿವಾಗುತ್ತ ಹೋಯ್ತು

ಸುಂದರ ಸುಕೋಮಲ ಮುಖ

ಚೆಂದುಳ್ಳಿ ಚೆಲುವೆಯೇ ನಿಂತಿದ್ದಳಲ್ಲಿ

ಅವಳನ್ನು ನೋಡುತ್ತಿದ್ದ ಹಾಗೆ

ಮಾತು ಮರೆಯಿತು ಎನಗೆ

ಹೋಗಿ ನಿಲ್ಲಿಸಿದೆ ದೋಣಿ

ಅವಳು ಬಂದು ಕೂತಳು

ನಾ ಕೇಳಿದೆ ಎಲ್ಲಿಗೆ ಎಂದು

ಅವಳಂದಳು ನೀ ಇರುವಲ್ಲಿಗೆ ಎಂದು

ನಾ ಮೂಕವಿಸ್ಮಿಥನಾದೆ

ಹೀಗೂ ಉಂಟೆ ಎಂದು..?

ಥಟ್ಟನೆ ಅಮ್ಮ ಬಂದು ಮುಖಕ್ಕೆ ನೀರೆರಚಿ

ಏಳು ಬೆಳಗಾಯಿತೆಂದಳು...!

Tuesday, September 20, 2011

'ಪರ್ವಕಾಲ' (ಭಾಗ-2)






(
'ಪರ್ವ ಕಾಲ' ದಮೊದಲ ಕಂತು ಓದಿದರೆ ಮಾತ್ರ ನಿಮಗೆ ಸಂಪೂರ್ಣ ಚಿತ್ರಣ ದೊರೆಯಬಹುದು..)

ಡೆಲ್ಲಿ ಏರ್ ಪೋರ್ಟ್ನನಲ್ಲಿ ಇಳಿಯುತ್ತಿದ್ದ ಹಾಗೆ ಕಾರು ಬಂದು ನಮ್ಮನ್ನು ಹೋಟೆಲ್ಲಿಗೆ ಕರೆದೊಯ್ದಿತು. ಹೋಗಿ ಫ್ರೆಶ್ ಆಗಿ ಮೊದಲ ದಿನ ಪ್ರವಾಸಿ ಸ್ಥಳಗಳ ಸುತ್ತಾಟ ಆರಂಭವಾಯ್ತು.

ನನಗಂತೂ ಹೋಟೆಲಿನ ರೂಮಿನಲ್ಲಿ ಒಬ್ಬಳೇ ಇದ್ದು ನಿನ್ನೊಂದಿಗೆ ಫೋನಿನಲ್ಲಿ ಮಾತನಾಡೋಣ ಅನ್ನಿಸುತ್ತಿತ್ತು...ಆದರೆ ಅದಕ್ಕೆ ಅವಕಾಶ ಇರಲಿಲ್ಲ..ಅಲ್ಲಿ ಯಾವುದೇ ಪ್ರವಾಸಿ ಸ್ಥಳಕ್ಕೆ ಹೋದರು ಕೈ ಕೈ ಹಿಡಿದು ನಡೆಯುತ್ತಿದ್ದ ಜೋಡಿಗಳೇ ಕಾಣಿಸುತ್ತಿದ್ದರು...ಆಗ ಪ್ರತಿಕ್ಷಣ ನಿನ್ನದ್ದೇ ನೆನಪು..ನೀನು ನನ್ನ ಜೊತೆ ಬಂದಿದ್ದಾರೆ ಎಷ್ಟು ಚೆನ್ನಾಗಿರುತ್ತಿತ್ತು..ಅದು ನಾವಿಬ್ಬರೇ..ಆಹಾ..ನೆನಪಿಸಿಕೊಂಡ ಪ್ರತಿ ಘಳಿಗೆಯೂ ಚೆಂದ..ಚೆಂದ..

