Pages

Wednesday, November 30, 2011

''ಮೌನ''



.........

ಇನ್ನು ಯಾಕೆ ಅವಳು ಕರೆ ಮಾಡಲಿಲ್ಲ.
ನಾನು ನನ್ನ ಮನದ ಇಂಗಿತವನ್ನು ಅವಳಿಗೆ ಹೇಳಲು ತುದಿಗಾಲ ಮೇಲೆ ನಿಂತು ಚಡಪಡಿಸುತ್ತಿದ್ದೆ. ಅವಳು ಹೇಳಿದ್ದಳು ಆಫೀಸಿನಲ್ಲಿ ಕೆಲಸ ಜಾಸ್ತಿ ಇದೆ ಫ್ರೀ ಮಾಡಿಕೊಂಡು ಕರೆ ಮಾಡುತ್ತೇನೆ ಅಂತ. ನಾನು ಆಯಿತು..ಅಂತ ಹೇಳಿ..ಕಾತರದಿಂದ ಕಾಯುತ್ತಿದ್ದೆ.

ಅವಳ ಕರೆ ಬಂತು...
ನಾಳೆ ಭೇಟಿ ಮಾಡೋಣ ಬೆಳಿಗ್ಗೆ ೧೧ ಗಂಟೆಗೆ ಲೇಕ್ ವ್ಯೂ ಪಾರ್ಕ್ ಹತ್ತಿರ ಬಾ ಅಂದಳು. ನಾನು ಓ.ಕೆ. ಅಂದೇ.
ಅವಳ ಕರೆ ಬಂದಾಗ ಮಧ್ಯಾನ ೪.೩೦ ದಾಟಿತ್ತು...ಸಂಜೆ ಆಗುತ್ತಿದ್ದಂತೆ...ಸಮಯವೇ ನಿಂತಂತೆ ಭಾಸವಾಗುತ್ತಿತು. ನನ್ನ ಬದುಕಿನ ಬಹಳ ಮುಖ್ಯವಾದ ಘಳಿಗೆ ನಾಳೆ ೧೧ ಗಂಟೆ. ಆ ಯೋಚನೆ ಎಷ್ಟರ ಮಟ್ಟಿಗೆ ನನ್ನ ಆವರಿಸಿತ್ತು ಅಂದರೆ ರಾತ್ರಿ ಊಟವಿರಲಿ ನಿದ್ದೆಯೂ ಹತ್ತಲಿಲ್ಲ. ಅದೆಷ್ಟು ಸಲ ಎದ್ದು ಸಮಯ ನೋಡಿದೆನು...ಇನ್ನು ಬೆಳಗಾಗಲಿಲ್ಲ...ಛೆ..ಸೂರ್ಯ ಇಂದು ತುಂಬಾ ತಡವಾಗಿ ಬರುವ ಹಾಗಿದೆ...ಅಂತ..ನನ್ನಷ್ಟಕ್ಕೆ ನಾನೇ ಏನೇನೊ ಯೋಚಿಸುತ್ತ ಹಾಸಿಗೆಯ ಮೇಲೆ ನಿದ್ದೆ ಬರದೆ ಹೊರಳಾಡುತ್ತಿದ್ದೆ. ನಿದ್ದೆ ಮಾತ್ರ ಸುಳಿಯುವ ಮಾತೆ ಇಲ್ಲ. ಬೆಳಗಾಯಿತು...ಎದ್ದು...ಬಾತ್ ರೂಮಿನತ್ತ ಓಡಿದೇ ...ನನ್ನ ಕರ್ಮಕ್ಕೆ ಚಳಿ ಕೊರೆಯುತ್ತಿತ್ತು..ನೀರು ಮಾತ್ರ ಬಿಸಿ ಇರಲಿಲ್ಲ..ನಿನ್ನೆ ಸೂರ್ಯನ ದರುಷಣವೇ ಆಗದೆ ಸೋಲಾರ್ ಕೆಲಸ ಮಾಡಿರಲಿಲ್ಲ. ಕಣ್ ಮುಚ್ಚಿಕೊಂಡು ಕೊರೆಯುತ್ತಿದ್ದ ತಣ್ಣೀರು ಮೈಮೇಲೆ ಸುರಿದುಕೊಂಡೆ. ಮೈಯೆಲ್ಲಾ ಗಡ ಗಡ ನಡುಗಲು ಶುರು ಆಯಿತು..ಮತ್ತೊಮ್ಮೆ..ಅದೇ ಕೆಲಸ ಮಾಡಿದೆ..ಚಳಿ ....ಚಳಿ ಚಳಿ ತಾಳೆನು ಈ ಛಳಿಯ ಅಹ...ಹಾಡು ನೆನಪಾಯಿತು..ಅಂತು ಇಂತೂ ತಣ್ಣೀರು ಸ್ನಾನ ಮುಗಿದಿತ್ತು..ನನ್ನ ದೇಹ ನನ್ನ ಕಂಟ್ರೋಲ್ ನಿಂದ ಹೊರಗಿತ್ತು...

ಯಾವ ಬಟ್ಟೆ ಹಾಕೊಳೋದು..ಹುಡುಕಿದೆ ಕಬೋಡ್ ಎಲ್ಲ ಚಲ್ಲ ಪಿಲ್ಲಿ ಮಾಡಿಟ್ಟೆ...ಕೊನೆಗೆ ನೀಲಿ ಜೀನ್ಸ್ ಮತ್ತು ಟಿ ಶರ್ಟ್ ಹಾಕಿಕೊಂಡು ತಲೆಯನ್ನು ತಿದ್ದಿ ತೀಡಿಕೊಂಡು..ಹೊರಟೆ..ಗಂಟೆ..ಇನ್ನು ಒಂಬತ್ತು..
ಇಷ್ಟು ಬೇಗ ಹೊರಟು ಏನು ಮಾಡುವುದು..ತಿಳಿಯಲಿಲ್ಲ..ಆದರು..ಹೊರಟೆ..ಹೋಗಿ ಪಾರ್ಕ್ ಹತ್ತಿರ ಬೈಕ್ ಪಾರ್ಕ್ ಮಾಡಿ ಒಳಗೆ ಅಡಿ ಇಟ್ಟೆ..ಅದು ಬಲಗಾಲು..!

ಎರಡು ಗಂಟೆ ಕಳೆಯುವ ಹೊತ್ತಿಗೆ ಎರಡು ಯುಗ ಕಳೆದಂತೆ ಆಯಿತು. ಪಾರ್ಕಿನ ಗೇಟಿನತ್ತ ನೋಡುತ್ತಲೇ ಇದ್ದೆ..ಅದೆಷ್ಟೋ ಹುಡುಗಿಯರು..ಹುಡುಗರು..ಬರುತ್ತಿದ್ದರು..ಹೋಗುತ್ತಿದ್ದರು..ಇವಳು ಇನ್ನು ಬಂದಿರಲಿಲ್ಲ ಅದೇ ನನ್ನ ಸಂಕಟ ವಾಗಿತ್ತು.
ಗಂಟೆ..ಹನ್ನೊಂದು ಅಯ್ಯಿತು..ಮತ್ತೆ ನೋಡಿದೆ..ಅಲ್ಲೆಲ್ಲೋ ದೂರದಲ್ಲಿ ಬಿಳಿ ಚೂಡಿದಾರ್ ..ಕಾಣಿಸಿತು..ಅವಳೇ..ಅನ್ನಿಸಿತು..ಹತ್ತಿರ ಹತ್ತಿರ ಬರುತ್ತಿದ್ದಳು...ಅವಳೇ ಆಗಿದ್ದಳು..

ನಾನು ಶತ ಪಥ..ಅಂತ ಹೆಜ್ಜೆ ಹಾಕುತ್ತಿದ್ದವನು..ಸುಮ್ಮನೆ ಅವಳನ್ನೇ ನೋಡುತ್ತಾ ನಿಂತೇ..ಜೋರಾಗಿ ಅಡಿ ಇಟ್ಟರೆ ಭೂಮಿಗೆ ನೋವಾಗುತ್ತೇನೋ ಎಂಬಂತೆ..ಹೆಜ್ಜೆ ಮೇಲೆ ಹೆಜ್ಜೆ ಇತ್ತು ನಡೆದು ನನ್ನತ್ತ ಬರುತ್ತಿದ್ದಳು. ನನ್ನ ಎದೆ ರಿಂಗಣಿಸುತ್ತ ಇತ್ತು .

ಹಾಯ್. .ಯಶಸ್..ಅಂದಳು..ನಾನು ಹಾಯ್..ಕಾವ್ಯ..ಅಂದೇ..

ಇಬ್ಬರು ಕುಳಿತು ಕೊಂಡೆವು. ನಾನು ಅವಳನ್ನೇ ತದೇಕಚಿತ್ತದಿಂದ ನೋಡುತ್ತಿದ್ದೆ..ಅವಳ ಅಂದ ಚಂದ ಹಾವ ಭಾವ ರೂಪ ರಾಶಿ ನೋಡಿ ಮಂತ್ರ ಮುಗ್ದನಾಗಿದ್ದೆ..ಶ್ವೇತ ವಸ್ತ್ರಧಾರಿಯಾಗಿ ನನ್ನ ಕಣ್ಣಿಗೆ ಅಪ್ಸರೆ ಹಾಗೆ ಕಾಣುತ್ತಿದ್ದಳು. ಅವಳ ಗುಂಗುರು ಕೂದಲು..ಗಾಳಿಗೆ ಪದೇ ಪದೇ ಹಣೆಗೆ ತಾಗುತ್ತ ಕಿವಿಗೆ ತಾಗುತ್ತ ಇದ್ದಾರೆ ಅವಳು ಮುಂಗುರುಳನ್ನು ಮತ್ತೆ ಮತ್ತೆ ಹಿಂದಕ್ಕೆ ಸರಿಸುವ ಪ್ರಯತ್ನ ಮಾಡುತ್ತಿದ್ದಳು..ಅವಳು ಸುಮ್ಮನೆ ಕುಳಿತಿದ್ದಳು..ನಾನು ಸಹ. ...???
ಅವಳು ಕುಳಿತಿರುವ ಭಂಗಿ ನೋಡಿ ಅಂದು ಕೊಂಡೆ ಸಾಕಷ್ಟು ಸಮಯ ಫ್ರೀ ಮಾಡಿಕೊಂಡೆ ಬಂದಿದ್ದಾಳೆ ಅಂತ..!

ಅವಳ ಮುಖದಲ್ಲಿ ಕುತೂಹಲ ಇತ್ತು..ನನ್ನ ಮನದಲ್ಲಿ ಆತಂಕ ಇತ್ತು..ಅವಳನ್ನೇ ದಿಟ್ಟಿಸಿ ನೋಡುತ್ತಿದ್ದೆ..ಮಾತು..ಹೊರಡಲಿಲ್ಲ..ಅವಳು ಕೇಳಿದಳು..ಏನಾದರು..ಮಾತಾಡು..ನಾ ಮತ್ತೆ ಮತ್ತೆ ಮೌನಿಯಾದೆ. ಅವಳನ್ನು ನೋಡುತ್ತಿದ್ದರೆ ನನಗೆ ಮಾತು ಹೊರಳಲಿಲ್ಲ..ಹಾಗೆ ನೋಡುತ್ತಾ ದಿನ ದೂದಬೇಕು..ಆ ಚೆಲುವಿನ ಖನಿಯನ್ನು ಕಣ್ಣ ತುಂಬಿಕೊಳ್ಳಬೇಕು..ಮನಸು ತುಂಬಿಕೊಳ್ಳಬೇಕು..ಎಂಬ ಆಸೆ ಇತ್ತು...

ಅವಳ ಅಂದ ಚೆಂದ ರೂಪ ಲಾವಣ್ಯ ನನ್ನ ಬೇರೆಯದೇ ಪ್ರಪಂಚಕ್ಕೆ ಕರೆದುಕೊಂಡು ಹೋಗಿತ್ತು..ಇಂತಹ ಸ್ನಿಗ್ಧ ಸೌಂದರ್ಯ ವತಿಯನ್ನು ನಾನು ಪ್ರಪೋಸ್ ಮಾಡಲು ಹೊರಟಿದ್ದೆನಾ..? ನನಗೆ ನಾನೇ ಮತ್ತೆ ಮತ್ತೆ ಕೇಳಿಕೊಂಡೆ...ಅವಳ ನಗುವಿನಲ್ಲಿ ಸಾವಿರ ಬಲ್ಬುಗಳ ಬೆಳಕಿತ್ತು...ಅವಳು ನಕ್ಕಾಗ ಗುಣಿ ಬೀಳುವ ಆ ಕೆನ್ನೆಗ ಅಮೃತ ದ ಅಷ್ಟು..ಶಕ್ತಿ ಇತ್ತು.ಇನ್ನೇನು ಬೇಕು ಈ ಬದುಕಿಗೆ ಭಾವ ಲೋಕದಲ್ಲಿ ತೇಲಿ ಹೋಗುತ್ತಿದ್ದೆ..

೩೦ ನಿಮಿಷವಾಯಿತು..ನಲವತ್ತು ನಿಮಿಷವಾಯಿತು..ಒಂದು ಘಂಟೆಯೂ..ಕಳೆಯಿತು..ನಾ ಮಾತಾಡಲಿಲ್ಲ......ಅವಳು ಆಗಾಗ ಮಾತಾಡುವ ಪ್ರಯತ್ನ ಮಾಡಿದಳು ...ನಾನು ಮೌನಕ್ಕೆ ಶರಣಾಗಿದ್ದೆ ....ಅವಳನ್ನ ನೋಡುವ ಭರದಲ್ಲಿ...ಯಾವುದೊ ಅವ್ಯಕ್ತ ಭಾವ ನನ್ನಲಿ ಮೂಡಿತ್ತು...
.....ಸಮಯ ಮಾತ್ರ ತನ್ನ ಪಾಡಿಗೆ ತಾನು ಮುಂದೆ ಮುಂದೆ ಓಡುತ್ತಿತ್ತು...ಕೋಮಲವಾದ ಅವಳ ಮುಖದಲ್ಲಿ ಅಸಹನೆಯ ಗೆರೆಗಳು ಕಾಣಿಸಿದವು...ನನ್ನ ಮನಸು ಕಂಪಿಸಿದಂತೆ ಆಯಿತು..ಅವಳತ್ತ ನೋಡಿದೆ..ಅವಳು ಕೋಪದಿಂದ ಮೇಲೆದ್ದಳು..ಎದ್ದವಳೇ ಮುಖ ಸಿಂಡರಿಸಿಕೊಂಡು..ಹೇಳಿದಳು..ಇಲ್ಲಿ ಬಂದು ಕುಳಿತು ಒಂದು ಘಂಟೆ ಕಳೆಯಿತು..ಹೀಗೆ ಸುಮ್ಮನೆ ಕುಳಿತು ಕೊಂಡರೆ ಪ್ರಯೋಜನವಿಲ್ಲ..ಏನೋ ಮಾತಾಡಬೇಕು ಅಂತ ಕರೆಸಿ ನೀ ಹೀಗೆ ಸುಮ್ಮನೆ ಕೂತರೆ ನಾ ಏನು ಮಾಡಲಿ...ನನ್ನ ತಾಳ್ಮೆಗೂ ಒಂದು ಮಿತಿಯಿದೆ...

