
ಸುರಿಯುವ ಮಳೆಯಲಿ ನಡೆಯುತ್ತಾ
ಮಳೆಯ ಘಮವನ್ನು ಸವಿಯುತ್ತ
ನಿನ್ನೊಂದಿಗಿನ ಘಳಿಗೆಗಳನ್ನು ನೆನೆಯುತ್ತ
ನಿನ್ನೋಡನಾಟದ ಸಂಭ್ರಮ ಸ್ಮರಿಸುತ್ತ
ನಿನ್ನ ನೆನಪಲ್ಲಿ ನನ್ನ ನಾನೇ ಮೈ ಮರೆತಿದ್ದಾಗ
ಥಟ್ಟನೆ
ನಿನ್ನ ಆಗಮನವಾದಾಗ
ಮನದೊಳಗೆ ಸಂಭ್ರಮದ ಮಳೆ ಸುರಿಸಿದೆ
ನಿನ್ನದೇ ನಿರೀಕ್ಷೆಯಲ್ಲಿದ್ದಾಗ
ಆ ನಿರೀಕ್ಷೆ ಇನ್ನು ಹಸಿಯಾಗಿದ್ದಾಗ
ನನ್ನ ನಂಬಿಕೆ ಹುಸಿಯಾಗಲಿಲ್ಲ ಗೆಳತಿ
ಹುಸಿಯಾಗಲಿಲ್ಲ ...!!!
ಹೊರಗೂ ಮಳೆ ಒಳಗೂ ಮಳೆ! ಮನದ ಸ೦ಭ್ರಮವನ್ನು ಸಮರ್ಥವಾಗಿ ಕವನಿಸಿದ್ದೀರಿ ಪ್ರಭಾಕರ್,ಅಭಿನ೦ದನೆಗಳು!
ReplyDeleteನಿಮ್ಮ ಅಭಿಪ್ರಾಯಕ್ಕೆ ವಂದನೆಗಳು..
ReplyDelete