ಯಾವತ್ತು ನಿನ್ನ ನೋಡುವೆನು..ಯಾವತ್ತು ನಿನ್ನ ಕೈ ಹಿಡಿದು ನಡೆಯುವೇನೋ ಎಂಬ ಯೋಚನೆಯಲ್ಲೇ ಕಾಲ ಕಳೆದೆ..ಅವತ್ತವತ್ತಿನ ಸುತ್ತಾಟ ಮುಗಿಸಿ ರೂಮಿಗೆ ಬಂದರೆ ನಿನಗೆ ಮೆಸೇಜ್ ಮಾಡಲಿಕ್ಕೆ, ಫೋನ್ ಮಾಡಲಿಕ್ಕೆ..ಸಾಕಷ್ಟು ಸರ್ಕುಸ್ ಮಾಡಬೇಕಿತ್ತು..ಕಾರಣ ಮನೆಯಲ್ಲಾದರೆ ಆ privacy ಇರುತ್ತಿತ್ತು..ಅಲ್ಲಿ ಅಮ್ಮ ಯಾವಾಗಲು ಜೊತೆಯಲ್ಲೇ ಇರುತ್ತಿದ್ದರು..ಒಂದೊಂದು ಮೆಸೇಜಿನ ಹಿಂದೆಯೂ, ಕಾಲ್ ನ ಹಿಂದೂ ನನ್ನ ಶ್ರಮ ಎಷ್ಟಿದೆ ಗೊತ್ತ ರಾಜ..ಅಂದು ನನ್ನತ್ತ ನೋಡಿದಳು..

ನಾನು ಕಣ್ಣಲ್ಲೇ..ಮುಂದುವರೆಸು..ಎಂದೇ..

ಈ ಹತ್ತು ದಿನದಲ್ಲಿ ನಾನು ನನ್ನ ಬದುಕಿನ ಹತ್ತು ವರ್ಷ ಕಳೆದೆನೇನೋ ಎಂಬಂತೆ ಭಾಸವಾಗುತ್ತಿತ್ತು..ಅಪ್ಪ ನಿರಂತರವಾಗಿ ಸ್ಥಳಗಳ ಮಹತ್ವದ ಬಗ್ಗೆ ಹೇಳುತ್ತಿದ್ದಾರೆ ಅಮ್ಮ ಅಲ್ಲಿ ಸಿಗುವ ವಸ್ತುಗಳು, ಬಟ್ಟೆಗಳು, ಇವುಗಳ ಬಗ್ಗೆ ಮಾತನಾಡುತ್ತಿದ್ದಳು..ಇನ್ನು ಅಣ್ಣ ಅಂತು..ಅವನದೇ ಲೋಕ..ಅವನಂತೂ ಯಾವಾಗಲು ಮೆಸೇಜ್ ಮಾಡ್ತಿದ್ದ..ಆದರೆ ನನಗೆ ಆ freedom ಇರಲಿಲ್ಲ ಎಷ್ಟೇ ಅಗಲಿ ಅವನು ಹುಡುಗ ...ಅವನನ್ನು ಹೆಚ್ಚು ಕೇಳುವುದಿಲ್ಲ..ಕೇಳಿದಾಗ ಆಫೀಸ್ ಕಾಲ್..ಮೆಸೇಜ್ ಅಂತ ಏನೋ ಒಂದು ನೆಪ ಹೇಳುತ್ತಿದ್ದ..

ಒಂದು ದಿನ ರಾತ್ರಿ ರಾತ್ರಿ ೨ ಗಂಟೆ ಆದರು ನಿದ್ದೆ ಹತ್ತಿರಲಿಲ್ಲ..ನಾನು ಬ್ಲಾಂಕೆಟ್ ಒಳಗೆ ಮೊಬೈಲ್ ಇಟ್ಟುಕೊಂಡು ಮೆಸೇಜ್ ಟೈಪ್ ಮಾಡ್ತಾ ಇದ್ದೆ...ಅಮ್ಮ ಅದೇಕೆ ಎಚ್ಚರ ಆಯ್ತೋ ಗೊತ್ತಿಲ್ಲ..ಅಷ್ಟೊತ್ನಲ್ಲೇ ಸುಪ್ರಭಾತ, ಸಹಸ್ರನಾಮ ಎಲ್ಲ ಆಯಿತು..