ನನಗಿನ್ನೂ ಕೂರುವಷ್ಟು ತಾಳ್ಮೆಯಿಲ್ಲ...ಗುಡ್ ಬೈ..ಅಂದು ಹೊರಟಳು....

ನಾ ಈಗ ಮೌನ ಮುರಿಯಲೇ ಬೇಕಾದ ಅನಿವಾರ್ಯತೆ..ಬಂದಿತ್ತು..
ಒಂದು ನಿಮಿಷ..ಕಾವ್ಯ..
ಏನು..
ನನ್ನ ತಪ್ಪು ತಿಳಿಬೇಡ ...ನಾನು ನಿನ್ನ ಬಳಿ ಮಾತನಾಡಬೇಕೆಂದು ಕೇಳಿದಾಗ ನೀ ಒಪ್ಪಿದೆ..ಇಲ್ಲಿಯವರೆಗೂ ಬಂದೆ..ಸಂತೋಷ..ಆದರೆ ನಾ ಮೌನವಾಗಿ ಕುಳಿತು ನಿನ್ನೆಡೆಗೆ ನೋಡುತ್ತಿದೇನೆ..ಮಾತನ್ನು ಮಾತ್ರ ಆಡುತ್ತಿಲ್ಲ..ಅದಕ್ಕಾಗಿ ನೀ ಕೋಪಿಸಿಕೊಂಡು ಹೊರಟಿರುವೆ..

ಆದರೆ ನಿನಗೆ ಗೊತ್ತ ಕಾವ್ಯ..ನಾ ನಿನ್ನ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತೇನೆ..ಅದೆಷ್ಟು ನೀ ನನ್ನ ಆವರಿಸಿಕೊಂದಿರುವೆ ಅಂದರೆ ನನ್ನ ಬದುಕಿನ ಪ್ರತಿ ಘಳಿಗೆಯಲ್ಲೂ, ಪ್ರತಿ ಕೆಲಸದಲ್ಲೂ, ಪ್ರತಿ ನೆನಪಿನನ್ನು ನೀ ಇರುವೆ. ಹಾಗಾಗಿ ನೀ ಬಂದ ಸಂಭ್ರಮವನ್ನು ನನ್ನ ಕಣ್ಣುಗಳು ಆನಂದದಿಂದ ನೋಡುತ್ತಾ ಪುಳಕಗೊಳ್ಳುತ್ತಿದ್ದವು.....

ಮತ್ತು ಒಂದು ಸ್ವಾರ್ಥ ಇತ್ತು ಕಾವ್ಯ..ನಾ ಮಾತಾಡಿ ಮುಗಿಸಿದ ತಕ್ಷಣ ನೀ ನಿನ್ನ ಅಭಿಪ್ರಾಯ ಹೇಳಿ (ಅದು ಏನಾದರು ಸರಿ) ಹೊರಡುತ್ತಿಯ....? ಅದನ್ನು ನಾನು ತಡೆದುಕೊಳ್ಳಲಾರೆ ..
ನಾ ಮೌನಿಯಾಗಿದ್ದಷ್ಟು ಹೊತ್ತು ನೀ ಇಲ್ಲೇ ಇರುತ್ತಿಯ ...ನಂತರ ವಿಷಯ ಪ್ರಸ್ತಾಪಿಸೋಣ ಅನ್ನೋ...ಚಿಂತನೆಯಲ್ಲಿ..ನಾ ಮುಳುಗಿದ್ದೆ..
ಆದರೆ ಒಂದಂತು..ಸತ್ಯ...ನಾ ನಿನ್ನ ....ತುಂಬಾ ಪ್ರೀತಿಸುತ್ತೇನೆ...!!!!
.......
......
,,,,ಇಷ್ಟು ಹೇಳಿ ಮತ್ತೆ ಮೌನಕ್ಕೆ ಶರಣಾದೆ ....

ಸಾಕಷ್ಟು ದೂರದಲ್ಲಿ ಇದ್ದ ಕಾವ್ಯ ಳ ಮುಖದಲ್ಲಿದ್ದ ಗಂಭೀರತೆ, ಕೋಪ ಮಾಯವಾಗಿ ಮುಗುಳ್ನಕ್ಕಳು..ಓಡಿ ಬಂದು...ನನ್ನ ಹತ್ತಿರ ನಿಂತಳು..ನಿಂತು ಹೇಳಿದಳು..
ಅಯ್ಯೋ..ಪೆದ್ದು..ನಾನು ಕೂಡ ನಿನ್ನ ಪ್ರೀತಿಸ್ತ ಇದೀನಿ ಕಣೋ..ನೀನು ಬೇಗ ನಿನ್ನ ಬಾಯಿಂದ I Love You..ಅಂತ ಹೇಳಲಿ ಅಂತ ಕಾಯುತ್ತ ಕುಳಿತಿದ್ದೆ..
ನೀ ಮೌನವಾಗಿ ಕುಳಿತದ್ದು ನೋಡಿ ನನ್ನ ಆತಂಕ ಜಾಸ್ತಿ ಆಯಿತು..ಅದಕ್ಕೆ ಕೋಪ ಬಂತು..ಎಲ್ಲಿ ನೀನು ಈ ವಿಷಯ ಪ್ರಸ್ತಾಪ ಮಾಡುವುದಿಲ್ಲವೋ ಅಂತ..,,....ಅದಕ್ಕೆ..ಎದ್ದು ಹೋಗುವ ನಾಟಕ ಮಾಡಿದೆ..ಅಂದಳು...
ಅಂದವಳೇ..
I Love you yashas....ಅಂತ ಓಡಿ ಬಂದು ನನ್ನ ತೆಕ್ಕೆಗೆ ಬಿದ್ದಳು...!!!!

-ಹೆಚ್.ಆರ್.ಪ್ರಭಾಕರ್.

Friday, November 25, 2011

.....ಯಾತನೆ..!!!



ಸೀನ್ - ಒಂದು..
ಹೇಮಂತ್ ಹಾಗು ಮಧುಮತಿ..ಗೆ ನಿಶಿತಾರ್ಥ ಆಗಿತ್ತು.
ಇಬ್ಬರು...ಮನೆಯವರು ನೋಡಿದ ಸಂಭಂಧ ವಾದರೂ ಖುಷಿಯಾಗಿ ಒಪ್ಪಿಕೊಂಡಿದ್ದರು..
ಹಾಯ್...ಮಧು...ಗುಡ್ ಮಾರ್ನಿಂಗ್..
ಗುಡ್ ಮಾರ್ನಿಂಗ್ ಹೇಮಂತ್..
ಹೇಗಿದ್ದೀರ..
ನಾನು ಚೆನ್ನಾಗಿದ್ದೇನೆ..
ನಿನ್ನ ಒಂದು ವಿಷ್ಯ ಕೇಳಲ..
ಹೇಳಿ..
ಇವತ್ತು ಸಂಜೆ..ಶಾಪಿಂಗ್ ಹೋಗೋಣ ಬರ್ತೀಯ..
ನಾ..ಬರಲ್ಲಪ್ಪ..ಅಮ್ಮ ಬೈತಾರೆ...
ಮದುವೆಗೆ ಮುಂಚೆ ಹಾಗೆಲ್ಲ ಹೋಗಬಾರದು ಅಂತ..
ಅಂಟಿನ ನಾನು ಕನ್ವಿನ್ಚೆ ಮಾಡ್ತೀನಿ..ಕಣೆ..ನೀನು ಬರ್ತೀಯ..
....ಆದರು...ಮದುವೆಗೆ ಮುಂಚೆ ಇದೆಲ್ಲ ತಪ್ಪು...ಹೇಮಂತ್..
ಅಯ್ಯೋ...ಅದೆಲ್ಲ ಹಳೆ ಕಾಲ...ಈಗ ಇದೆಲ್ಲ ಕಾಮನ್...ಯಾರ್ ಏನು..ಅಂದ್ಕೊಲ್ಲೋಲ್ಲ..ನೀ ಬಾರೋ ರಾಜ..
ನನ್ನ ಚಿನ್ನ..ಅಲ್ವ..ರನ್ನ..ಅಲ್ವ..ಬಂಗಾರ..ಅಲ್ವ...
ಇದೆಲ್ಲ..ಪೂಸಿ..ಹೊಡೆಯೋದು..ಬೇಡ..ಮೊದಲು..ಅಮ್ಮನ್ನ ಒಪ್ಪಿಸು..ಆಯ್ತಾ..
.....ನಮಸ್ಕಾರ..ಆಂಟಿ..ಹೇಳಪ್ಪ..ಹೇಮಂತ್..
ಮನೇಲಿ ಎಲ್ಲ ಚೆನ್ನಗಿದರ...
ಹಾಂ..ಚೆನ್ನಗಿದರೆ ಆಂಟಿ..
ಏನಪ್ಪಾ ವಿಷಯ..ಏನಿಲ್ಲ..ಆಂಟಿ..ಸಾಯಂಕಾಲ ..ಮಧುನ ಶಾಪಿಂಗ್ ಕರ್ಕೊಂಡ್ ಹೋಗೋಕೆ..ನಿಮ್ಮ ಮನೆಗೆ ಬರೋಣ ಅಂತ ಇದ್ದೆ...ಅದಿಕ್ಕೆ....?????
ಹೇಳಪ್ಪ...ನೀವು ಸ್ವಲ್ಪ ಕಳಿಸಿ ಕೊಡಬೇಕು...?
ಮದುವೆಗೆ ಮುಂಚೆ ಇವೆಲ್ಲ ಚೆನ್ನಾಗಿರೊಲ್ಲ ಅಲ್ಲಪ್ಪ..ನೋಡಿದವರು ಏನೆಂದುಕೊಂಡಾರು..
ಆಂಟಿ...ಪ್ಲೀಸ್ ಆಂಟಿ..
ಆದರು...
.........ಸರಿ...ಹೋಗಿ...ಬೇಗ ಬಂದು...ಬಿಡಿ..ಆಯ್ತಾ..
ಥ್ಯಾಂಕ್ಸ್..ಆಂಟಿ..
ಹೇಯ್..ಮಧು...ನಾನು ಹೇಳಿರಲಿಲ್ವಾ..ಆಂಟಿ ನ ಒಪ್ಪಿಸ್ತೀನಿ..ಅಂತ..
ಇಬ್ಬರು...ಬಂನೆರ್ಗತ್ತ ರಸ್ತೇಲಿ ಇರೋ ಶೂಪೆರ್ ಸ್ಟಾಪ್ ಗೆ ಹೋದರು...ಸಾಕಷ್ಟು..ಶಾಪಿಂಗ್ ಮಾಡಿದರು..ಹಾಗೆ ಕಾಫೀ ಡೇ ಲಿ ಕೂತು...ರೋಮಂತಿಕ್ ಆಗಿ...ಮಾತು ಶುರು..ಮಾಡಿದರು..
ಹೇಯ್..ಮಧು...ಮದ್ವೆ ಆದ ತಕ್ಷಣ...ಸ್ವಿಸ್ಸ್ ಗೆ ಹೋಗೋಣ ಆಯ್ತಾ..
.....ಯಾಕೆ..?
ಯಾಕೆ ಅಂದ್ರೆ..ಹನಿ ಮೂನ್ ಗೆ..
ಚಿ..ತುಂಟ..ಇಗಲೇ..ಅದರ ವಿಷ್ಯ..ಯಾಕೆ ಬಿಡು...
ನೀನು ಇವತ್ತು..ತುಂಬಾ ಚೆನ್ನಾಗಿ ಕಾನಿಸ್ತಿದಿಯ ..ಕಣೆ..
ಹೌದ..ಥ್ಯಾಂಕ್..ಯು..
ಹೀಗೆ ಮಾತಾಡ್ ತಾ ಆಡ್ತಾ..ಸಮಯ ಹೋಗಿದ್ದೆ ಗೊತ್ತಾಗ್ಲಿಲ್ಲ..ಇಬ್ಬರು..ಖುಷಿಯಾಗಿ...ಹೊರಗೆ ಬಂದು..ಮನೆ ಕಡೆ ಹೆಜ್ಜೆ ಹಾಕಿದರು..

