Pages

Monday, October 24, 2011

ಸ್ವರ್ಗ




ತಂಪು ನೆರಳನಿಯಲು ನಿಂತಾ ಆ ಸಾಲು ಮರಗಳು

ತಳಿರು ತೋರಣದಂತೆ ಕಂಗೊಳಿಸುವ ಆ ರೆಂಬೆ ಕೊಂಬೆಗಳು

ಹಸಿರ ಹಾಸನ್ನು ಹಾಸಿರುವ ಆ ಪರಿ

ಹೊಚೆಲ್ಲಿ ಸಿಂಗರಿಸಿರುವ ಆ ಭುವಿ

ಭುವಿಯ ಮೇಲೆ ಬೀಳಲು ಪ್ರಯತ್ನಿಸುತ್ತಿರುವ ಸೂರ್ಯ ಕಿರಣ

ಎಲ್ಲೊ ಕೇಳುತ್ತಿರುವ ಕೊಳಲ ನಾದ

ಅದ್ಭುತ ಸುವಾಸನೆ ಬೀರುತ್ತಿರುವ ಹೂಗಳು

ಕೊಳಲ ನಾದದ ಜೊತೆ ಸ್ಪರ್ಧೆಗಿಳಿದ ಕೋಗಿಲೆಯ ಕಂಠ

ಹೂ ಹಾಸಿನ ಮೇಲೆ ನಡೆದರೆ ಹೇಗೋ ಎಂಬ ಚಿಂತೆಯಲ್ಲಿರುವ ಜಿಂಕೆ..

ಇದನ್ನೆಲ್ಲಾ ಕಂಡು ನನಗನಿಸುತ್ತಿರುವುದು

ಒಂದೇ ಭಾವ

ಭೂಲೋಕದ ಸ್ವರ್ಗ ಇದೆ ಅಲ್ಲವೇ..?

-ಹೆಚ್. ಆರ್. ಪ್ರಭಾಕರ್.

3 comments:

  1. ಸ್ವಲ್ಪ ಪಾಲಿಶ್ ಮಾಡಿದ್ರೆ ಇನ್ನೂ ಒಳ್ಳೆ ಕವನ ಆಗ್ತಿತ್ತು.... ಆದ್ರೂ ಒಂಥರಾ ಚೆನ್ನಾಗಿದೆ

    ReplyDelete
  2. nimma prathikriyege dhanyavaadagalu..haagu sindhu chandra ravare..nimma salahegu dhanyavaada .....innu polish maaduva kelasa khandita maaduttene...

    ReplyDelete