ಬರಸಿಡಿಲು ಎದುರಾದರು
ಭುವಿಯು ಮುಳುಗುವಂತೆ ಮಳೆ ಸುರಿದರು
ಅಲ್ಲೋಲ ಕಲ್ಲೋಲವಾದರೂ
ಯಾರೆನಾದರೂ...
ಯಾರು ಹುಟ್ಟಿದರು...ಮರಣಿಸಿದರೂ
ಯಾರು ಅತ್ತರು, ನಕ್ಕರು
ಆಕಾಶವೇ ಮೇಲೆ ಬಿದ್ದರು
ಮನುಷ್ಯ ಎಷ್ಟೇ ಬೊಬ್ಬೆ ಹೊಡೆದರು
ಕಲ್ಲು ಬಸವ ಕೂಗಿದರು
ಕಾಲಜ್ಞಾನ ನಿಜವಾದರೂ
ಮನುಷ್ಯ ಎಷ್ಟೇ ಮುಂದುವರೆದರೂ
ಮೋಡಗಳು ಮುಸುಕಿ ಮಂಕಾದರೂ
ಭುವಿಯು ಬಾಯಿತೆರೆದರೂ
ಶತ ಶತಮಾನಗಳಿಂದ
ನಾ ಹೀಗೆ ಇದ್ದೇನೆ
ಮುಂದೆಯು ಹೀಗೆ ಇರಬೇಕೆಂಬ
ಆಸೆಯು
ನನ್ನಲ್ಲಿ ಹೆಚ್ಚಾಗಿದೆ
ಆದರೆ ಮಾನವನ
ಅಭಿವೃದ್ಧಿಯೆಂಬ
'ವಕ್ರ' ದೃಷ್ಟಿ
ನನ್ನತ್ತ ಬೀಳದಿದ್ದರೆ
ಅವನ
ದುರಾಸೆಗೆ
ನಾ
ಬಲಿಯಾಗದಿದ್ದರೆ
ಮಾತ್ರ
ನಾ
ಹೀಗೆ ಇರಲು ಸಾಧ್ಯ...!!!
No comments:
Post a Comment