ಸೀನ್ - ೨
ಮದುವೆ ಆಗಿ ಒಂದು ವಾರ ಆಗಿದೆ..
ಸ್ವಿಸ್ಸ್ ಗೆ ಹೊರತು ನಿಂತಿದ್ದಾರೆ ಹನಿ ಮೂನ್ ಗೆ..
...ಹುಷಾರು..ಹೇಮಂತ್...ಇಬ್ಬರು ಜೋಪಾನವಾಗಿ ಹೋಗಿ ಬನ್ನಿ..ಅಪ್ಪ,ಅಮ್ಮ,ಅತ್ತೆ,ಮಾವ, ಹೇಳಿದ್ದೆ..ಹೇಳಿದ್ದು..
ನಾದಿನಿ..ಹತ್ತಿರ ಬಂದು ಹ್ಯಾಪಿ ಜರ್ನಿ ಭಾವ..ಮಧು...ಅಂದಳು..
ಥ್ಯಾಂಕ್ಸ್..ಅಂದು..ಇಬ್ಬರು...ಹೊರಟರು...
ಸೀನ್ - ೩
ಆಹಾ...ಎಂತಹ ಅದ್ಭುತ ಪರಿಸರ...ವಾವ್...ಸೂಪರ್...ಹೇಮಂತ್...
ಅಂತು..ಇಂತೂ..ನಿನ್ನ ಕನಸು ಈಡೆರಿಸಿಕೊಂಡೆ...ಕಳ್ಳ..
ಅಹ..ಮತ್ತೆ..ನೀನು ಕಳ್ಳಿ..ಮದುವೆಗೆ ಮುಂಚೆ ...ಎಲ್ಲಿ ಕರೆದರೂ..ಅಮ್ಮ..ಅಮ್ಮ..ಅಮ್ಮ..ಅಂತ ಜಪಾ ಮಾಡ್ತಿದ್ದೆ..ಈಗ..ಕರೀ..ಅಮ್ಮನ್ನ...
ಶು..ಸಾಕು..ಸುಮ್ನಿರೋ..ಇಗದ್ರೆ ನಮಗೆ ಲೈಸೆನ್ಸೆ ಸಿಕ್ಕಿದೆ..ಓ..ಕೆ..ಆಗ..ಹೀಗೆಲ್ಲ..ಓಡಾಡಲಿಕ್ಕೆ..ಅಗ್ತಿತ್ತ..
....ತಾನು..ಬುಕ್..ಮಾಡಿದ..ರೂಮಿಗೆ ಕರೆದೊಯ್ದು...ಖುಷಿಯಾಗಿ ತೋರಿಸಿದ..ಹೇಗಿದೆ..
ಇಲ್ಲಿ..ಇನ್ನು ಒಂದು ವಾರ ನಾನೇ ರಾಜ..ನೀನೆ..ರಾಣಿ..ಅಂದ..
ಶುರುವಾಯ್ತು..ಮಧು..ಚಂದ್ರ...
ಸೀನ್ - ೪
ಹೇಮಂತ್..ನನಗೆ ಇವತ್ತು ಬೋರ್ಡ್ ಮೀಟಿಂಗ್ ಇದೆ..ನೀನು ಹೇಗೂ..ಮನೇಲಿ ಇರ್ತೀಯಲ್ಲ..ಮನೆಯಿಂದ ಆನ್ ಲೈನಿನಲ್ಲಿ ಕೆಲಸ ಅಲ್ವ..ಸ್ವಲ್ಪ..ಸೂಪರ್ ಮಾರ್ಕೆಟ್ ಗೆ ಹೋಗಿ..ದಿನಸಿ...ತರಕಾರಿ..ತಂದ್ಬಿದೂ..ಮನೇಲಿ ಎಲ್ಲ ಖಾಲಿ ಆಗಿದೆ..
....ನಾನು ಬ್ಯುಸಿ..ಕಣೆ..ಆಗೋಲ್ಲ
ಪ್ಲೀಸ್..ಕಣೋ..ನಾನು ರಾತ್ರಿ ಬರೋದು..ತಡಾ ಆಗುತ್ತೆ...ಎಲ್ಲ ತಂದು..ಸ್ವಲ್ಪ..ಅನ್ನ...ಮಾಡಿ ಇದು..ಆಯ್ತಾ..
ಇಲ್ಲ ಅಂದ್ರೆ..ನಾನು ಆಫೀಸಿನಿಂದ ಹೊರಡೋ ಸಮಯದಲ್ಲಿ ಫೋನ್ ಮಾಡ್ತೀನಿ.....ಹೋಟೆಲ್ ನಿಂದ..ತರಿಸು..ಆಯ್ತಾ..
....ಇವನಿಗೆ ವಿಪರೀತ ಕೆಲಸ..ಮನೇಲಿ ಕೂತು..ಕೊಟ್ಟಿರೋ ಪ್ರಾಜೆಕ್ಟ್ ಪೂರ್ತಿ ಮಾಡಕ್ಕೆ ಸಮಯವೇ ಸಾಕಾಗ್ ತಾ ಇಲ್ಲ..
......ಹೇಮಂತ್..ಆಫೀಸಿನಿಂದ..ಹೊರಟೆ...ಹೋಟೆಲ್ ಗೆ ಫೋನ್ ಮಾಡಿ..ಊಟ ಆರ್ಡರ್ ಮಾಡೋ..ಇನ್ನು ಇಪ್ಪತ್ತು..ನಿಮಿಷದಲ್ಲಿ ಅಲ್ಲಿರ್ತೀನಿ..
ಇವನು..ಹೂಂ ಅಂದ...ಕೆಲಸದ ಬ್ಯುಸಿ ಲಿ..ಮರೆತ..
ಸುಸ್ತಾಗಿ ಬಂದು...ಲ್ಯಾಪ್ಟಾಪ್..ಸೋಫಾ ಮೇಲೆ ಹಾಕಿ ಉಸ್ಸಪ್ಪ..ಅಂತ ಕುಳಿತಳು..ಮಧು...
ಸ್ವಲ್ಪ..ಹೊತ್ತು..ಅದ ಮೇಲೆ ಮುಖ ತೊಳೆದು..ಬಾ ಹೇಮಂತ್..ಊಟ ಮಾಡೋಣ..ಅಂತ ಡೈನಿಂಗ್ ಟೇಬಲ್ ಹತ್ರ ಹೋದಳು..ಅವಳಿಗೆ..ತುಂಬಾ ಸುಸ್ತು..ಹಸಿವು..ಒಟ್ಟಿಗೆ ಆಗಿತ್ತು..ಏನಾದ್ರು ತಿನ್ನದಿದ್ದರೆ ಈಗ ತಲೆ ಸುತ್ತಿ ಬೀಳುತ್ತೇನೆ..ಅನ್ನಿಸುವಷ್ಟು..ಸುಸ್ತಾಗಿತ್ತು...
ಎಲ್ಲಿದೆ..ಊಟ..????
ಹಾಂ...ಬಂದೆ..ಅಂದು ಆಕಡೆ ನೋಡಿದ...
ಹೇಮಂತ್..ಎಲ್ಲಿ ಊಟದ ಪಾರ್ಸೆಲ್..ಎಲ್ಲಿ ಇಟ್ಟಿದಿಯ...
ಪಾರ್ಸೆಲ್ಲ..ಯಾವ ಪಾರ್ಸೆಲ್..
ಅಯ್ಯೋ ನಾನು ಈಗ ಫೋನ್ ಮಾಡಿ ಪಾರ್ಸೆಲ್ ತರಿಸು ಅಂದೆನಲ್ಲ..
ಒಹ್..ಮೈ ಗಾಡ್..ಮರೆತೇ ಬಿಟ್ಟೆನಲ್ಲ...ಒಂದು ನಿಮಿಷ..ತಡಿ..ಫೋನ್ ಮಾಡ್ತೀನಿ..ಅಂತ ಫೋನ್ ಮಾಡಿದ..
ಇವಳಿಗೆ..ಹಸಿವು ಪ್ರಾಣ ಹೋಗ್ತಾ ಇತ್ತು..ಕೂಗಾಡಿ..ಕಿರುಚಾಡಿ ತನ್ನ ಕೋಪಾನ..ವ್ಯಕ್ತಪಡಿಸ್ತಾ ಇದಾಳೆ..ಇವನು..ಸುಮ್ಮನೆ ಚಡಪಡಿಸುತ್ತಾ ...ಕಾಯುತ್ತಿದ್ದಾನೆ..ಎಷ್ಟೇ..ಸಾರಿ..ಕೇಳಿದರು...ಅವಳು ಮಾತು ನಿಲ್ಲಿಸುತ್ತಿಲ್ಲ..
ಮದುವೆ ಆದ ಹೊಸದರಲ್ಲಿ..ಎಷ್ಟು ಪ್ರೀತಿ ಇತ್ತು..ಈಗ ಬರಿ ನಿಮಗೆ ಆಫೀಸು..ಕೆಲ್ಸನೆ ಮುಖ್ಯಾ...ನನ್ನ ಮೇಲೆ ಪ್ರೀತಿನೆ ಇಲ್ಲ..ನಾನು ದುಡೀತ ಇದೇನೇ..ಎಷ್ಟು ಅಂತ ಕೆಲಸ ಮಾಡ್ಲಿ...ಕೆಲಸಾನ ಸ್ವಲ್ಪಾನು ಶೇರ್ ಮಾಡೋಲ್ಲ..
......ಮನೆ ಎಲ್ಲ ರಂಪಾ ರಾಮಾಯಣ..ಮಾಡಿಟ್ಟಳು..ಮಧು..ಊಟ ಬಂದ ನಂತರ..ಅವಳೇನೋ ಊಟ ಮಾಡಿದಳು..ಇವನಿಗೆ ...ಊಟ ರುಚಿಸಲಿಲ್ಲ...ಮಂಕಾಗಿ..ಕೂತ..ಇತ್ತೇಚೆಗೆ ಈ ತರ ಸಣ್ಣ ಪುಟ್ಟ ವಿಚಾರಗಳಿಗೂ ಮಧು..ಸಿಡುಕುತ್ತಿದ್ದಳು. ಇವನಿಗೆ ದಿಕ್ಕು ತೋಚದೆ ಏನೆ ಸಮಾಧಾನ ಮಾಡಿದರು..ಅವಳು ಶಾಂತ ಆಗಲಿಲ್ಲ..
ಅವಳು ರೂಮಿಗೆ ಹೋಗಿ ಮಲಗಿಬಿಟ್ಟಳು..,,,ಅವಳ ಮಾತುಗಳು..ಇವನ ಮನಸ್ಸಿಗೆ ತುಂಬಾ ನಾಟಿತ್ತು..ಏನೋ ಕಸಿವಿಸಿ..ಕಳವಳ...ಹಿಂಸೆ..ಯಾತನೆ ಆಗುತ್ತಿತ್ತು.....ಈ ತರಹ ದೃಶ್ಯಗಳು...ನಡೆಯುವುದು...ಕಾಮನ್ ಆಯಿತು...ಆಗಾಗ ಪ್ರೀತಿ ಮೊಲೆತರು..ಮಧ್ಯೆ ಮಧ್ಯೆ ಇಬ್ಬರ ಅಹಂ..ತನ್ನ ಕೆಲಸ ತಾನು ಮಾಡುತ್ತಲೇ ಇತ್ತು..ಇಬ್ಬರು..ಲಕ್ಷಾಂತರ ದುಡಿಯುತ್ತಿದ್ದರು...ಅಷ್ಟೇನೂ ನೆಮ್ಮದಿ ಇರಲಿಲ್ಲ..
ಇದರ ಮಧ್ಯೆ ಇಬ್ಬರು ಮಕ್ಕಳು ಆದರು..ಒಂದು ಗಂಡು..ಒಂದು ಹೆಣ್ಣು...ಶಶಾಂಕ್..ಮತ್ತು..ಶೀತಲ್..
ಸೀನ್ - ಐದು
ಮಕ್ಕಳಿಬ್ಬರು ಕಾಲೇಜು ಮುಗಿಸಿ ಕೆಲಸಕ್ಕೂ ಸೇರಿದರು.. ಮನೆಯಲ್ಲಿ ಮಧುಮತಿ ಮತ್ತು ಹೇಮಂತ್ ಮಾತು ಬಿಟ್ಟು ವರುಷಗಳೇ ಕಳೆದಿದ್ದವು..ಇಬ್ಬರು ಚೆನ್ನಾಗಿ ಕೈತುಂಬಾ ದುಡಿದರು..ಸಹ ಅನ್ಯೋನ್ಯತೆ ಇರಲಿಲ್ಲ..ಇದರಿಂದ ಮಕ್ಕಳ ಮನಸಿನ ಮೇಲೆ ತುಂಬಾ ಪರಿಣಾಮ ಬೀರಿ ಮಕ್ಕಳಿಬ್ಬರು..ತಮ್ಮಲ್ಲಿ ತಾವೇ ಈ ವಿಚಾರವಾಗಿ ಚರ್ಚೆ ಮಾಡಿ ..ಮಾಡಿ ..ನೋವು ಪಟ್ಟುಕೊಳ್ಳುತ್ತಿದ್ದರು...ಇಬ್ಬರು ಮಕ್ಕಳು ಎಷ್ಟೇ ಪ್ರಯತ್ನ ಪಟ್ಟರು..ಅಪ್ಪ ಅಮ್ಮನನ್ನು ಒಂದು ಮಾಡುವಲ್ಲಿ ವಿಫಲರಾಗಿದ್ದರು..ಅವರ ದೇಹಗಳು ಮಾತ್ರ ಒಂದೇ ಮನೇಲಿ ಇದ್ದರು..ಮಾನಸಿಕ ವಾಗಿ ತುಂಬಾ ದೂರವಿದ್ದರು..
ಒಂದು ದಿನ ಹೇಮಂತ್ ಸ್ನೇಹಿತ ರಾಜೀವ್ ಮನೆಗೆ ಬಂದ..ಬಂದವನೇ..ಒಬ್ಬನೇ ಹೇಮಂತ್ ಕುಳಿತಿದ್ದಾಗ..ಹತ್ತಿರ ಬಂದು ಯಾಕೋ ಹೀಗೆ ..ಮಂಕಾಗಿದಿಯ..ಅಂದ..ನಿನಗೆ ಗೊತ್ತಲ ವಿಷಯ..ಮನೇಲಿ ನೆಮ್ಮದಿನೆ ಇಲ್ಲ ಕಣೋ...ಅವಳು ಬದಲಾಗುತ್ತಲೇ ಅಂತ..ಕಾದಿದ್ದೆ ಬಂತು..ಆದರೆ ಬದಲಾಗಲಿಲ್ಲ..ಅಂದ..ಈಗ ಒಂದು ಕೆಲಸ ಮಾಡು ನೀನು..ನಿನ್ನ ಮಗಳು ಮದುವೆ ವಯಸ್ಸಿಗೆ ಬಂದಿದಾಳೆ..ಮೊದಲು ಅವಳ ಮದುವೆ ವಿಚಾರ ಮನೇಲಿ ಪ್ರಸ್ತಾಪ ಮಾಡಿ ನಿನ್ನ ಮಗಳ ಹಾಗು ನಿನ್ನ ಹೆಂಡತಿಯ ಅಭಿಪ್ರಾಯ ಕೇಳು ಆಮೇಲೆ..ಹುಡುಗನ್ನ ಹುಡುಕೋ ಪ್ರಯತ್ನ..ಮಾಡು..ನಾನು ಜೊತೇಲಿ ಇರ್ತೀನಿ..ಆಯ್ತಾ..
ಆಯಿತು..ಕಣೋ..
ಶಶಾಂಕ್, ಶೀತಲ್ ....ಯೆಲ್ಲಿದಿರ..ಏನ್ ಡ್ಯಾಡಿ..ಅಂತ ಇಬ್ಬರು..ಬಂದು ಸೋಫಾ ಮೇಲೆ ಕೂತರು..ಶೀತಲ್ ನಿಮ್ಮ ಅಮ್ಮನ್ನ ಕರೀ..ಅಂದ ..
ಮಮ್ಮಿ..ಮಮ್ಮಿ..ಡ್ಯಾಡಿ..ಕರೀತಿದಾರೆ..ಸ್ವಲ್ಪ..ಬನ್ನಿ..
ಅವಳು..ಮುಖ..ಸಿಂಡರಿಸಿಕೊಂಡು..ಏನಂತೆ..ಕೇಳು..ನಾನಿಲ್ಲಿ..ಅಡುಗೆ ಮನೇಲಿ..ಬ್ಯುಸಿ ಆಗಿದಿನಿ..ಅಂದ್ಲು..
ಶೀತಲ್..ಎದ್ದು..ಬಂದು..ಅಡುಗೆ ಮನೆಗೆ..ಏನೋ ವಿಷ್ಯ ಇರುತ್ತೆ ಬಾ ಮಮ್ಮಿ..ಅಂದು ಅಮ್ಮನನ್ನು ಕರೆದುಕೊಂಡು..ಹಾಲಿನ ಸೋಫಾ ಕಡೆ ಬಂದು..ಅಮ್ಮನ ಪಕ್ಕ ಕುಳಿತಳು..
ನೋಡು..ಶೀತಲ್ ನಿನಗೆ ಮದುವೆ ಮಾಡೋಣ ಅಂತ ನಿರ್ಧಾರ ಮಾಡಿದಿನಿ..ಏನಂತಿಯ..
ಹಾಗೆ ನಿಮ್ಮ ಅಮ್ಮನನ್ನು ಕೇಳು..???
ಅಮ್ಮ...ಮೊದಲು ಗಂಡು ನೋಡಿದಾರ ಕೇಳು..?
ಶೀತಲ್ ನೀನು ಏನು ಹೇಳ್ತೀಯ ಕಂದಾ..??
ಓ.ಕೆ.ಡ್ಯಾಡಿ..ನಿಮ್ಮಿಷ್ಟ..ಅಂದ್ಲು..
ನೋಡು..ನಾಳೆ ಯಿಂದ..ಕೆಲವು ನೆಂಟರಿಷ್ಟರ ಮನೆಗೆ..ಮ್ಯಾರೇಜ್ ಬ್ಯುರೋ ಗೆ ಹೋಗ್ಬೇಕು ನಿನ್ನ ಜಾತಕ ಫೋಟೋ ರೆಡಿ ಮಾಡಿ ನಿಮ್ಮಮ್ಮನ ಕೈ ಗೆ ಕೊಡು..ಅವಳಿಗೆ ಹೇಳಿ ನಾಳೆ ರಜಾ ಹಾಕು ಅಂತ..ಅಂದು ಎದ್ದು ಹೋದ..
ಮಧುಮತಿ..ಕೋಪದಿಂದ..ಇವರೊಬ್ಬರೇ ಹೋದ್ರೆ ಅಗೊಲ್ವೇನೋ..ಸುಮ್ನೆ ನಾನು ರಜಾ ಬೇರೆ ಹಾಕಬೇಕು..ಅಂತ ಗೊಣಗಿಕೊಂಡು ಹೊರನಡೆದಳು.ಇದನ್ನೆಲ್ಲಾ ನೋಡುತ್ತಾ ಸುಮ್ಮನಿದ್ದ..ಶಶಾಂಕ್..ಖಿನ್ನನಾಗಿ ಕುಳಿತಿದ್ದ..
ಶಶಾಂಕ್ ಮತ್ತು..ಶೀತಲ್ ಇಬ್ಬರು ಬಾಲ್ಯದಿಂದಲೂ ಮನೆಯ ಈ ವಾತಾವರಣದಿಂದ ಬಹಳವೇ ಬೇಸತ್ತಿದ್ದರು..ಶಾಲೆ ಕಾಲೇಜುಗಳಲ್ಲಿ ಅಪ್ಪ ಅಮ್ಮ ಬಂದು ಬೇರೆ ಬೇರೆ ಕಾರ್ಯಕ್ರಮ ಗಳಲ್ಲಿ ಒಟ್ಟಾಗಿ ಮಕ್ಕಳ ಜೊತೆ ಬರುತ್ತಿದ್ದರು..ಇಲ್ಲಿ ಮಾತ್ರ ಅಪ್ಪ ಬಂದ್ರೆ ಅಮ್ಮ ಇಲ್ಲ..ಅಮ್ಮ ಬಂದ್ರೆ ಅಪ್ಪ್ಪ ಇಲ್ಲ..ಅಪ್ಪ ಅಮ್ಮ ಇದ್ದರು..ಒಂದು ರೀತಿ ಅನಾಥ ಪ್ರಜ್ಞೆ..ಇವರನ್ನು ಕಾಡುತ್ತಿತ್ತು..
ಮನೆ ಕೆಲಸದ ಅನ್ನಪೂರ್ಣ ಇವರಿಗೆ ಹೆಚ್ಚು..ಊಟ ತಿಂಡಿ ಜೊತೆಗೆ ಪ್ರೀತಿ ಮಮತೆ ಕೊಟ್ಟು ತಾಯಿಯಂತೆ ಪೋಷಿಸಿದ್ದಳು..
ರೂಮಿಗೆ ಹೋದ ಶೀತಲ..ಮನದಲ್ಲೇ ಯೋಚಿಸಿದ್ದಳು..ಸಧ್ಯ ಮದುವೆ ಆಗಿ ಹೋದರೆ ಸಾಕು..ಈ ಜನ್ಮದಲ್ಲಿ ಅಪ್ಪ ಅಮ್ಮ ಖುಷಿಯಗಿರೋದು..ನಾ ಕಾಣೆ ಅಂದುಕೊಂಡು..ತನ್ನ ಜಾತಕ ಹುಡುಕುತ್ತ ಫೋಟೋ ಕೂಡ ಒಂದು ಕವರ್ ಗೆ ಹಾಕಿ..ಅಮ್ಮನ ರೂಮಿನಲ್ಲಿ ಇಟ್ಟಳು..

