
ತಪ್ಪು ಹೆಜ್ಜೆ ಇಟ್ಟಲ್ಲೆಲ್ಲ ಸರಿ ದಾರಿ ತೋರಿದೆ
ತೊದಲುತ್ತಿದ್ದಾಗ ಮಾತು ಕಲಿಸಿದೆ
ಹಸಿದಾಗ ಉಣಬಡಿಸಿದೆ
ಉತ್ತಮ ಮನುಷ್ಯನಾಗಲು ನೀತಿ ಕಥೆ ಹೇಳಿದೆ
ಬೇಸರದಲ್ಲಿದ್ದಾಗ ನಗಿಸಲು ಪ್ರಯತ್ನಿಸಿದೆ
ಖುಷಿಯಲ್ಲಿದ್ದಾಗ ಸಂಭ್ರಮಿಸಿದೆ
ಮಾತಾಡಲು ಕಲಿತಾಗ ಹಿಗ್ಗಿದೆ
ನಡೆಯಲು ಪ್ರಯತ್ನಿಸಿದಾಗ ಖುಷಿಗೊಂಡೆ
ಶಾಲೆಗೇ ಹೋಗುವಾಗ ಧೈರ್ಯ ತುಂಬಿದೆ
ಬದುಕಿನ ಒಂದೊಂದೇ ಮೆಟ್ಟಿಲು ಹತ್ತಲು ಇಂಬು ನೀಡಿದೆ
ಅನಾರೋಗ್ಯನಾದಾಗ ಗಾಬರಿ ಪಟ್ಟೆ
ಬದುಕಿನ ಪ್ರತಿ ಘಳಿಗೆಯನ್ನು ತಿದ್ದಿ ತೀಡಿದೆ ,
ನಿನ್ನ ಬದುಕಿನುದ್ದಕ್ಕೂ ತ್ಯಾಗಿಯಾದೆ
ಬದುಕನ್ನು ಬರಿಗಾಲಲ್ಲಿ ನಡೆದೇ
ಕಷ್ಟಗಳನ್ನೇ ಹಾಸು ಹೊದ್ದು ಕಳೆದೆ
ಕಡೆಗೆ
ನಾ ಸಾಧನೆಯತ್ತ ಮುಖ ಮಾಡಿದಾಗ
ನಿನ್ನನ್ನು 'ಸುಖಿ' ಆಗಿಸಲೆಂಬ ಆಸೆ ಪಟ್ಟಾಗ
ಅದರ
ಸವಿಯನ್ನು ಸವಿಯಲು ಒಲ್ಲೆ ಎಂಬಂತೆ
ನಿನ್ನ ಕಾಯಕವನ್ನು ಮಾತ್ರ ನಿಸ್ವಾರ್ಥವಾಗಿ ಮುಗಿಸಿ
ನನಗೆ ಆ 'ಭಾಗ್ಯ' ನೀಡದೆ
ನೀ ನನ್ನನ್ನು ಆಗಲಿದೆ ...
ಅಮ್ಮಾ
ನೀ ಏಕೆ ಹೀಗೆ ಮಾಡಿದೆ ...?
ಅಮ್ಮನ ತು೦ಬು ಪ್ರೀತಿಯನ್ನು ತೆರೆದಿಡುತ್ತಾ .......ಇನ್ನು ಸುಖವಾಗಿರಬೇಕಾದ ಕಾಲಕ್ಕೆ `ಇನ್ನಿಲ್ಲ'ವಾದದ್ದನ್ನು ಮನ ಮಿಡಿಯುವ೦ತೆ ಕವನಿಸಿದ್ದೀರಿ. ಇದೆ ರೀತಿಯ ನೋವನ್ನನುಭವಿಸಿದ ನಾನೂ ಈ ದುಃಖದಲ್ಲಿ ಸಹಭಾಗಿ.
ReplyDelete'ಅಮ್ಮ' ಎಂಬ ಪದವೇ ಒಂದು ಹುಮ್ಮಸ್ಸು, ಉತ್ಸಾಹ ಪ್ರೀತಿ ಮಮತೆ ಕರುಣೆ ....ಹುಟ್ಟಿಸುತ್ತೆ..ಅಂತ ಅಮ್ಮ ದೂರವಾದರೆ ನಿಜಕ್ಕೂ ಬದುಕಿನ ಪ್ರತಿಯೊಂದು ಘಟ್ಟದಲ್ಲೂ ಆ ನೋವು ಕಾಡುತ್ತಿರುತ್ತದೆ..'ಅಮ್ಮ'ನೆ ಅಲ್ಲವೇ ಸ್ಪ್ಪೋರ್ತಿ..? - ಅಮ್ಮನ ಬಗ್ಗೆ ಎಷ್ಟೇ ಬರೆದರೂ ಅದು ಕಮ್ಮಿ ಎನ್ನುವುದು ನನ್ನ ಭಾವನೆ...
ReplyDelete