Pages

Tuesday, September 6, 2011

''ಪರ್ವ ಕಾಲ"







ಇನ್ನೇನಿದೆ ನನ್ನ ಬದುಕಲ್ಲಿ

ಎಲ್ಲವೂ ಶೂನ್ಯ ....ನಾನು ನನ್ನವರು ಎಂಬ ಮಮಕಾರವೂ ಇಲ್ಲ ನನ್ನವರು ಅಂತ ಯಾರೂ ಇಲ್ಲ

ಹೀಗೊಂದು ಯೋಚನೆ ಸುಳಿಯುತ್ತಲಿತ್ತು...ರೇಡಿಯೋ ದಲ್ಲಿ ಯಾರೋ ಯಾರೋ ಗೀಚಿ ಹೋದಾ..ಹಾಳೂ..ಹಣೆಯಾ ಬರಹ ..ಹುಚ್ಹ ಚಿತ್ರದ ಗೀತೆ ಬರುತ್ತಿತ್ತು...

ಮತ್ತೆ ನೆನಪುಗಳು ಬೇಡ ಬೇಡ ವೆಂದರು ಹಿಂದಕ್ಕೆ ಹೋಗುತ್ತಿತ್ತು..ಎಷ್ಟೇ ಪ್ರಯತ್ನ ಪೂರ್ವಕವಾಗಿ ನಿಗ್ರಹಿಸುವ ಪ್ರಯತ್ನ ಮಾಡಿದರು ಮನಸು ಕೇಳಲಿಲ್ಲ

'ಹೇ ರಾಜ ಹೇಗಿದಿಯೋ.ಚಿನ್ನು ತುಂಬಾ ದಿನ ಆಯಿತು ನಿನ್ನ ನೋಡಿ I miss u dear...ಅಂತ ಮೆಸೇಜ್ ಬಂದಾಗ ನನಗು ಅಷ್ಟೇ ಡಿಯರ್ ಅಂತ ರಿಪ್ಲೈ ಮಾಡಿದೆ. ಅವಳು ಅಪ್ಪ ಅಮ್ಮ ಹಾಗು ಅಣ್ಣನ ಜೊತೆಯಲ್ಲಿ ಡೆಲ್ಲಿಗೆ ಪ್ರವಾಸ ಹೋಗಿದ್ಲು. ೧೦ ದಿನದ ಮಟ್ಟಿಗೆ. ಹೋಗಿ ಇನ್ನು ೩ ದಿನವಷ್ಟೇ ಆಗಿತ್ತು.

ಅಂದು ಬೆಳಿಗ್ಗೆ ಏರ್ ಪೋರ್ಟ್ ಹತ್ತಿರಕ್ಕೆ ಹೋಗಿದ್ದೆ ವಿಶ್ ಮಾಡಲು ಅವಳು ಅಪ್ಪ ಅಮ್ಮ ಅಣ್ಣನ ಕಣ್ ತಪ್ಪಿಸಿ ಬಂದು ನನ್ನ ಭೇಟಿ ಆಗಿ ಸಂಕಟ ಪಡುತ್ತಿದ್ದಳು. ನನಗೆ ಹೋಗಲು ಇಷ್ಟ ಇಲ್ಲ ಆದರೆ ಅಪ್ಪ ಅಮ್ಮ ಕೇಳ್ತಾ ಇಲ್ಲ ಚಿನ್ನು ...ನಾನು ಹೋಗಿ ಬರ್ತೇನೆ.ಡಿಯರ್..ಆಯ್ತಾ..ಅಂತ ಹೇಳುವಾಗ ಅವಳ ಕಣ್ಣಲ್ಲೂ ನೀರು ಜಿನುಗುತ್ತಿತ್ತು ಹಾಗೆ ನಾನ್ನ ಕಣ್ಣಲ್ಲೂ ...ಬರೀ ಹತ್ತು ದಿನ ಚಿನ್ನು ಬಂದು ಬಿಡ್ತೀನಿ...ನೀನು ಹುಷಾರು...ದಿನಾ ಮೆಸೇಜ್ ಮಾಡ್ತೀನಿ ಟೈಮ್ ಸಿಕ್ಕಾಗ ಫೋನ್ ಮಾಡ್ತೀನಿ ಆಯ್ತಾ..ಟೆಕ್ ಕೇರ್ ಡಿಯರ್..i miss u a lot. ಅಂದು ಬೈ ಹೇಳುತ್ತಾ ಹೊರಡುತ್ತಿದ್ದರೆ...ಇಲ್ಲಿ ನನ್ನ ಹೃದಯ ಭಾರವಾಗುತ್ತ ಹೋಯ್ತು.

ಹೀಗೆ ಮೆಸಜ್ ಮಡಿದ ನಂತರ ಯಾರೋ ಬೆಲ್ ಮಾಡಿದ ಹಾಗಾಯ್ತು..ಹೋಗಿ ಬಾಗಿಲು ತೆಗೆದೇ...ಸಾರ್ ನಾವು ಡೈರೆಕ್ಟ್ ಮಾರ್ಕೆಟಿಂಗ್ ಇಂದ...ಅಂದ ಒಬ್ಬ ಸ್ಪುರದ್ರೂಪಿ ಹುಡುಗ..ನೋಡಿ ನಾನು ಬ್ಯುಸಿ ಇದ್ದೇನೆ...please donot disturb me. ಅಂತ ಬಾಗಿಲು ಹಾಕಿದೆ.

ಮತ್ತೆ ಹೋಗಿ ಮೊಬೈಲ್ ಕೈಗೆ ಎತ್ತಿಕೊಂಡೆ ನಂತರ ಮತ್ತೊಂದು ಮೆಸೇಜ್ ಬಂತು. ನಾನು ರಾತ್ರಿ ಫೋನ್ ಮಾಡ್ತೇನೆ ಡಿಯರ್..ಬೈ ಅಂತ..

ಮೊದಲ ಸಲ ಅವಳನ್ನು ನೋಡಿದ್ದು ನನ್ನ ಸ್ನೇಹಿತನ ಮನೆಯಲ್ಲಿ. ಅಂದು ಅಲ್ಲಿ ಯಾವುದೊ ಪೂಜೆ ಇತ್ತು. ನಾನು ಊಟದ ಸಮಯಕ್ಕೆ ಹೋದರಾಯಿತು ಎಂದು ನನ್ನ ಕೆಲಸದಲ್ಲಿ ತೊಡಗಿದ್ದೆ ...ಅವರ ಅಕ್ಕ ಫೋನ್ ಮಾಡಿದರು...ಎಲ್ಲಿದಿಯೋ..ಅಂತ...ಅಕ್ಕ ಬಂದೆ...೧೦ ನಿಮಿಷ...ಅಂದೇ..
..
ಸರಿ ಅಲ್ಲಿ ಹೋಗುವಷ್ಟರಲ್ಲಿ ಒಂದು ಸುಮಧುರ ಧ್ವನಿ ದೇವರ ನಾಮ ಹಾಡುತ್ತಿತ್ತು..ಅರೆ ಇದು ಯಾರ ಧ್ವನಿ ಅಂದುಕೊಂದು ಒಳಹೊಕ್ಕೆ..ಯಾರಿದು...ಎಂದು ನೋಡಿದೆ..
ತಿಳಿಗೆಂಪು ರೇಷ್ಮೆ ಸೀರೆ ಉಟ್ಟು ಕೈ ತುಂಬಾ ಬಳೆ ತೊಟ್ಟು ತನ್ನ ಉದ್ದ ಕೂದಲನ್ನು ಇಳಿ ಬಿಟ್ಟು ಶಿಸ್ತಾಗಿ ಕುಳಿತು ತದೇಕಚಿತ್ತದಿಂದ ಹಾಡುತ್ತಿದ್ದಳು..ಅವಳ ಹಾಡಿಗೆ ಇದೆ ಮನೆಯೇ ತಲೆದೂಗುತ್ತಿತ್ತು..

ಅಹ ಎಷ್ಟು ಚೆನ್ನಾಗಿ ಹಾಡುತ್ತಾಳೆ..ಅಂದರು ಅಂಕಲ್. ಹೌದು ಅಂಕಲ್ ಅಂದೇ.