ಸೀನ್ - ಆರು..

ಶುರುವಾಯಿತು..ವರನ ಹುಡುಕಾಟ..ಒಟ್ಟಿಗೆ ಒಂದೇ ಕಾರಿನಲ್ಲಿ ನೆಂಟರ ಮನೆಗೆ ಹೋದರು..ಕಾರಿನಲ್ಲಿ ಒಬ್ಬರಿಗೊಬ್ಬರು ಮಾತೆ ಆಡುತ್ತಿರಲಿಲ್ಲ..ಅದೇ ನೆಂಟರ ಮನೆಯಲ್ಲಿ..ಮ್ಯಾರೇಜ್ ಬ್ಯುರೋ ದಲ್ಲಿ ಮಾತ್ರ ಪೆಶಾವರಿ ನಗೆ, ಮಾತು ಅಷ್ಟೇ..ದಿನಗಳು ಕಳೆದವು..ಇಬ್ಬರು ಹೀಗೆ ಒಟ್ಟಾಗಿ ಓಡಾಡಿ ತುಂಬಾ ವರುಷಗಳೇ ಕಳೆದಿದ್ದವು..
ವಾರದಲ್ಲಿ ಎರಡು ಮೂರು ದಿನ ಒಟ್ಟಾಗಿ ಹೊರಗೆ ಹೋಗುತ್ತಿದ್ದರು...ದೂರ ದೂರ ಇದ್ದ ಮನಸುಗಳು...ಸ್ವಲ್ಪ ವಾದರೂ ಮಾತನಾಡುವಂತ ಸಂದರ್ಭ ಬಂದಿತ್ತು..ಹೀಗೆ ಇಬ್ಬರು ಹೊರಗೆ ಹೋಗಿ ವರನ ಹುಡುಕಾಟ ಮಾಡುತ್ತಿದ್ದಾಗ ಸಾಕಷ್ಟು ಪ್ರಪೋಸಲ್ ಬಂದರು..ಅದರ ಬಗ್ಗೆ ಇಬ್ಬರು ಚರ್ಚೆ ಮಾಡಲು ಆರಂಬಿಸಿದರು..ಕೆಲವು ಮಧುಮತಿ ಗೆ ಇಷ್ಟ ವಾದರೆ ಕೆಲವು ಇವನಿಗೆ ಇಷ್ಟ ಆಗುತ್ತಿತ್ತು..ಇವರಿಬ್ಬರೇ ಆಯ್ಕೆ..ಶೀತಲ್ ಗೆ ಇಷ್ಟ ಆಗುತ್ತಿರಲಿಲ್ಲ..ಬಹಳ ವರ್ಷಗಳ ನಂತರ ಮನೆಯಲ್ಲಿ ನಾಲ್ಕು ಮಂದಿ ಒಟ್ಟಿಗೆ ಕೂತು ಚರ್ಚೆ ಮಾಡುತ್ತಿದ್ದರು. ಇವರಿಬ್ಬರ ಈ ಓಡಾಟ ಮಧುಮಥಿಯಲ್ಲಿ ಸಾಕಷ್ಟು ಬದಲಾವಣೆ ತಂದಿತ್ತು..ಅವಳು ಈಗ ನೇರವಾಗಿ ಗಂಡನನ್ನು ಮಾತನಾಡಿಸುತ್ತಿದ್ದಳು..ಅದು ಮೊದಲಿನಂತೆ ಪ್ರೀತಿಯಿಂದ..ಇವನು ಅಷ್ಟೇ ಏನೋ ಹೊಸ ಕಲೆ ಬಂದಿತ್ತು ಮನೆಯಲ್ಲಿ..ಹೀಗೆ ನಾಲ್ಕು ಮಂದಿ ಸೇರಿ ವೀಕ್ ಎಂಡ್ ಗೆ ಹೊರಗಡೆ ಹೋಗೋದು ಶುರು ಆಯಿತು..ಮಧ್ಯೆ ಮಧ್ಯೆ ಒಂದಷ್ಟು ಹುಡುಗರ ಫೋಟೋ ಜಾತಕ ಬರುತ್ತಿತ್ತು...
ಹೇಮಂತ್..ಹೇಮಂತ್..ಎಲ್ಲಿದಿಯ..
ಏನು ಮಧು..ಏನ್ ಸಮಾಚಾರ..ರೂಮಿನಿಂದ..ಹೊರಬಂದ..ಹೇಮಂತ್
ನೋಡು..ಇಲ್ಲಿ ಒಂದು ಒಳ್ಳೆ ಪ್ರಪೋಸಲ್ ಬಂದಿದೆ..ನಮ್ಮ ದೂರದ ಸಂಭಂದಿ ಶಾಮಣ್ಣ ಇದಾರಲ್ಲ ಅವರ ಮಗಳು ರಾಧ ಮೇಲ್ ಮಾಡಿದಾಳೆ..ಅವರಿಗೆ ಗೊತ್ತಿರೋ ಹುಡುಗನಂತೆ..ಅಮೇರಿಕಾದಲ್ಲಿ ಇದಾನಂತೆ..ಇಂಜಿನಿಯರ್ ಕೈತುಂಬಾ ಸಂಬಳ ನೋದೊಕ್ಕು ಚೆನ್ನಗಿದಾನೆ...ಅಂತ ಒಂದೇ ಸಮನೆ ಹೇಳುತ್ತಾ ಇದ್ದಳು..ಶೀತಲ್ ಮತ್ತು ಶಶಾಂಕ್ ಕೂಡ ಬಂದು ಸೇರಿಕೊಂಡರು...ಎಲ್ಲರೂ ಫೋಟೋ ನೋಡುತ್ತಾ ಕುಳಿತಿದ್ದರು..
ಅಷ್ಟರಲ್ಲಿ ಶೀತಲ್ ಎದ್ದು ನಿಂತು..ಡ್ಯಾಡಿ..ಅಂದಳು..
ಏನು ಪುಟ್ಟ..ನನಗೆ ಆ ಹುಡುಗ ಇಷ್ಟ ಇಲ್ಲ ಡ್ಯಾಡಿ..ಅಂದಳು..
ಮಧುಮತಿ..ಮತ್ತು ಹೇಮಂತ್..ಇಬ್ಬರಿಗೂ..ಆಶರ್ಯ ..ಯಾಕೆ ಒಳ್ಳೆ ಹುಡುಗ ಅಂತೆ..ನೋಡಲು ಚೆನ್ನಾಗಿದ್ದಾನೆ..ಒಳ್ಳೆ ಕೆಲಸ..ಅಮೆರಿಕ ದಲ್ಲಿ ಬೇರೆ ಇದ್ದಾನೆ..
ಹೀಗೆ ಹೇಳುತ್ತಾ ಇಬ್ಬರು ಅವಳ ಬಳಿಗೆ ಬಂದರು..
.....ಏನಾಯ್ತು..ಶೀತಲ್..ಯಾಕೆ..ಬೇಡ ಅಂತ ಇದ್ದೀಯ..ಇಷ್ಟು ದಿನ ಮದುವೆ ಅಂದ್ರೆ ಖುಷಿಯಾಗಿದ್ದೆ..ಈಗ ಯಾಕೆ ಪುಟ್ಟ ಅಂತ..ಇಬ್ಬರು ಕೇಳುತ್ತಿದ್ದಾಗ..
....
ಅವಳು ಓಡಿ ಬಂದು ಅಪ್ಪ ಅಮ್ಮನನ್ನು ಬಾಚಿ ತಬ್ಬಿ..ಹಿಡಿದು..ಜೋರಾಗಿ ಅಳುತ್ತಿದ್ದಳು..
ಅಪ್ಪ ಅಮ್ಮನಿಗೆ ಗಾಬರಿಯಾಯಿತು..ಯಾಕೋ ಕಂದ..ಏನಾಯ್ತು..ಅಂತ ಇಬ್ಬರು ಅವಳನ್ನು ಸಂತೈಸುತ್ತಿದ್ದರು..ಅವಳು..ಅಳುತ್ತ ಹೇಳಿದಳು..
ಮಮ್ಮಿ ಡ್ಯಾಡಿ..ನಮಗೆ ಬುದ್ದಿ ಬಂದಾಗಿನಿಂದ ನೀವಿಬ್ಬರು ಈ ತರ ಒಟ್ಟಾಗಿ ಮಾತಾಡಿದ್ದು..ಓಡಾಡಿತ್ತು ಪ್ರೀತಿಯಿಂದ ಇದ್ದದ್ದು ನೋಡಿದ್ದೇ ಇಲ್ಲ..ಈಗ ನನ್ನ ಮದುವೆ ವಿಚಾರವಾಗಿ ನೀವು ಓಡಾಡ್ತಾ ಇದ್ದೆರಿ ಇಬ್ಬರು ಒಟ್ಟಾಗಿ ಖುಷಿಯಿಂದ ಇರೋದು ನೋಡಿದ್ದೇ ಇತ್ತೇಚೆಗೆ..ಮನೆಯಲ್ಲಿ ಪ್ರೀತಿಯ ವಾತಾವರಣ ಇಲ್ಲ ಅನ್ನೋ ಕಾರಣಕ್ಕೆ ಬೇಸತ್ತು ನಾನು ಈ ಮದುವೆ ಮಾಡಿಕೊಂಡು ಹೋಗೋಣ ಅಂತ ನಿರ್ಧಾರ ಮಾಡಿ ಈ ಮಧುವೆಗೆ ಒಪ್ಪಿದ್ದೆ..ಈಗ..ನಮ್ಮ ಮನೆಯಲ್ಲಿ ನನಗೆ ನಿಮ್ಮಿಬ್ಬರ ಪ್ರೀತಿ ಸಿಕ್ಕಿರೋವಾಗ, ನೀವಿಬ್ಬರು ಒಂದಾಗಿರೋವಾಗ ನಾನು ಹೇಗೆ ಮದುವೆ ಮಾಡಿಕೊಂಡು ಹೋಗಲಿ.ನನಗೆ ಈಗಲೇ ಮದುವೆ ಬೇಡ ಎಷ್ಟು ಸುಂದರವಾದ ಸಂಧರ್ಬಗಳನ್ನು ನಾನು ಮಿಸ್ ಮಾಡಿ ಕೊಂಡಿದ್ದೇನೆ..ಅಂತಹುದರಲ್ಲಿ ಈಗ ನಾವೆಲ್ಲರೂ ಖುಷಿಯಾಗಿ ಇರೋ ಸಂದರ್ಬದಲ್ಲಿ ನಾನು ನಿಮ್ಮಿಬ್ಬರನ್ನು...ತಮ್ಮನನ್ನು ಬಿಟ್ಟು ನಾನು ಎಳ್ಳು ಹೋಗೋಲ್ಲ..
i love you..mummy...i love you daddy..ಅಂತ ಅತ್ತೆ ಓಡಿ ಬಂದು ಅಪ್ಪ ಅಮ್ಮನನ್ನು ಬಾಚಿ ತಬ್ಬಿದಳು. ಎಲ್ಲರ ಕಣ್ಣಿಂದ ನೀರು ಜಿನುಗುತ್ತಿತ್ತು..
ಮಧುಮತಿ ಹಾಗು ಹೇಮಂತ್ ಇಬ್ಬರು ಪಶ್ಚಾತ್ತಾಪದಿಂದ ಮಕ್ಕಳನ್ನು ನೋಡುತ್ತಾ ಎಂತಹ ಮಧುರಾ ಗಳಿಗೆಗಳನ್ನು ನಾವು ಮಿಸ್ ಮಾಡಿಕೊಂದೆವಲ್ಲ..ಅಂತ ಮರುಗುತ್ತಿದ್ದರು..ಛೆ ಮನೆಯಲ್ಲಿ ಅಪ್ಪ ಅಮ್ಮನ ಜಗಳ ಹೆಚ್ಚಾದರೆ ಮಕ್ಕಳು ಹೇಗೆ ಪ್ರೀತಿಯಿಂದ ವಂಚಿತರಾಗಿ ಅನಾಥ ಪ್ರಜ್ಞೆ ಕಾಡಿ ಮಂಕಾಗುತ್ತಾರೆ..ನಮ್ಮ ನಮ್ಮ ಅಹಂ ನಿಂದ ನಾವು ಮಕ್ಕಳಿಗೆ ನೋವು ಕೊಟ್ಟೆವು ಅಂತ ದುಖಿಸುತ್ತ ಮಧುಮತಿ ಹಾಗು ಹೇಮಂತ್ ಒಬ್ಬರನ್ನೊಬ್ಬರು ಸಾರಿ ಕೇಳುತ್ತ ....ಕಳೆದು ಹೋದ ಮಧುರಾ ಕ್ಷಣಗಳ ಬಗ್ಗೆ ಪರಿತಪಿಸುತ್ತಿದ್ದರು..
...ಆ ಮನೆಯಲ್ಲಿ ಮತ್ತೆ ಸಂತಸದ ದಿನಗಳು ....ಪ್ರಾರಂಭವಾದವು...!!!!!
-ಹೆಚ್.ಆರ್.ಪ್ರಭಾಕರ್.