ನಾನು ತಾಜ್ ಮಹಲ್ ನ ಮುಂದೆ ಹೋಗಿ ನಿಂತೇ..ಅಳು ತಡೆಯಲಾಗಲಿಲ್ಲ..ಇಂತಹ ಸ್ಥಳಕ್ಕೆ ನಿನ್ನ ಜೊತೆ ಬಂದಿದ್ದರೆ..'ಆ ರೋಮಾನ್ಟಿಕ್' ಮೊಮೆಂಟ್ಸ್ ಹೇಗಿರುತ್ತಿತ್ತು..ಅಹ..ಮಿಸ್ ಆಯ್ತಲ್ಲ..ಛೆ...ನನ್ನ ರಾಜನ ಕೈ ಹಿಡಿದು ಆ ಪ್ರೇಮ ಸ್ಮಾರಕದಲ್ಲಿ ನಡೆದಾಡುತ್ತ ನಮ್ಮ ಒಲವಿನ ಕಥೆಯನ್ನು ಮೆಲುಕು ಹಾಕುತ್ತ ಜೊತೆ ಹೆಜ್ಜೆ ಹಾಕುತ್ತ ಈ ಲೋಕವನ್ನೇ ಮರೆತು ವಿಹರಿಸುತ್ತಾ...ಹೀಗೆ ಸಾಗುತ್ತಿತ್ತು ನನ್ನ ಯೋಚನಾ ಲಹರಿ...

ಏಯ್ .ಏನ್ ಕನಸು ಕಾಣುತ್ತ ಇದ್ದೀಯ..ಅಮ್ಮ ತಲೆಯ ಮೇಲೆ ಮೊಟಕಿದಾಗಲೇ ನಾನು ಭಾವಲೋಕದಿಂದ ಎಚ್ಚರಗೊಂಡದ್ದು ಕಣೋ..

ಆಗ್ರಾ ದಲ್ಲಿ ನಿನಗಾಗಿ ಒಂದು ಗಿಫ್ಟ್ ತರಲು ಎಲ್ಲರ ಕಣ್ ತಪ್ಪಿಸಿ ಹೋದೆ ಕಣೋ ಅಲ್ಲಿ ನನಗೆ ತುಂಬಾ ಇಷ್ಟವಾಗಿದ್ದು ಈ ಪ್ರೇಮದ ಸಂಕೇತ ಹಾಗು ಆ ಕಲಾಕೃತಿ ಮಾಡಿದ ರೀತಿ ಕಣೋ..ಇದನ್ನ ಪ್ಯಾಕ್ ಮಾಡಲು ಹೇಳಿದಾಗ ಸೇಲ್ಸ್ ಗರ್ಲ್ ಕೇಳಿದಳು..ಕಣೋ..'ಆಪ್ ಕಾ ಪ್ರೇಮಿಕಾ ನಾಮ್ ಕ್ಯಾ ಹಾಯ್ ಮೇಡಂ..ಇಸಕೇ ಊಪರ್ ಆಪ್ ದೊನೊಂಕ ನಾಮ್ ಲಿಖೂ..ಕೇಳಿದಳು..ನಾನು ಇಬ್ಬರ ಹೆಸರು..ಹೇಳಿದೆ..

ಆ ಗಿಫ್ತನ್ನು ಯಾರಿಗೂ ಕಾಣದಂತೆ ಕಾಪಾಡುವಲ್ಲಿ ನನಗೆ ಪ್ರಾಣವೇ ಹೋದಂಗಾಯ್ತು ಕಣೋ..ಎಲ್ಲರೂ ಕೇಳುವರೇ ಏನದು..ಏನದು..ಅಂತ..ಕಡೆಗೂ ಹೇಗೋ ಭದ್ರವಾಗಿ ಎರಡು ..ಮೂರು ಪ್ಯಾಕ್ಕಿಂಗ್ ಮಾಡಿಸಿ ಇಟ್ಟಿದ್ದೆ..ಇದು ನಿನಗೆ ನನ್ನ ಕೈಯಾರೆ ಕೊಡುವ ವರೆಗೂ..ಸಮಾಧಾನವೇ ಇರಲಿಲ್ಲ ಕಣೋ..ಈಗ ಸಮಾಧಾನ ಆಯಿತು..ನೋಡು..ನಕ್ಕಳು..ನಾನು ನಕ್ಕೆ..

