Pages

Sunday, October 16, 2011

ಭರವಸೆ - ಕಳೆದು ಹೋಗಿದೆ


ಗೆಳತಿ..

ಈ ಪ್ರೀತಿ ಹುಟ್ಟಿದ್ದು ನಿನ್ನ ಕಿರುನಗೆಯಿಂದ
ಮೊಳೆತದ್ದು ನಿನ್ನ ಸಾಂಗತ್ಯದಿಂದ
ಹೊಸ ಲೋಕ ಕಂಡದ್ದು
ನಿನ್ನ ಪ್ರೇಮ ಭರಿತ ಮಾತುಗಳಿಂದ
ಆ ಲೋಕದ ಬಗ್ಗೆ ಅರಿವಿಲ್ಲದ
ನನಗೆ ನೀ ಜೊತೆಯಲ್ಲಿ ಕರೆದೊಯ್ದೆ..
ಕರೆದೊಯ್ದು ನೀ 'ಭಾವ' ಯಾನದಲ್ಲಿ
ಕೈ ಹಿಡಿದು ಭರವಸೆಯಾದೆ

ಭರವಸೆಯೇ ಬದುಕಾಗಲಿ ಎಂದು ಎಲ್ಲೊ ಓದಿದ್ದ ನಾನು
ಭರವಸೆಯ ಬಗ್ಗೆ ಪುಳಕಿತನಾಗಿದ್ದೆ
ಭರವಸೆಯೊಂದಿದ್ದರೆ ಸಾಕು ಬದುಕಿಗೆ ಎಂದು ಕೊಂಡೆ
ಭರವಸೆಯ ಸಾರಥ್ಯ ನೀ ವಹಿಸಿದ್ದೆ
ಇನ್ನೇನು ಬೇಕಿತ್ತು ಈ ಬದುಕಿಗೆ
ಬದುಕಿನ ಭೂಮಿಯಿಂದ
ಕನಸಿನ ಆಕಾಶದೆತ್ತರಕ್ಕೆ ಹಾರುತ್ತಲೇ ಇದ್ದೆ

ಹಾರುತ್ತ ಹಾರುತ್ತ ರೆಕ್ಕೆ ಕತ್ತರಿಸಿದಂತಯ್ತು
ಒಮ್ಮೆ ನೋಡಿದೆ
ಪಾತಾಳಕ್ಕೆ ಬೀಳುತ್ತಿರುವ ಭಾವ
ಕೈ ಹಿಡಿಯಲು ನೀ ಇರಲಿಲ್ಲ
ಜಂಗಾಬಲ ಉಡುಗಿಹೊಯ್ತು
ನೆನಪಾಯಿತು ನಿನ್ನ ಭರವಸೆ
'ಕೊನೆಯ ವರೆಗೂ ಹೀಗೆ ಇರೋಣ' ಎಂಬುದು

ಆದರೆ

ಆ ಭರವಸೆಯೇ ಮರೆತ ನೀನು
ಭರವಸೆ ಕಳೆದುಕೊಂಡ ನಾನು ....
ಆ ಭರವಸೆ ಕಳೆದುಕೊಂಡಾಗ
ನಿರಂತರ ಹುಡುಕಾಟದಲ್ಲಿದ್ದೇನೆ
ಕತ್ತಲ ರಾತ್ರಿಯಲಿ ಕಳೆದು ಹೋದ ಮಗುವಿನಂತೆ..!!!

6 comments:

  1. `ಭರವಸೆ'ಯನ್ನು ಉಳಿಸಿಕೊಳ್ಳಲಾಗದ ಗೆಳತಿಯಿ೦ದ ಮೋಸಹೋದ ಭಾವವನ್ನು ಚೆನ್ನಾಗಿ ಕವನಿಸಿದ್ದೀರಿ. ಅಭಿನ೦ದನೆಗಳು.

    ReplyDelete
  2. ಧನ್ಯವಾದಗಳು .....ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...

    ReplyDelete
  3. ಕಳೆದು ಹೊದುದ್ದನ್ನು ಅತ್ಯಾಗಿ ಹುಡುಕಬಾರದಂತೆ...!!
    ಕೊನೆಯ ಪಾರ ಬಹಳವಾಗಿ ಕಾಡುವಂತಿದೆ.....ತುಂಬಾ ಚೆನ್ನಾಗಿದೆ ಕಳೆದು ಹೋದ ಭರವಸೆಯನ್ನು ಪದಗಳಲ್ಲಿ ಕಟ್ಟಿಕ್ಕೊಟ್ಟಿದ್ದು..

    ReplyDelete
  4. ಧನ್ಯವಾದಗಳು...ಮೌನರಾಗ...ಸಿಗುವುದಿಲ್ಲ ಎಂಬ ಸತ್ಯ ಗೊತ್ತಿದ್ದರು ಹುಡುಕಾಟ ನಿಲ್ಲುವುದಿಲ್ಲವಲ್ಲ ...ಅದೇ ಮನುಷ್ಯ ಸಹಜ ಗುಣ..ಏನಂತೀರಿ,,,?

    ReplyDelete
  5. samasye parihaaradondige baruvudu,bharavaseyinda
    mosahoda bage kavanadalli
    tumba chendavaagi kattiddiri.
    abhinandanegalu.

    ReplyDelete