Tuesday, November 22, 2011

''ಕನವರಿಕೆ''





ಆಗಸದ ತುಂಬೆಲ್ಲ ನಿನ್ನ ಬಿಂಬ
ಭುವಿಯ ತುಂಬೆಲ್ಲ ನಿನ್ನ ಇರುವಿಕೆಯ ಸಂಚಲನ
ನಿನದೆ ನೆನಪಲಿ ನಾ ಹೊರಟೆ
ಆ ದ್ವೀಪಕೆ ...
ನಿನ್ನ ನೆನಪುಗಳು
ಹೆಜ್ಜೆ ಹೆಜ್ಜೆಗೂ ಕಾಡುತ್ತ ಕಾಡುತ್ತ
ನಾ ನಾನಾಗಿರಲಿಲ್ಲ ಗೆಳತಿ..
ನಾ ನಾನಾಗಿರಲಿಲ್ಲ

ತಂಗಾಳಿಯ ತಂಪಿನಲಿ
ನೀಲಿ ವರ್ಣದ ಆ ನೀರಿನಲಿ
ನಿನ್ನ ನೆನಪುಗಳು ಅಲೆಯೇರಿ
ಬರುತಿವೆ ಗೆಳತಿ
ಅಲೆಯೇರಿ ಬರುತಿವೆ..

ನಿನ್ನ ಇರುವಿಕೆಯ ಭಾವ
ನಾ ಪಡೆಯಲು ಯತ್ನಿಸಿ
ಸೋತು ಹೋದೆ ಗೆಳತಿ
ನಾ ಸೋತು ಹೋದೆ ....

ದ್ವೀಪವೇ ಕತ್ತಲಾಗಿ
ಆಕಾಶವೇ ಕಳಚಿಬಿದ್ದು
ಸುನಾಮಿ ಅಪ್ಪಳಿಸಿ ಬಂದಿದ್ದರು
ನಿನ್ನ ನೆನಪು ಮಾತ್ರ
ನನ್ನಿಂದ ದೂರಗುತ್ತಿರಲಿಲ್ಲ ಗೆಳತಿ
ದೂರಾಗುತ್ತಿರಲಿಲ್ಲ....

ಬೀಸುವ ಪ್ರತಿ ಗಾಳಿಯ ಜೊತೆ
ಕದಲುವ ಪ್ರತಿ ಎಲೆಗಳ ಜೊತೆ
ಹಾರುವ ಮರಳ ಕಣದ ಜೊತೆ
ನನ್ನ ಮನ ಸ್ಪರ್ಧೆಗಿಳಿದಿತ್ತು ಗೆಳತಿ
ಸ್ಪರ್ಧೆಗಿಳಿದಿತ್ತು..

ಇಷ್ಟಾದರೂ
ನೀ ಮಾತ್ರ
ನನ್ನ ಕಾಡದ ದಿನವಿರಲಿಲ್ಲ
ಕಾಡದ ಕ್ಷಣವಿರಲಿಲ್ಲ
ಹೊಸ ಭರವಸೆಯೊಂದಿಗೆ ನಾ ಅಲ್ಲಿ
ಕಾಯುತ್ತಲೇ ಇದ್ದೆ..
ನೀ ಬರುವೆ ಎಂದು..
ಆದರೆ
ನೀ
ಬರಲಿಲ್ಲ ಗೆಳತಿ
ನೀ
ಬರಲಿಲ್ಲ..!!!!

-ಹೆಚ್.ಆರ್.ಪ್ರಭಾಕರ್.

(ಮಾಲ್ಡೀವ್ಸ್ ದ್ವೀಪದಲ್ಲಿ ಕಾಡಿದ ನೆನಪು)

Tuesday, November 15, 2011

"ಶಾಂಭವಿ''







ಶಾಸ್ತ್ರಿಗಳು..ಶಾಸಕರ ಮನೆ ಮುಂದೆ ಬಂದು ನಿಂತಾಗ ಬೆಳಿಗ್ಗೆ..೧೦.೩೦ ದಾಟಿತ್ತು..
ಬ್ಯುಸಿ..ಇದಾರೆನೋ..ಅಂದುಕೊಂಡ..ಒಳಗೆ ಅಡಿ ಇಟ್ಟರು

ನಮಸ್ಕಾರ ಸರ್ ....
ನಮಸ್ಕಾರ..ಹೇಳಿ ಶಾಸ್ತ್ರಿಗಳೇ..ಏನ್ ಸಮಾಚಾರ..
ಏನಿಲ್ಲ ಸರ್..ನಿಮ್ ಹತ್ರ ಒಂದು ವಿಷ್ಯ ಮಾತಾಡಬೇಕಿತ್ತು..
ಹೇಳಿ ಶಾಸ್ತ್ರಿಗಳೇ..ಪರವಾಗಿಲ್ಲ..
ನೀವು ಬ್ಯುಸಿ ಇದ್ದಾರೆ ...ಆಮೇಲೆ ಬರ್ತೇನೆ..ಆಯ್ತಾ..
ಪರವಾಗಿಲ್ಲ ಹೇಳಿ..ನಾನು ಫ್ರೀ ಆಗಿ ಇದ್ದೇನೆ..
ಸಾರ್...ಏನಿಲ್ಲ..ನನ್ನ ಮಗಳ ವಿಷಯ ದಲ್ಲಿ ನಿಮ್ಮನ್ನ ಸಹಾಯ ಕೇಳಬೇಕು..ಅಂತ..ಬಂದೆ..
ಹೇಳಿ..
ಸಾರ್ ನಿಮಗೆ ಗೊತ್ತು..ನನ್ನ ಆರ್ಥಿಕ ಪರಿಸ್ತಿತಿ..ತುಂಬಾ ಹಿಂದಿದೆ..
ಅದಕ್ಕೆ..ನನ್ನ ಮಗಳು..ಈಗ ತಾನೇ..ಡಿಗ್ರಿ ಮುಗಿಸಿದಾಳೆ..
ಅದಿಕ್ಕೆ ಅವಳಿಗೆ ಒಂದು ಒಳ್ಳೆ ಕೆಲಸ ಕೊಡಿಸಿದರೆ ತುಂಬಾ ಉಪಕಾರ ಆಗುತ್ತೆ..
ಅಯ್ಯೋ ಅಷ್ಟೇ ತಾನೇ..ಅದನ್ನ ಕೇಳೋಕೆ ಯಾಕೆ ಸಂಕೋಚ..
ನೀವು ನಮ್ಮ ತಂದೆಯವರಿಗೆ ಆತ್ಮೀಯರು..ನಾನು ಚಿಕ್ಕಂದಿನಿಂದ ನಿಮ್ಮನ್ನ ನೋಡ್ತಾ ಇದ್ದೇನೆ..
ನಿಮ್ಮಂತಹವರ ಮಾರ್ಗದರ್ಶನ..ನಮಗೆ ಬೇಕು...
ಅದರಲ್ಲೂ..ನಮ್ಮ ತಂದೆ ಇರೋವರೆಗೂ..ನೀವು ಆಗಾಗ ನಮ್ಮ ಮನೆಗೆ ಬರ್ತಿದ್ರಿ..
ಅವರು ಹೋದ ಮೇಲೆ ಬರೋದೆ ಇಲ್ಲ..
ಈಗ ನೀವು ನಮ್ಮ ಮನೆಗೆ ಬಂದಿರೋದು..ನಿಜಕ್ಕೂ..ನಮ್ಮ ಪುಣ್ಯ..
ನೀವೇನು ಯೋಚನೆ ಮಾಡಬೇಡಿ..ನಿಮ್ಮ ಮಗಳ ಕೆಲಸದ ವಿಷ್ಯ..ನಾನು ನೋಡ್ಕೋತೀನಿ..
ರಾಧ..ಶಾಸ್ತ್ರಿಗಳು..ಬಂದಿದ್ದಾರೆ..ಕುಡಿಯೋಕೆ ಹಾಲು..ತೊಗೊಮ್ಬಾ..
....ತಮ್ಮ ಪಿ.ಏ. ರಾಜೇಶ್ ನ...ಕರೆದರೂ..
ನೋಡಿ ರಾಜೇಶ್....ನಮ್ಮ ಕನ್ಸ್ಟ್ರಕ್ಷನ್ ಕಂಪೆನೀಲಿ..ಶಾಸ್ತ್ರಿಗಳ ಮಗಳಿಗೆ..ಒಂದು ಕೆಲಸ ಕೊಡೋಕೆ ಹೇಳಿ..ಮ್ಯಾನೇಜರ್ ಗೆ..
ಆಯಿತು..ಸರ್..
ಶಾಸ್ತ್ರಿಗಳೇ ...ಸಂತೋಷಾನ..
.....
ಶಾಂಭವಿ..
ಅಂತು..ಶಾಸಕರ..ಕಂಪೆನಿಯಲ್ಲಿ..ಲೆಕ್ಕ ಸಹಾಯಕಿ ಯಾಗಿ ಕೆಲಸ ಪಡೆದಳು..
ಮೊದಲ ದಿನ..
ಆಫೀಸಿಗೆ..ಕಾಲಿಟ್ಟಾಗ ..ಎದೆ..ಢವ..ಢವ..ಅಂತಿತ್ತು..
ನಮಸ್ಕಾರ ಮೇಡಂ..ನಾನು ಲೋಕೇಶ್..ಅಂತ..ಈ ಆಫೀಸ್ ಬಾಯ್..
ನಮಸ್ಕಾರ..
ಮ್ಯಾನೇಜರ್ ಕರೀತಿದರೆ..ಬನ್ನಿ..ಅಂದರು..ಲೋಕೇಶ್..
ನಿಧಾನವಾಗಿ ಒಳಗೆ ಅಡಿ ಇಟ್ಟಳು..ಶಾಂಭವಿ..
ಗುಡ್ ಮಾರ್ನಿಂಗ್ ಸರ್..
ಗುಡ್ ಮಾರ್ನಿಂಗ್..ಬನ್ನಿ ಶಾಂಭವಿ..
ನಿಮ್ಮ ಸಿ.ವಿ. ನೋಡಿದೆ..ಗುಡ್ ...ಒಳ್ಳೆ ಮಾರ್ಕ್ಸ್..ಬೀ ಕಾಂ..ನಲ್ಲಿ..
ಥ್ಯಾಂಕ್..ಊ..ಸರ್..
ತಗೊಳ್ಳಿ..ನಿಮ್ಮ ಆಫರ್ ಲೆಟರ್,.
ಚೆನ್ನಾಗಿ..ಕೆಲಸ ಮಾಡಿ..ಒಳ್ಳೆ ಹೆಸರು..ತೊಗೋಬೇಕು..ಆಲ್ ದಿ ಬೆಸ್ಟ್..
ಥ್ಯಾಂಕ್ ಯು ಸರ್..
.........
ಶಾಸ್ತ್ರಿಗಳ ಮನೆಯ ಬಡತನ ..ಸ್ವಲ್ಪ..ತಹಬದಿಗೆ ಬಂತು..ಎಲ್ಲಾದರು..ಪೂಜೆ, ಕಾರ್ಯಕ್ರಮ ಸಿಕ್ಕಾಗ ಸ್ವಲ್ಪ ದಕ್ಷಿಣೆ ರೂಪದಲ್ಲಿ..ಒಂದಷ್ಟು ಹಣ ಬರುತ್ತಿತ್ತು...ಆದರೆ..ಮೂವರು..ಮಕ್ಕಳನ್ನು..ಸಾಕೋದು..ಅಷ್ಟು..ಸುಲಭವಾಗಿರಲಿಲ್ಲ..
ಇನ್ನಿಬ್ಬರು..ಹೆಣ್ಣು ಮಕ್ಕಳು..ಭವಾನಿ..೯ ನೆ ತರಗತಿಯಲ್ಲಿ ಓದುತ್ತಿದ್ದರೆ..ಶ್ರೀ ಲಕ್ಷ್ಮಿ..ಪಿ.ಯು. ಓದುತ್ತ ಇದ್ದಳು..
ಅಮ್ಮ..ಪೂಜೆ ವ್ರತ..ಅಂತ..ತಮ್ಮದೇ ಲೋಕದಲ್ಲಿ..ಮುಳುಗಿರುತ್ತಿದ್ದರು..
ಇವಳಿಗೆ..ಉದ್ಯೋಗ ಸಿಕ್ಕಿದಾಗಿನಿಂದ..ಮನೆಯಲ್ಲಿ..ಸ್ವಲ್ಪ ಕ್ಶುಷಿ...ಮನೆ..ಮಾಡಿತ್ತು..
ಶಾಸ್ತ್ರಿಗಳಿಗಂತೂ.....ಸ್ವಲ್ಪ..ನೆಮ್ಮದಿ..ಲಭಿಸಿತ್ತು...
.....