ಆ ಹಾಡುತ್ತಿದ್ದ ಪರಿಗೆ ನನ್ನೆದೆಯ ವೀಣೆ ನುಡಿಯಲಾರಮ್ಭಿಸಿತು..ಕಿರಣ್ ಯಾರೋ ಇವಳು ಅಂದೇ..ಅದೇ ಕಣೋ ನಮ್ಮ ಪಕ್ಕದ ಮನೆಗೆ ಹೊಸದಾಗಿ ಬಂದಿದ್ದರಲ್ಲ ಅವರ ಮಗಳು ..ಈಗ ತಾನೇ ಸ್ಟಡೀಸ್ ಮುಗಿಸಿದಾಳೆ..ಅಕ್ಕನಿಗೆ ಕ್ಲೋಸು .

ಶುರುವಾಯ್ತು ಅಕ್ಕನಿಗೆ ಪೂಸಿ..ಹೊಡೆಯುವುದು..ಅಕ್ಕ ಪರಿಚಯ ಮಾಡಿಸಿದರು ಇವನು ನನ್ನ ತಮ್ಮನ ಹಾಗೆ..ನನಗೆ ತುಂಬಾ ಅಚು ಮೆಚು..ಸ್ವಲ್ಪ ತುಂಟ ಅಂದರು..ಅವಳು ಮೊದಲ ಸಲ ಹಾಯ್ ..ಅಂದಳು.

ಅವಳಿಗೆ ಬಹಳ ಬೇಗ ಅರ್ಥವಾಗಿತ್ತು..ನನ್ನ ಒದ್ದಾಟ..ಒನ್ ಫೈನ್ ಡೇ...ನಾನು ಹೇಳಿಯೇ ಬಿಟ್ಟೆ ...I love you....

ಒಂದು ದಿನ ಟೈಮ್ ಬೇಕು ...ಕೇಳಿದಳು...ಓ.ಕೆ.ಅಂದೇ..ಅಂದು ರಾತ್ರಿ ನಿದ್ದೆ ಹತ್ತಲಿಲ್ಲ ಢವ ಢವ...ಏನಾಗುತ್ತೋ ಎಂಬ ಅಂಜಿಕೆ..

ಮಾರನೆ ದಿನ ಬೆಳಿಗ್ಗೆ ಎದ್ದು ದೇವಸ್ತಾನಕ್ಕೆ ಹೋದೆ. ದೇವರೇ ವರವ ಕೊಡು ಎಂದು ಬೇಡಿದೆ. ಹೊರಗೆ ಪ್ರಸಾದ ತಿಂತಾ ಕೂತಿದ್ದಾಗ ಮೆಸೇಜ್ ಬಂತು. I

I love you too......dear ...

ಓಡಿ ಹೋಗಿ ಮತ್ತೊಮ್ಮೆ ದೇವರಿಗೆ ಧೀರ್ಘದಂಡ ನಮಸ್ಕಾರ ಹಾಕಿದೆ...ಮತ್ತೆ ಮತ್ತೆ ಗಣೇಶನಿಗೆ ಥ್ಯಾಂಕ್ಸ್ ಹೇಳಿದೆ..

ಶುರುವಾಯಿತು ಪ್ರೇಮ ಪಕ್ಷಿಗಳ ಹಾರಾಟ. ದಿನಕ್ಕೆ ನೋರು ಮೆಸೇಜ್, ಫೋನ್ ಕಾಲ್ ..ವಾರಕ್ಕೊಂದು ಎರಡು ಭೇಟಿ..ಹೊಸ ಬೈಕ್ ತಗೊಂಡ ದಿನ ಅಂತು ಜೊತೇಲಿ ಬಂದು ಪೂಜೆ ಮಾಡಿಸಿ ಒಂದು ಜಾಲಿ ರೈಡ್ ಹೋದ ಮೇಲೆ ...ವಿಶ್ ಮಾಡಿ ಮನೆಕಡೆ ಹೆಜ್ಜೆ ಹಾಕಿದಳು..

