Pages

Friday, November 4, 2011

ತಥಾಸ್ತು..!!!



ನೀ ಎದುರಿಂದ ನಡೆದು ಬರುತ್ತಿದ್ದರೆ
ನಾ ನಾನಾಗಿರಲಿಲ್ಲ
ನೀ ಹತ್ತಿರ ಬಂದಂತೆಲ್ಲ
ನನ್ನ ಎದೆ ಬಡಿತ ಹೆಚ್ಚುತ್ತಿತ್ತು ಗೆಳೆಯಾ
ನಿನ್ನ ಬರುವಿಕೆಗಾಗಿ ಹಂಬಲಿಸುತ್ತಿದ್ದ ನಾನು
ನೀ ಬಂದಾಗ ಮಾತ್ರ ಏನು ಹೇಳದಾದೆ
ಆದರು ನಿನಗಾಗಿ ನಾ ಹೂ ರಾಶಿ ತುಂಬಿದ
ಈ ಮಾರ್ಗದಲ್ಲಿ ಕಾಯುತ್ತಿದ್ದ ಹೊತ್ತು
ಕ್ಷಣ ಯುಗವಾಗಿ ಗೋಚರಿಸುತ್ತಿತ್ತು..
ಪ್ರಕೃತಿ ಮಾತೆ ನನ್ನ ಆತಂಕ ಅರಿತು
ನನಗಾಗಿ ತಂಗಾಳಿ ಬೀಸುತ್ತ
ಮನಸು ಹಗುರ ಮಾಡಿತು
ಹೂ ಚೆಲ್ಲುತ್ತ ನನ್ನ ಪುಳಕಿತಲಾಗಿಸಿತು
ಜಲಪಾತದ ಸದ್ದು ಕೇಳಿಸುತ್ತ
ರೋಮಾಂಚನವಾಗಿಸಿತು
ಪ್ರಕೃತಿ ಕೊಟ್ಟ ಆ ಧೈರ್ಯ
ತುಂಬಿದ ಆತ್ಮವಿಶ್ವಾಸ
ನನಗೆ ಅಮ್ಮನನ್ನು ನೆನಪಿಸಿತು ಗೆಳೆಯಾ
ಅಮ್ಮನಿಲ್ಲದ ನನ್ನ ಬದುಕಿಗೆ
ಪ್ರಕೃತಿಯೇ ಅಮ್ಮನ ಸ್ಥಾನದಲ್ಲಿ ನಿಂತು
ನನ್ನ ಆತಂಕ ದೂರಮಾಡಿತು
ಆಗ ನಾ ನಿರ್ಧರಿಸಿದೆ ಗೆಳೆಯಾ
''ಅಮ್ಮನ' ಸಾನಿಧ್ಯದಲ್ಲಿ
ನಾ
ನಿನಗೆ ನನ್ನ ಪ್ರೇಮ ನಿವೇದನೆ ಮಾಡಬೇಕೆಂದು
ಆದರೆ
ನೀ
ಜಾಣ
ನನ್ನ ನಿವೇದನೆಗೆ ಹಸಿರು ನಿಶಾನೆ ತೋರಿ
ನಿನ್ನವಳಾಗಿಸಿಕೊಂಡೆ ...
......
ಆಗ ಆಯಿತು ನೋಡು ಪುಷ್ಪ ವೃಷ್ಟಿ..
ಇದಕಿಂತ ಆಶಿರ್ವಾದ ಅಮ್ಮ
ಇನ್ನಾವ ರೂಪದಲಿ ಕೊಡಲು ಸಾಧ್ಯ..???

-ಇಂತಿ ನಿನ್ನವಳು..

No comments:

Post a Comment