ಪಂಕಜ್..ಆಫೀಸಿನಲ್ಲಿ..ತುಂಬಾ ಚುರುಕು..ಮೊದಲ ದಿನದಿಂದಲೂ..ಶಾಂಭವಿ ಯನ್ನು ನೋಡುತ್ತಲೇ..ಇದ್ದ..
...ಸಮಯ ಸಿಕ್ಕಾಗಲೆಲ್ಲ..ಇವಳನ್ನು..ಮಾತನಾಡಿಸುತ್ತಿದ್ದ..ಕಾಲ ಕ್ರಮೇಣ..ಇಬ್ಬರು ಒಳ್ಳೆ ಸ್ನೇಹಿತರಾದರು..ಪ್ರತಿ ದಿನ ಆಫೀಸು ಕೆಲಸ ಮುಗಿದ ಮೇಲೆ..ಒಂದು ಸಣ್ಣ ವಾಕ್..ಮಾಡುತ್ತ ತಮ್ಮ ನೋವು ನಲಿವುಗಳನ್ನು ಹಂಚಿಕೊಳ್ಳುತ್ತಿದ್ದರು..ಬರ್ತಾ..ಬರ್ತಾ..ಒಬ್ಬರನ್ನೊಬ್ಬರು..ಮಾತನಾಡಿಸದೆ ಇದ್ದಾರೆ..ಮನಸು..ಸಮಾಧಾನ ಆಗುತ್ತಿರಲಿಲ್ಲ..
......
ಯಾಕೆ..ನನ್ನ ಮನಸು ಪದೇ..ಪದೇ. ಪಂಕಜ್ ಬಗ್ಗೆ ಚಿಂತೆ ಮಾಡುತ್ತಿದೆ..ಅಂತ ಯೋಚಿಸಿದಾಗ ಉತ್ತರ ಸ್ಪಷ್ಟ..ವಾಗಿತ್ತು..
....
ಇನ್ನೇನು ಇಂದು ನಾನು ನಿನ್ನ ಪ್ರೀತಿಸುತ್ತೇನೆ..ಅಂತ ಹೇಳಬೇಕು..
ಸಂಜೆ ಕಚೇರಿ ಮುಗಿದು..ಇಬ್ಬರು..ಹೊರಟಾಗ..ಪಂಕಜ್..ನೇರವಾಗಿ..ವಿಷಯಕ್ಕೆ...ಬಂದು ಹೇಳಿಬಿಟ್ಟ..
ನಾನು ನಿನ್ನ ಪ್ರೀತಿಸುತ್ತೇನೆ...ಅಂತ..
ಇವಳಿಗೆ..ಒಮ್ಮಿಂದೊಮ್ಮೆಲೆ..ಖುಷಿ..ಸಂಭ್ರಮ..ತನ್ನ ಮನದ ಮಾತನ್ನು ಅವನೇ ಹೇಳಿದ್ದ..
ಒಪ್ಪಿಗೆ..ಸೂಚಿಸಿದಳು..ಶಾಂಭವಿ..
......
ಇವರಿಬ್ಬರ ಇಚ್ಚೆಯಂತೆ..ಶಾಸ್ತ್ರಿಗಳು..ಒಪ್ಪಿಗೆ ಸೂಚಿಸಲಿಲ್ಲ..
ಅವರು..ಕ್ರುಧ್ಹರಾದರು..ನೋಡು ಶಾಂಭವಿ..ಮನೇಲಿ ಇನ್ನು ಇಬ್ಬರು..ತಂಗಿಯರಿದ್ದರೆ..ಜೊತೆಗೆ..ನೀನು ಬೇರೆ ಜಾತಿಯವನನ್ನು..ಮದುವೆ ಆದರೆ..ಸಮಾಜದಲ್ಲಿ..ನನ್ನ ಗೌರವ...ಏನಾಗಬೇಕು..ನಮ್ಮ ಜನ..ಎಷ್ಟು..ಅಡ್ಕೊತಾರೆ..ಗೊತ್ತ..
ಶಾಂಭವಿ..ದಿಕ್ಕು ತೋಚದೆ..ಕುಳಿತಿದ್ದಳು..ಪಂಕಜ್..ಬಂದು..ಪರಿ ಪರಿಯಾಗಿ ಬೇಡಿಕೊಂಡರು..ಶಾಸ್ತ್ರಿಗಳು..ಒಪ್ಪಿರಲಿಲ್ಲ..
...
ಕಚೇರಿಯಲ್ಲಿ..ಕೆಲಸ ಮಾಡುವ ಎಲ್ಲರಿಗೂ..ವಿಷಯ..ಮುಟ್ಟಿತ್ತು...ಇನ್ನು ಶಾಸಕರ ಕಿವಿಗೂ..ಸಹ..
ಒಮ್ಮೆ..ಅಚಾನಕ್ಕಾಗಿ..ಶಾಸಕರು..ಶಾಸ್ತ್ರಿಗಳ ಮನೆಗೆ ಬಂದರು..
ಶಾಸಕರು..ಬಂದ ವಿಷಯ ತಿಳಿದು..ಶಾಸ್ತ್ರಿಗಳು..ಒಮ್ಮೆ..ಗಾಬರಿ..ಆತಂಕ ದಿಂದ ಹೊರಬಂದರು..
ನಮಸ್ಕಾರ..ಸರ್..
ನಮಸ್ಕಾರ ಶಾಸ್ತ್ರಿಗಳೇ..ಅಂತ..ಶಾಸಕರು..ಶಾಸ್ತ್ರಿಗಳ ಕಾಲಿಗೆರಗಿದರು..
ಶತಮಾನಂಭವತಿ...........ಶತಾಯಿಸ್ಪುರುಷ.........................................ಅಂತ..ಆಶೀರ್ವದಿಸಿದರು..
ಉಭಾಯಾಕ್ಹುಶಲೋಪರಿ..ಎಲ್ಲ ಮುಗಿದಮೇಲೆ..ನೇರವಾಗಿ..ಶಾಸಕರು..ವಿಷಯಕ್ಕೆ..ಬಂದರು..
ಶಾಸ್ತ್ರಿಗಳೇ..ನನ್ನ ಕಿವಿಗೆ ಬಿದ್ದ ವಿಷಯ..ನಿಮ್ಮ ಬಳಿ ಮಾತಾಡೋಣ ಅಂತ..ಬಂದೆ..
ಹೇಳಿ..ಸರ್..
ನೋಡಿ ಶಾಸ್ತ್ರಿಗಳೇ..ನಿಮ್ಮ ಅನುಭವಾ,ಪಾಂಡಿತ್ಯ, ಜ್ಞಾನ ಇವೆಲ್ಲದರ ಮುಂದೆ..ನಾನೆಷ್ಟರವನು..ನೀವು ವೇದ, ಉಪನಿಷತ್ತು..ಎಲ್ಲವನ್ನು ಓದಿಕೊಂಡವರು..ಆದರು..ನಿಮ್ಮ ಮುಂದೆ ಈ ವಿಷಯ ಹೇಳೋದು..ನನಗೆ ಸ್ವಲ್ಪ..ಸಂಕೋಚವೇ ಆಗುತ್ತೆ..
ಹೇಳಿ...ಸರ್..ಪರವಾಗಿಲ್ಲ..
ನೋಡಿ ಶಾಸ್ತ್ರಿಗಳೇ ಇವತ್ತು ಸಮಾಜದಲ್ಲಿ ಅದೆಷ್ಟೋ ಉದಾಹರಣೆ ನೋಡಿದ್ದೇವೆ ..ಒಂದೇ ಕುಲದಲ್ಲಿ, ಒಂದೇ ಕುಟುಂಬದಲ್ಲಿ ಮದುವೆ ಆದವರು..ಸಹ..ಬೇರೆ ಆಗಿರೋದು..ಕಚ್ಚಾಟ ಜಗಳ..ವಿಚ್ಚೇದನ..ಹೀಗೆ..
...ಕಾಲ ಕೂಡ ಬದಲಾಗಿದೆ..ನಮಗೆ..ನಮ್ಮ ಮಕ್ಕಳ ಸಂತೋಷಕ್ಕಿಂತ..ಇನ್ನೇನು..ಬೇಕು..
ಆ ಹುಡುಗ ಕೂಡ ನನಗೆ ಗೊತ್ತಿರುವವನು..ಸಂಸ್ಕಾರವಂತ..ಜಾತಿ ಬೇರೆ ಅನ್ನೋ ಕಾರಣಕ್ಕೆ..ನೀವು ಈ ಮದುವೆ ನಿಲ್ಲಿಸುವುದು..ಸರಿಯೇ..?
ಅಲ್ಲ ಸರ್..ಅದು....
ನೋಡಿ ಶಾಸ್ತ್ರಿಗಳೇ..ಭಗವದ್ಗೀತೆ ಪ್ರವಚನದಲ್ಲಿ ನೀವೇ ಒಮ್ಮೆ ಹೇಳಿದ್ದಿರಿ...''ಜನ್ಮತಹ..ಬ್ರಾಹ್ಮಣ್ಯಕ್ಕಿಂತ..ಕರ್ಮತಹ..ಭ್ರಾಹ್ಮಣ್ಯ. ಅಂತ..ನಾವು ಮಾಡುವ ಕರ್ಮವು ಸಹ ನಮ್ಮ ಕುಲವನ್ನು ನಿರ್ಧರಿಸುತ್ತೆ..ಅಂತ...ಅಂದು..ನನ್ನ ತಂದೆಯ ಜೊತೆ ನೀವು ಈ ವಿಚಾರವಾಗಿ..ಚರ್ಚೆ..ಕೂಡ ಮಾಡಿದ್ದ್ರಿ.ನಾನು ಅಂದು..ಅವರ ಜೊತೇಲಿ ಇದ್ದೆ..
ನಿಮ್ಮ ಮಾತುಗಳು..ನನ್ನನ್ನು..ಹೆಚ್ಚು..ಕಾಡಿತ್ತು..ಧರ್ಮ, ಸತ್ಯ, ನ್ಯಾಯ, ನೀತಿ,,ಇವೆ ನಮ್ಮ ಬದುಕಿಗೆ ದಾರಿ ದೀಪ ಅಂತ ಹೇಳಿದ್ರಿ..ನಾನು ಇಂದು ಶಾಸಕನಾದರು....ಈ ಮಾರ್ಗದಲ್ಲಿ ನಡೆಯಲು..ನಿರಂತರ ಪ್ರಯತ್ನ ಪಡುತ್ತಿರುತ್ತೇನೆ..
ಇವೆಲ್ಲವನ್ನೂ..ನಾನು ಯಾಕೆ ಹೇಳುತ್ತಿದ್ದೇನೆ..ಅಂದರೆ..ಆ ಹುಡುಗ..ತುಂಬಾ ಒಳ್ಳೆಯವನು..ಸಂಸ್ಕಾರವಂತ.ಬೇರೆ ಜಾತಿ ಎಂಬ ಒಂದೇ ಕಾರಣಕ್ಕೆ..ಅವರಿಬ್ಬರನ್ನು ನೀವು..ಬೇರೆ ಮಾಡುವುದು...ಸರಯಾಯಲ್ಲ..ಅನ್ನಿಸುತ್ತೆ..
.....
ನನ್ನ..ಮಾತಿನಲ್ಲಿ ಏನಾದ್ರು..ತಪ್ಪಿದ್ದರೆ..ದಯವಿಟ್ಟು..ಕ್ಷಮಿಸಿ..
ನಾನಿನ್ನು..ಬರುತ್ತೇನೆ..
...........