ಒಟ್ಟಾರೆ ಮತ್ತೆ ಆದಷ್ಟು ಬೇಗ ನಾನು ನಿನ್ನ ಜೊತೆ ಅದೇ ಸ್ಥಳಗಳಿಗೆ ಹೋಗಬೇಕು ನಿನ್ನ ಜೊತೆ ಹೆಜ್ಜೆ ಹಾಕುತ್ತ..ದಿಲ್ಲಿಯ ಬೀದಿಗಳಲ್ಲಿ ಕೈ ಕೈ ಹಿಡಿದು ನಡೆಯಬೇಕು..ತಾಜ್ ಮಹಲಿನ ಅಂಗಳದಲ್ಲಿ ಕುಳಿತು ನಿನ್ನ ಪ್ರೀತಿಯ ಸವಿಯನ್ನ ಸವಿಯಬೇಕು..ಅಲ್ಲಿ ನಾವು ಪ್ರೇಮ ಪಕ್ಷಿಗಳಂತೆ ಹಾರಬೇಕು...ಆಯ್ತಾ..ಅಂದಳು..
ನಾನು ಅವಳ ಮುಂಗೈಯನ್ನು ಒತ್ತಿ..ಆಯಿತು..ಅಂದೇ..

ಹೀಗೆ ಪಟಪಟನೆ ಮಾತಾಡುತ್ತ ತನ್ನ ಡೆಲ್ಲಿ ಪ್ರವಾಸದ ಅನುಭವ ಹೇಳುತ್ತಾ ಹೇಳುತ್ತಾ ಸಂಜೆಯಾಗೆ ಹೋಯ್ತು..

ಚಿನ್ನು ಸಂಜೆ ಆಯಿತು ಇನ್ನು ನಿನ್ನ ಜೊತೆ ಸಾಕಷ್ಟು ವಿಚಾರಗಳು ನಿನ್ನನ್ನು ಕೇಳೋದಿದೆ..ಆದರೆ ಸಮಯ ಇಲ್ಲ ...ಮನೆಗೆ ಹೋಗಬೇಕು...ಅಮ್ಮ ಕಾಯ್ತಾ ಇರ್ತಾರೆ...ನಾಳೆ ಸಿಕ್ತೀನಿ ಆಯ್ತಾ..ಬೈ ಡಿಯರ್ ...ಅಂದು ಹತ್ತಿರ ಬಂದು ಬುಜದ ಮೇಲೆ ತಲೆ ಇಟ್ಟು..ಕಣ್ಣಲ್ಲೇ ತುಂಟ ತನ ತೋರಿ..ಹೊರಗೆ ಓಡಿದಳು..

ನಾನು ಬಾಗಿಲ ಬಳಿ ನಿಂತು..ಕೈ ಬೀಸುತ್ತಿದ್ದೆ...ಹೃದಯ ಭಾರವಾಗುತ್ತ ಹೋಯಿತು...!!

(ಮುಂದುವರೆಯುವುದು..)

Thursday, September 15, 2011

ಬದುಕು-ಬವಣೆ !!!: ನೀ ಬಂದು ನಿಂತಾಗ ....

ಬದುಕು-ಬವಣೆ !!!: ನೀ ಬಂದು ನಿಂತಾಗ ....: ಸುರಿಯುವ ಮಳೆಯಲಿ ನಡೆಯುತ್ತಾ ಮಳೆಯ ಘಮವನ್ನು ಸವಿಯುತ್ತ ನಿನ್ನೊಂದಿಗಿನ ಘಳಿಗೆಗಳನ್ನು ನೆನೆಯುತ್ತ ನಿನ್ನೋಡನಾಟದ ಸಂಭ್ರಮ ಸ್ಮರಿಸುತ್ತ ನಿನ್ನ ನೆನಪಲ್ಲಿ ನನ್ನ ನಾ...