Pages

Wednesday, September 14, 2011

ನೀ ಬಂದು ನಿಂತಾಗ ....



ಸುರಿಯುವ ಮಳೆಯಲಿ ನಡೆಯುತ್ತಾ

ಮಳೆಯ ಘಮವನ್ನು ಸವಿಯುತ್ತ

ನಿನ್ನೊಂದಿಗಿನ ಘಳಿಗೆಗಳನ್ನು ನೆನೆಯುತ್ತ

ನಿನ್ನೋಡನಾಟದ ಸಂಭ್ರಮ ಸ್ಮರಿಸುತ್ತ

ನಿನ್ನ ನೆನಪಲ್ಲಿ ನನ್ನ ನಾನೇ ಮೈ ಮರೆತಿದ್ದಾಗ

ಥಟ್ಟನೆ

ನಿನ್ನ ಆಗಮನವಾದಾಗ

ಮನದೊಳಗೆ ಸಂಭ್ರಮದ ಮಳೆ ಸುರಿಸಿದೆ

ನಿನ್ನದೇ ನಿರೀಕ್ಷೆಯಲ್ಲಿದ್ದಾಗ

ಆ ನಿರೀಕ್ಷೆ ಇನ್ನು ಹಸಿಯಾಗಿದ್ದಾಗ

ನನ್ನ ನಂಬಿಕೆ ಹುಸಿಯಾಗಲಿಲ್ಲ ಗೆಳತಿ

ಹುಸಿಯಾಗಲಿಲ್ಲ ...!!!

2 comments:

  1. ಹೊರಗೂ ಮಳೆ ಒಳಗೂ ಮಳೆ! ಮನದ ಸ೦ಭ್ರಮವನ್ನು ಸಮರ್ಥವಾಗಿ ಕವನಿಸಿದ್ದೀರಿ ಪ್ರಭಾಕರ್,ಅಭಿನ೦ದನೆಗಳು!

    ReplyDelete
  2. ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು..

    ReplyDelete