ಇಡೀ ದಿನ..ಯೋಚಿಸಿ..ಅಂತು..ಒಂದು ನಿರ್ಧಾರಕ್ಕೆ..ಬಂದರು..ಶಾಸ್ತ್ರಿಗಳು..
ಶಾಸಕರ ಮನೆ ಒಳಗೆ ಬಂದು..ಹೇಳದರು..
ಸಾರ್..ನೀವು ಹೇಳಿದ ಮಾತುಗಳು..ನನಗೆ ಸರಿ ಅನ್ನಿಸಿತು..ನನಗಿಂತ ಚಿಕ್ಕವರಾದರು..ಒಳ್ಳೆ ಸಂಧರ್ಬದಲ್ಲಿ..ಎಲ್ಲ ವಿಚಾರಗಳನ್ನು..ನೆನಪಿಸಿ...ಜಾತಿಗಿಂತ..ಮನುಷ್ಯತ್ವ ಮುಖ್ಯ,,ನನ್ನ ಮಗಳ ಸುಖ..ಸಂತೋಷ..ಮುಖ್ಯ..ಅನ್ನೋದು ನೀವು..ನೆನಪು ಮಾಡಿ..ಕೊಟ್ಟಿರಿ..ಇಷ್ಟವಿಲ್ಲದ..ಯಾವುದೊ ಮದುವೆ ಆಗಿ..ಬದುಕಿನ ಪ್ರತಿ ಹಂತದಲ್ಲೂ..ನರಕ ಯಾತನೆ..ಅನುಭವಿಸಿದ್ದಕ್ಕಿಂತ..ಇಷ್ಟ ಪಟ್ಟವನೆ ಜೊತೆ.ಮದುವೆ ಯಾಗಿ..ನೆಮ್ಮದಿ ಯಗಿರುವುದೋ..ಮೇಲು..
ನಾನು..ಒಪ್ಪಿದೇನೆ..ಸರ್..ಈ ಮದುವೆಗೆ..

.....
ವಿಷಯ ತಿಳಿದ..ಪಂಕಜ್..ಹಾಗು..ಶಾಂಭವಿ..ಗೆ..ಸಂಭ್ರಮವೋ..ಸಂಭ್ರಮ....ಅವರ ಹೊಸ ಬದುಕಿಗೆ ಪ್ರವೇಶ ಸಿಕ್ಕಿತ್ತು....ಪ್ರೇಮ ಪಕ್ಷಿಗಳಾಗಿ..ಹಾರಡುತ್ತಿದ್ದರೆ..
ಇತ್ತ ಶಾಸ್ತ್ರಿಗಳು..ಮನದಲ್ಲೇ..ಅವರನ್ನು ಹರಸುತ್ತಿದ್ದರು..
.....

-ಹೆಚ್.ಆರ್.ಪ್ರಭಾಕರ್.

Monday, November 14, 2011

''ವಿಳಂಬ''



ಸೀನ್ -1

ಇಬ್ಬರು ಹುಡುಗಿಯರು..ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು..
ಒಬ್ಬ ಹುಡುಗ..ಅವರ ಹಿಂದೆ ಹೋಗುತ್ತಾ ಇದ್ದ..
ಯಾಕೋ ಪದೇ ಪದೇ ಹಂಗೆ ನೋಡ್ತೀಯ....ಹಾಗೆಲ್ಲ ನೋಡಬೇಡ ....ಆಯ್ತಾ..
ಆಯಿತು.....ಸಾರಿ..
ಹೌದು..ನೀ ಪದೇ...ಪದೇ..ಯಾಕೆ ನಂ ಹಿಂದೆ ಬರ್ತೀಯ
ಹೇಳೋ..?
ಏನಿಲ್ಲ .....ಹಾಗೆ ಸುಮ್ಮನೆ..
ಹಲೋ..ಇವೆಲ್ಲ ನಂ ಹತ್ರಾ ಬೇಡಪ್ಪ..ನೀನು ಹೀಗೆ ನನ್ನ ಹಿಂದೆ ಬಂದ್ರೆ...
ನಾನು ನಿನ್ನ ಲವ್ ಮಾಡ್ತೀನಿ ಅಂದ್ಕೊಂಡಿದಿಯ..?
ಇಲ್ಲ......ಹಾಗೇನಿಲ್ಲ..
ಮತ್ತೆ ಯಾಕ್ ಬರ್ತೀಯ ಹಿಂದೆ ಹಿಂದೆ..?
ಇನ್ನೊಬ್ಬ ಹುಡುಗಿ : ಲೇ .. ಸುಮ್ನಿರೆ..ಬಂದ್ರೆ ಬಂದ..ಅವನ ಪಾಡಿಗೆ ಅವನು ಬರ್ತೀದಾನೆ..
ನಿನಗೆ ಗೊತ್ತಾಗೊಲ್ಲ ಸುಮ್ನಿರೆ..
ನೀ ಹೇಳೋ..
ಅಯ್ಯೋ ರಾಮ ನನ್ನ ಖುಷಿಗೆ ನಾನು ನೋಡ್ತಾ ಇದೀನಿ...
ನಾನೇನು ನಿನ್ನ ಲವ್ ಮಾಡ್ತೀನಿ ಅಂತ ಹೇಳಿದ್ನಾ..?

ಸೀನ್ - 2

ಲೇ..ಅವನು ಏನೋ ಕಾಣಿಸ್ತಾನೆ ಇಲ್ವಲ್ಲೆ..? ಇತ್ತೇಚೆಗೆ..
ಇನ್ನೊಬ್ಬ ಹುಡುಗಿ: ಅಯ್ಯೋ ಹೋದರೆ ಹೋದ..ಬಿಡು..ನಮಗೇನು..ಪೀಡೆ ತೊಲಗಿತು..ಅಂದ್ಕೋ..
ಅಲ್ಲ ....ಪಾಪ ಸುಮ್ನೆ ಹಿಂದೆ ಹಿಂದೆ ಸುತ್ತುತ್ತ ಇದ್ದ..ಅದಿಕ್ಕೆ ಕೇಳಿದೆ..
ಅಮ್ಮ ತಾಯೀ..ಅವಾಗೆಲ್ಲ..ಹಿಂದೆ ಬರ್ತಾ ಇದ್ದಾನೆ..ಅಂತ ತಲೆ ತಿಂತಿದ್ದೆ..
ಇವಾಗ ಬರ್ತಾ ಇಲ್ಲ..ಅಂತ ತಲೆ ತಿನ್ತಿದಿಯ..
ಸುಮ್ನೆ ತೆಪ್ಪಗೆ ಬಾರೆ..
ಆದರು...
ಪಾಪ..ಅವನು ಎಲ್ಲಿ ಹೋದನೋ..
.....
......
ಎಲ್ಲಾದರು..ಹೋಗಲಿ..ನನಗು ನಿನಗೂ..ಏನೆ ಪ್ರಾಬ್ಲೆಮ್ಮು..
....
ಇಲ್ಲ ಕಣೆ....
ಅದು..ಹಾಗಲ್ಲ..
ಹಾಗು ಅಲ್ಲ ಹೀಗೂ ಅಲ್ಲ..ಬಾಯಿ ಮುಚ್ ಕೊಂಡು..ನಡೀ ಕಾಲೇಜಿಗೆ ಹೊತ್ತಾಯ್ತು..
ಹಿಂದೆ ಹಿಂದೆ..ತಿರುಗಿ ನೋಡುತ್ತಾ..ಹೋಗುತ್ತಿರುವಳು..

......???

ಸೀನ್ - 3

ಇವರು..ಕಾಲೇಜು ಮುಗಿಸ್ಕೊಂಡು..ನಡಕೊಂಡು..ಬರ್ತಾ ಇದಾರೆ,,
ಲೇ..ಅವನು ಇಗಳು..ಬರ್ಲಿಲ್ಲ..ಕಣೆ..
ಅಮ್ಮ ತಾಯೀ..ಪದೇ ಪದೇ ಅದೇ ಹೇಳಿ ತಲೆ ತಿನ್ಬೇಡ..ಸುಮ್ನೆ ನಡೆ..
ಹುಡುಗಿಯರಿಬ್ಬರು..ರಸ್ತೆ ತಿರುವಿಗೆ ಬರುವಷ್ಟರಲ್ಲಿ
ರಸ್ತೆ ತುಂಬಾ ಜನಾ....

ಏನೆ ಇದು..ಇಷ್ಟೊಂದು..ಜನಾ..
ಹುಡುಗಿ..೨..ಏನಾದ್ರು..ಅಗಲಿ..ನಮಗ್ಯಾಕೆ..ಸುಮ್ನೆ ಬಾ.,..
ಬಾರೆ ನೋಡೋಣ..
ನೋಡು..ಜನಾ ಇರೋ ಕಡೆ ಹೋಗಬಾರದು..ಅಂತ ನಿಮ್ಮಮ್ಮ ಹೇಳಿಲ್ವ..ಸುಮ್ನೆ ಬಾ..
...
ಪ್ಲೀಸ್ ಕಣೆ..
ನೋಡೋಣ..
.....
ಆಯಿತು...ನಡೀ...
ಜನಗಳ ಮಧ್ಯೆ ಜಾಗ ಮಾಡಿಕೊಂಡು..ಬಂದರು..
ಒಬ್ಬ ಹುಡುಗ..ಆಕ್ಸಿಡೆಂಟ್ ...ಆಗಿ..ಬಿದ್ದಿದ್ದ..
ಪೋಲೀಸಿನವರು..ಮಹಜರು ಮಾಡುತ್ತಿದ್ದರು..
ಮುಖ..ರಸ್ತೆಗೆ ತಾಗಿತ್ತು..ಕಾಣುತ್ತ ಇರಲಿಲ್ಲ..
ಸರಿ..ಎಲ್ಲ ಮುಗಿದು..ಬಾಡಿ..ಪೋಸ್ಟ್ ಮಾರ್ಟುಂ ಗೆ ಕಲಿಸಲು..ಬಾಡಿ ಸ್ತ್ರೆತ್ಚೆರ್..ಮೇಲೆ ಮಲಗಿಸಲು..ಅಣಿಯಾದರು..
....
ಮುಖ..ಇವಳಿಗೆ ಕಾಣಿಸಿತು..
....
ಅವನದೇ..
ಅವನದೇ...ಮುಖ..
.....

ಇವಳಿಗೆ ದುಃಖ..ಉಮ್ಮಳಿಸಿಕೊಂಡು ಬಂತು..
ಹಾಗೆ ....ಓಡಿ ಹೋಗಿ..ಅವನನ್ನು ಹಿಡಿದುಕೊಂಡು..ಅಯ್ಯೋ..ರಾಮ...ನೀನಾ..
ಏಳೋ..ಏಳೋ..
ಅಂತ..ಕಣ್ಣೇರು ಸುರಿಸುತ್ತ..ಜೋರಾಗಿ..ಅಳುತ್ತಿದ್ದಳು..
.....ಅವಳ ಗೆಳತಿ..ಹೋಗಿ..ಬಾರೆ..ನಮಗ್ಯಾಕೆ..ಎಲ್ಲರೂ..ನಮ್ಮನ್ನೇ ನೋಡ್ತಾ ಇದ್ದಾರೆ..
....
ಅಂತ ಅವಳನು ಎಳೆದು ತರುವ ಪ್ರಯತ್ನ ಮಾಡಿದಳು..
ಅದು ಸಾಧ್ಯವಾಗಲಿಲ್ಲ..
...
.....ಅಯ್ಯೋ ರಾಮ..ನಾನು ಇವನನ್ನು ಇಷ್ಟ ಪಡ್ತಾ ಇದ್ದೆ ಕಣೆ..ಸ್ವಲ್ಪ ದಿನ ಸತಾಯಿಸೋಣ ಅಂತ..ಆಟ ಅಡಿಸ್ತ ಇದ್ದೆ..
ಅಷ್ಟರಲ್ಲಿ..
ಅಯ್ಯೋ...
ದೇವರೇ...ನಾನೀಗ ಏನು..ಮಾಡಲೀ..
.......
.......
ಸರ್..ಇದು ಹೇಗಾಯ್ತು..
....
ಪೋಲಿಸ್ ಹೇಳಿದ..ನೋಡಮ್ಮ..ಏನೋ ತುಂಬಾ ಅರ್ಜೆಂಟ್ನಲ್ಲಿ..ನಡ್ಕೊಂಡ್ ಬರ್ತಾ ಇದ್ದನಂತೆ..ಈ ಕ್ರಾಸ್ ನಲ್ಲಿ ...ಒಂದು ಕಾರು..ಹೋಗುವಾಗ..ಕಾರ್ ಬ್ರೇಕ್ ಫೈಲ್ ಆಗಿ..ಈ ಆಕ್ಸಿಡೆಂಟ್ ಆಗಿದೆ..
...
ಒಹ್..ದೇವರೇ..ಇಷ್ಟು..ದಿನ ಇವನು ಬರಲಿಲ್ಲ..ಅಂತ ಪರಿತಪಿಸುತ್ತಿದ್ದೆ..ಈಗ..ನನ್ನ ನೋಡಲು..ಬಹುಶ ಬರುತ್ತಿದ್ದ ಅನ್ಸುತ್ತೆ..
...
ಅಷ್ಟರಲ್ಲಿ..ಹೀಗಗೊಯ್ತ..
...
ಒಂದೇ ಸಮನೆ ಅಳುತ್ತ..ಅಯ್ಯೋ ದೇವರೇ..ನಾನು ನನ್ನ ಪ್ರೀತಿಯ ವಿಚಾರ ಮೊದಲೇ ಹೇಳಿದ್ದರೆ..ಚೆನ್ನಾಗಿರುತ್ತಿತ್ತು..
....
ಒಂದೇ ಸಮನೆ ದುಃಖಿಸುತ್ತ..ಭಾರವಾದ ಹೆಜ್ಜೆಗಳನ್ನು ಹಾಕಲು ಪ್ರಯತ್ನಿಸಿದರು..
ದೇಹ..ಮುಂದೆ ಕದಲುತ್ತಿರಲಿಲ್ಲ..
,,,
ಅವಳ ಗೆಳತಿ ನಿಧಾನವಾಗಿ..ಅವಳನ್ನು ನಡೆಸುಕೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದಳು..

