Pages

Saturday, October 29, 2011

ನಿರ್ಧಾರ ...!!!



ಧುಮ್ಮಿಕ್ಕುತ್ತಿರುವ

ಆ ಜಲಧಾರೆ ಸಾಕ್ಷಿಯಾಗಿ

ಸುತ್ತಲಿರುವ ಬೆಟ್ಟ ಗುಡ್ಡಗಳ ಮೇಲಾಣೆ

ಆ ಹಸಿರ ಹುಲ್ಲು ಹಾಸಿನ ತಿಳಿನೀರಿನ

ಸುಮ್ಮುಖದಲ್ಲಿ

ನಿನ್ನ ಎದುರು ಕುಳಿತು

ಪ್ರಕೃತಿಯ ಚೆಂದ ಸವಿಯುತ್ತ

ನಿನ್ನ ತುಂಟ ಕಣ್ಣ ನೋಡುತ್ತಾ

ಕೇಶರಾಶಿಯ ಘಮವನ್ನ ಆಸ್ವಾದಿಸುತ್ತಾ

ನಿನ್ನ ಮುಂಗುರುಳ ಇಳಿಜಾರಿನಲ್ಲಿ

ನೀ ಆಟವಾಡುತ್ತ ಮೈಮರೆತಿದ್ದಾಗ

ಗೋರಂಟಿ ಹಚ್ಚಿದ ನಿನ್ನ

ಮೃಧು ಕೈ ಹಿಡಿದು

ಬೆರಳುಗಳ ಜೊತೆ ಆಟವಾಡುತ್ತ

ನಾ

ಇಂದು

ಹೇಳೇ ಹೇಳುತ್ತೇನೆ

ಗೆಳತಿ

ನನ್ನೊಲವಿನ

ಭಾವವನ್ನು ....!

-ಹೆಚ್.ಆರ್.ಪ್ರಭಾಕರ್.

2 comments: