ಬಾಳ ಪಯಣದಲ್ಲಿ
ನಾ ದೋಣಿಯಲ್ಲಿದ್ದೆ
ಹುಟ್ಟು ಹಾಕುತ್ತ ನಾ ಸಾಗುತ್ತಿದ್ದೆ ಮುಂದೆ ಮುಂದೆ
ತಿಳಿ ನೀರ ಆ ನದಿಯಂಚಿನಲ್ಲಿ
ಕಂಡಿತೊಂದು ಮಿಂಚು
ಆ ಮಿಂಚಿನ ಬಳಿ ಹೋದಂತೆಲ್ಲ
ಅದರ ಪ್ರಕಾಶಮಾನದ ಅರಿವಾಗುತ್ತ ಹೋಯ್ತು
ಸುಂದರ ಸುಕೋಮಲ ಮುಖ
ಚೆಂದುಳ್ಳಿ ಚೆಲುವೆಯೇ ನಿಂತಿದ್ದಳಲ್ಲಿ
ಅವಳನ್ನು ನೋಡುತ್ತಿದ್ದ ಹಾಗೆ
ಮಾತು ಮರೆಯಿತು ಎನಗೆ
ಹೋಗಿ ನಿಲ್ಲಿಸಿದೆ ದೋಣಿ
ಅವಳು ಬಂದು ಕೂತಳು
ನಾ ಕೇಳಿದೆ ಎಲ್ಲಿಗೆ ಎಂದು
ಅವಳಂದಳು ನೀ ಇರುವಲ್ಲಿಗೆ ಎಂದು
ನಾ ಮೂಕವಿಸ್ಮಿಥನಾದೆ
ಹೀಗೂ ಉಂಟೆ ಎಂದು..?
ಥಟ್ಟನೆ ಅಮ್ಮ ಬಂದು ಮುಖಕ್ಕೆ ನೀರೆರಚಿ
ಏಳು ಬೆಳಗಾಯಿತೆಂದಳು...!
ಆ ಕ್ಷಣದಲ್ಲಿ ಅಮ್ಮನ ಮೇಲೆ ಕೋಪ ಬ೦ತಾ ಪ್ರಭಾಕರ್? ಯಾವುದೇ ಕಲ್ಪನೆಯನ್ನು ಕವನಿಸುವ ವಿಶೇಷ ಕಲೆ ನಿಮಗೆ ಸಿದ್ಧಿಸಿದೆ.ಅಭಿನ೦ದನೆಗಳು.
ReplyDeletewaaw chandada kavite.
ReplyDeletehan prabhaamani yavare,
avaru ammana mele gurrr
andirtaare.
ಮೊದಲು ಇಬ್ಬರಿಗೂ ಧನ್ಯವಾದಗಳು.ನಿಮ್ಮ ಪ್ರೋತ್ಸಾಹಕ್ಕೆ ಋಣಿ. ಇದು ಕೇವಲ ಕಲ್ಪನೆ ಮಾತ್ರ. ಗುರ್ರ್ ಅನ್ನಲು ನನಗೆ ಆ ಭಾಗ್ಯವಿಲ್ಲ. ಕಾರಣ ಅಮ್ಮ ನನ್ನನಗಲಿ ವರ್ಷಗಳೇ ಕಳೆದಿವೆ..ಆದರು ಅಮ್ಮನ ನೆನಪು ನಿತ್ಯ ನೂತನ..i miss u amma...
ReplyDelete