.....

-ಹೆಚ್.ಆರ್. ಪ್ರಭಾಕರ್.

Friday, November 11, 2011

''ಆಸೆ''




ಪಪ್ಪಾ..ಪಪ್ಪಾ....ಎಲ್ಲಿದಿಯ..
ಯಾಕೆ ಮಗಳೇ...ಏನಾಯ್ತು..
ಪಪ್ಪಾ.....ನಾನು ನಿನ್ನ ಒಂದು ವಿಷ್ಯ ಕೇಳಬೇಕು..
ಏನು ಹೇಳು ಕಂದಾ..
ನೀನು ಯಾವ ಸ್ಕೂಲ್ ನಲ್ಲಿ ಓದಿದ್ದು..
ಯಾಕೋ ಪುಟ್ಟಾ..
ಹೇಳು ಪಪ್ಪಾ..
ನಾನು ಓದಿದ್ದು ನಮ್ಮ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ..ಚಿನ್ನ..
ಹೌದಾ ಪಪ್ಪಾ...
ಹೌದು ....
ಹಾಗಾದ್ರೆ ನಿಮ್ ಸ್ಚೂಲ್ನಲ್ಲಿ ಎಷ್ಟು ಜನ ಟೀಚೆರ್ಸ್ ಇದ್ರೂ..
ಒಂದರಿಂದ ಏಳನೇ ತರಗತಿವರೆಗೆ ಇಬ್ಬರು ಇದ್ದರು..
ಅಷ್ಟೊಂದ್ ಮಕ್ಕಳಿಗೆ ಬರೀ ಇಬ್ಬರೇ ಟೀಚೆರ್ಸಾ..
ಹೌದು ಕಂದಾ..
ಮತ್ತೆ ನಿಮ್ಮ ಕ್ಲಾಸ್ ನಲ್ಲಿ ಪಾಠ ಮಾಡೋವಾಗ ಬೇರೆ ಮಕ್ಕಳು ಏನು ಮಾಡ್ತಾ ಇರ್ತಿದ್ರು..
ನಮ್ಮ ಶಾಲೇಲಿ ಇದ್ದದ್ದು..ಎರಡೆ ರೂಮು..ಕಂದಾ
ಒಹ್..ಹೌದ...
ಹಾಗಾದ್ರೆ..ನಿಮಗೆ ಹೋಂ ವರ್ಕ್ ಕೊಡ್ತಾ ಇದ್ರಾ
ಇಲ್ಲ ...ನಮಗೆ ಹೋಂ ವರ್ಕ್. ಕೊಡ್ತಾ ಇದ್ದದ್ದು..ಫಸ್ಟ್ ಟರ್ಮ್ ಪರೀಕ್ಷೆ ಆದಾಗ ಆದರೆ ಉತ್ತರ ಬರೆಯೋಕೆ ಹೇಳೋರು..ಅದಷ್ಟೇ ನಮಗೆ ಹೋಂ ವರ್ಕ್...
ಹೌದಾ ಪಪ್ಪಾ...
ಹೌದು..ಕಂದಾ..
ದೊಡ್ಡೋರು..ಅದಾಗ ಏನಾಗಬೇಕು..ಅಂತ..ಕೇಳ್ತಿದ್ರ..
ಕೇಳ್ತಾ ಇದ್ರೂ..ಚಿನ್ನು..
ಸರಿ..ನೀನು ಯೆನಾಗ್ತೀನಿ..ಅಂತ ಹೇಳಿದ್ದೆ ನಿಮ್ಮ ಟೀಚೆರ್ಗೆ..
ನಾನು ವಿಜ್ಞಾನಿ ಆಗ್ತೀನಿ ಅಂತ..ಹೇಳಿದ್ದೆ..
ಸರಿ ಹಾಗಾದ್ರೆ..ನೀ ವಿಜ್ಞಾನಿನೆ ಆಗಿದ್ಯಲ್ಲ..
ಹೌದು..ಕಂದ...
ಅಜ್ಜಿ ತಾತ..ನಿನಗೆ ಏನಾಗಬೇಕು..ಅಂತ ಹೇಳ್ತಿದ್ರು..
ಅವರು ಏನು ಯಾವತ್ತು..ಹೇಳಿಲ್ಲ ಕಂದ..
ನಿನಗೆ ಯಾವ ವಿಷಯದಲ್ಲಿ ಆಸಕ್ತಿ ಇದ್ಯೋ ..ಹಾಗೆ ಮಾಡು ಅಂತ ಹೇಳ್ತಾ ಇದ್ರೂ...
ಹೌದ..ಪಪ್ಪಾ..ಎಷ್ಟೊಳ್ಳೆ ಯವರು..ಅಜ್ಜಿ..ತಾತ..
ಯಾಕೋ ಪುಟ್ಟ..ಇದೆಲ್ಲ ಈಗ ಕೇಳ್ತಾ ಇದ್ದೀಯ..
ಏನಿಲ್ಲ ಪಪ್ಪಾ..ಇವತ್ತು..ನಮ್ ಸ್ಚೂಲ್ನಲ್ಲಿ..ಎಲ್ಲರನ್ನು ಕೇಳ್ತಾ ಇದ್ರೂ..
ನಮ್ಮ ಟೀಚರ್..
ಏನಂತ..
ಏನಾಗಬೇಕು..ಅಂತ ಇದ್ದೆರ ಅಂತ..
ಅದಿಕ್ಕೆ..
ಅದಿಕ್ಕೆ..
ಹೇಳು ಕಂದ..
ನಮ್ ಕ್ಲಾಸ್ ನಲ್ಲಿ..೪೦ ಜನ ಇದ್ದೇವ..
ಹೌದು..
ಅದರಲ್ಲಿ..೨೦ ಜನಾ ಹುಡುಗರು..ಎಂಜಿನೀರ್ ಅಂದ್ರು..
ಆಯ್ತಾ..
ಆಯ್ತು. ೩ ಜನ ಹುಡುಗರು..ಫಿಲಂ ಹೀರೋ..ಆಗ್ತೀನಿ..ಅಂದ್ರು..
ಓಕೆ..
೧೫ ಜನ ಹುಡುಗೀರು..ಫಿಲಂ ಹೀರೋ ಇನ್..ಅಂದ್ರು..
ನನ್ನ ಫ್ರೆಂಡ್ ಅಮೃತಾ ಇದಾಳಲ್ಲ..ಅವಳು..
ಹೇಳು ...
ಡಾಕ್ಟರ..ಅಂದ್ಲು..
ಸರಿ...
ಇನ್ನುಳಿದದ್ದು..ನಾನು..
ಹಂ..
ನೀನು ಏನು ಹೇಳಿದೆ..
ನಾನು ಏನು ಹೇಳಿದೆ ಅನ್ನೋ ಮೊದಲು ನೀನು ಹೇಳು ಪಪ್ಪಾ...
ನಾನು ಯೆನಾದ್ರೆ ನಿನಗೆ ಇಷ್ಟ..
ಹಾಂ...
.....
ನನಗೆ ನೀನು ಇಂಜಿನಿಯರ್ ಆಗಬೇಕು..ಅಂತ ಇಷ್ಟ..ಕಂದಾ.
.....
ಈಗ ಹೇಳು..ನೀನು ಟೀಚರ್ ಗೆ ಏನು. ..ಹೇಳಿದೆ..
ಪಪ್ಪಾ...
ನಾನು...ಬೇರೆ ಏನಾದ್ರು..ಹೇಳಿದ್ರೆ..ನಿನಗೆ ಬೇಜಾರ್..ಇಲ್ಲ..ತಾನೇ..
ಇಲ್ಲ..ಪುಟ್ಟ..ಹೇಳು..
ಅಲ್ಲಿ ಏನು..ಹೇಳಿದೆ..ನೀನು ಏನಾಗಬೇಕು..ಅಂತ..ಇಷ್ಟ..
ಪಪ್ಪಾ..
ಹೇಳು..ಪುಟ್ಟಾ..
ನಾನು...ನರ್ಸ್ ...ಆಗಬೇಕು...ಅಂತ..ಹೇಳಿದೆ..ಪಪ್ಪಾ..
ಹೌದ......?
ಹೌದು..ಪಪ್ಪಾ...
ಯಾಕಂದ್ರೆ..ಅವತ್ತು..ನೀನು ಅದೊಂದು..ಆದಿವಾಸಿ..ಜನಾಂಗ..ಇರೋ ಜಾಗಕ್ಕೆ..ಕರ್ಕೊಂಡ್ ಹೋಗಿದ್ಯಲ್ಲ..ಕಾಡಿಗೆ..
ಅವರು ಇನ್ನು ಸರಿಯಾಗಿ..ಬಟ್ಟೆ ಕೂಡ ಹಾಕೊತಾ ಇರ್ಲಿಲ್ಲ..
ಪಾಪ..ಅಲ್ಲಿ ಅವರಿಗೆ ಖಾಯಿಲೆ ಬಂದ್ರು..ನೋಡ್ಕೊಳ್ಳೋಕೆ..ಆಸ್ಪತ್ರೆ..ಇಲ್ಲ..
ಅಂತ..ಅತ್ತ್ಕೊಂಡ್..ಹೇಳ್ತಾ ಇದ್ರಲ್ಲ..
ಹೌದು..
ಅವತ್ತಿಂದ..ನಾನು ನರ್ಸ್ ಆಗಬೇಕು..ಅಂತ..ಅಂದ್ಕೊಂಡೆ..
ನೀನು..ಡಾಕ್ಟರ..ಆಗಿ..ಅವರ ಸೇವೆ ಮಾಡ್ಬೋದಲ್ಲ..ಪುಟ್ಟ..
ಇಲ್ಲ..ಪಪ್ಪಾ..ಡಾಕ್ಟರ ಆಗಿ..ನಾನು..ಟ್ರೀಟ್ ಮೆಂಟ್...ಕೊಡಬಹುದು..
ಅದೇ..ಒಬ್ಬ ಅಮ್ಮನ ತರ..ಅವರಿಗೆ..ಸೇವೆ ಮಾಡಬಹುದು ಅಕ್ಷರ ಕಲಿಸ್ಬೋದು....
ಅಲ್ವ...
ಆದರು...
...?
ಇದು..ನನಗೆ ಇಷ್ಟ..ಆಗ್ತಾ..ಇಲ್ಲ..ಪುಟ್ಟ...
ಅಪ್ಪ..ತಾತ..ಅಜ್ಜಿ..ನೀನು..ಬೇರೆ..ಏನೋ ಆಗಬೇಕು..ಅಂತ..ಹಟಾ ಮಾಡಿದ್ದಿದ್ದರೆ..ನೀನು ಇವತ್ತು..ವಿಜ್ಞಾನಿಯಾಗಿ..ಎಷ್ಟು..ಖುಷಿ ಆಗಿದ್ದಿಯೋ..ಅಷ್ಟು..ಖುಷಿಯಾಗಿ ಇರೋಕೆ..ಅಗ್ತಿತ್ತ..ಪಪ್ಪಾ..
ಪ್ಲೀಸ್..ಪಪ್ಪಾ..ಹೇಳು..ಪಪ್ಪಾ..
ಅಯ್ಯೋ..ಕಂದ..ಇಷ್ಟು ವಯಸ್ಸಿಗೆ..ಎಷ್ಟು..ದೊಡ್ಡ..ಮನಸ್ಸು..ಕಣೋ ನಿಂದು..
.....
ಮಗಳೇ..ನಿನಗಿರೋ..ಬ್ಹುದ್ದಿಯು...ನಿನ್ನಪ್ಪನಿಗೆ ಇಲ್ಲವಲ್ಲ..ಕಂದ..
ಸಾರಿ..ಪಪ್ಪಾ..
ಬೇಜಾರ್..ಆಯ್ತಾ..
ಇಷ್ಟು..ಚಿಕ್ಕ ವಯಸ್ಸಿಗೆ..ನಿನ್ನ ವಿವೇಚನೆ ಕಂಡೆ ಜನರ ಬಗ್ಗೆ ಕಳಕಳಿ..ಕಂಡು....ನಿಜಕ್ಕೂ..ಹೆಮ್ಮೆ ಆಗ್ತಿದೆ..ಮಗಳೇ..
I Love..you..putta..
I love..u..pappa...
...
ಅಪ್ಪ. ತನ್ನ ಆ ಪುಟ್ಟ ಮಗಳನ್ನು ಬಾಚಿ..ತಬ್ಬಿ..ಕೊಂಡಾಡುತ್ತಿದ್ದಾರೆ..ಅವನಿಗೆ ತಿಳಿಯದಂತೆ..ಕಣ್ಣಂಚಿನಿಂದ..ನೀರು..ಜಿನುಗುತ್ತಿತ್ತು.....!!!!
-ಹೆಚ್.ಆರ್.ಪ್ರಭಾಕರ್..