ಅದೆಷ್ಟು ಕಡೆ ಸುತ್ತಿದ್ದು..ಸದಾ ಕೈ ಕೈ ಹಿಡಿದು ನಡೆಯುತ್ತಿದ್ದರೆ ..ಅವಳು ಚಿನ್ನು ನಿನ್ನ ಕೈ ಹಿಡಿದು ನಡೆಯುತ್ತಿದ್ದರೆ ಅದೇನೋ ಧೈರ್ಯ..ಭರವಸೆ ಅನ್ನುತ್ತಿದ್ದಳು.. ಅಂದು ಇಬ್ಬರು ಸಂಜೆ ಭೇಟಿಗೆಂದು ಲಾಲ್ ಭಾಗ ಕಡೆ ಹೋಗಿದ್ದಾಗ..ಅಲ್ಲಿ ತನ್ನೆಲ್ಲ ಕನಸುಗಳನ್ನು ನನ್ನೊಡನೆ ಹಂಚಿಕೊಂಡು ಬದುಕಿನುದ್ದಕ್ಕೂ ನಾವು ಹೀಗೆ ಇರಬೇಕು ಕಣೋ ಆಯ್ತಾ..ನನ್ನ ಬಂಗಾರ ನೀನು..ಅಂದಳು.

ಫೋನ್ ರಿಂಗ್ ಆಯಿತು...ಯಾರೂ..ಅಂದೇ..ಸರ್ ನಾವು ಇನ್ಸೂರೆನ್ಸ್ ಕಂಪೆನ್ಯಿಂದ ..ನಿಮಗೆ ಒಳ್ಳೆ ಪಾಲಿಸಿ ಇದೆ..ಅಂದರು...ನನ್ನ ಭಾವಲೋಕಕ್ಕೆ ಭಂಗ ತಂದ ಆ ಹುಡುಗಿಗೆ ಕೋಪ ಬಂದರು ತೋರಿಸಿಕೊಳ್ಳದೆ...sory i am not interested ಅಂತ ಫೋನಿಟ್ಟೆ.

ಈ ಹತ್ತು ದಿನ ಕಳೆಯುವದರೋಳಗಾಗಿ ೧೦ ಯುಗ ಕಳೆದಂತಾಯ್ತು...ಕೊನೆಗೂ ನನ್ನವಳು ಡೆಲ್ಲಿಯಿಂದ ಬಂದಳು..ನನಗೋಸ್ಕರ ಅದ್ಭುತವಾದ ಒಂದು ಗಿಫ್ಟ್ ಕೂಡ ತಂದಳು..ಈ ಹತ್ತು ದಿನಗಳ ಬಗ್ಗೆ ಮನಸೆಲ್ಲ ಇಲ್ಲೇ ಇತ್ತು ಚಿನ್ನು...ನಿನ್ನನ್ನ ತುಂಬಾ ಮಿಸ್ ಮಾಡ್ಕೊಂಡೆ..i love you so much...ಅಂದು ತಾನು ತಂದಿದ್ದ ಗಿಫ್ಟ್ ಕೈಗೆ ಇಟ್ಟಳು. ನನ್ನ ಇಷ್ಟು ದಿನದ ಒಂಟಿತನಕ್ಕೆ ಇಂದು ಇತಿಶ್ರೀ ಹಾಡಿದಳು..

ಕಳೆದ ಹತ್ತು ದಿನಗಳಲ್ಲಿ ತಾನು ಅನುಭವಿಸಿದ ಯಾತನೆ, ವಿರಹ, ಒಂಟಿತನ, ನೋವು ಹೇಳುತ್ತಾ ಹೋದಳು. ಈ ಹತ್ತು ದಿನದಲ್ಲಿ ಅಪ್ಪ ಅಮ್ಮ ಅಣ್ಣ ಜೊತೇಲಿ ಇದ್ದರು ಒಳ್ಳೊಳ್ಳೆ ಪ್ರವಾಸಿ ಸ್ಥಳಗಳು ಇದ್ದರು ಅದೆಲ್ಲವೂ ಶೂನ್ಯ ಅನ್ನಿಸುತ್ತಿತ್ತು..ಕಣೋ...ಈ ಹತ್ತು ದಿನದ ಸಂಕಟ ಹೇಳುತ್ತೇನೆ ಕೇಳು.. ತದೇಕ ಚಿತ್ತದಿಂದ..ಅವಳನ್ನೇ ನೋಡುತ್ತಾ ಕೂತೆ..

ಅವಳು ಹೇಳುತ್ತಾ ಹೋದಳು..!!!

(ಉಳಿದ ಭಾಗ ...ಮುಂದುವರೆಯಲಿದೆ..)

6 comments: