
ಕಂಡಿತೊಂದು ಹರಿಣಿ
ಇಷ್ಟ ಪಟ್ಟು ನೋಡಲು ನಾ
ಬೆದರಿ ಓಡಲು ಆರಂಬಿಸಿತು
ಅದರ ಗಾಬರಿ ಕಂಡು ನನಗೆ
ಖೆದವೆನಿಸಿ ಮಂಕಾದೆ
ಒಂದಷ್ಟು ದಿನ ಅದೇ ಗುಂಗು
ಕಾರಣ ಹುಡುಕಲು ಪ್ರಯತ್ನಿಸಿದೆ
ಹೊಳೆಯಲಿಲ್ಲ
ಅದರ ಏಕಾಂತಕ್ಕೆ ಭಂಗ ತಂದಿದ್ದೆ
ಎಲ್ಲ ಪ್ರಾಣಿಗಳು ತುಂಬಾ ಸೂಕ್ಷ್ಮವಲ್ಲ ಎನಿಸಿತು
ಮನುಷ್ಯ ಪ್ರಾಣಿಯನ್ನು ಸೇರಿ
ದಿನೇ ದಿನೇ ಕಾಡು ನಾಡಾಗುತ್ತಿದ್ದು
ಎಲ್ಲಿ ಜೀವಿಸಬೇಕು ಈ ಪ್ರಾಣಿಗಳು
ಮನುಷ್ಯನ ಆಸೆಗೆ ಇನ್ನೆಷ್ಟು ಬಲಿ ಬೇಕೋ..
ಹುಲಿಯೂ ಇದಕ್ಕೆ ಹೊರತಲ್ಲ
ಅದರ ಸಂತತಿಯೂ ಇಂದು ಬೆರಳೆಣಿಕೆ
ಪ್ರಕೃತಿ ಕೊಟ್ಟ ವರದ ನಿರಂತರ ದುರುಪಯೋಗ
ಪ್ರಾಣಿ,ಪಕ್ಷಿ,ವನರಾಶಿ
ಮುಂದಿನ ಪೀಳಿಗೆಗೆ ಇತಿಹಾಸವೇನೋ..
ಪ್ರಾಣಿ ತೊಂದರೆ ಕೊಟ್ಟಾಗ
ಮನುಷ್ಯ ಸುಮ್ಮನಿದ್ದಾನೆಯೇ
ಈಗ ಯೋಚಿಸಿ
ಪ್ರಾಣಿ ಸಂಕುಲ ಏನು ಮಾಡಬೇಕು?
ವನ್ಯಜೀವಿಗಳ ಬಗ್ಗೆ ನಿಮ್ಮ ಕಾಳಜಿ ಅನುಕರಣೀಯ. ಸರಳ, ಸು೦ದರ ಕವನಕ್ಕಾಗಿ ಅಭಿನ೦ದನೆಗಳು.
ReplyDeleteನಶಿಸುತ್ತಿರುವ ವನ್ಯ ಜೀವಿಗಳ ಸಂತತಿ ಕಂಡು ನಿಜಕ್ಕೂ ಖೇದವಾಗುತ್ತಿದೆ .....ಮನುಷ್ಯ ಸಂಕುಲದ ಕ್ರೌರ್ಯ ಎಷ್ಟರ ಮಟ್ಟಿಗೆ ಬೆಳೆದಿದೆ ಅನ್ನುವುದು ಬೇಸರದ ಸಂಗತಿ...ಪ್ರತಿಕ್ರಿಯೆಗೆ ವಂದನೆ..
ReplyDelete