Pages

Wednesday, November 9, 2011

ಭೀಮನ ...ಆಪಲ್ ಕನಸು..


ಹಳ್ಳಿ ಮನೆಯ ಮುಂದೆ ಅದೊಂದು ಭಾನುವಾರ ಬೆಳಿಗ್ಗೆ
ದಿನಪತ್ರಿಕೆ ಓದುತ್ತ ಕುಳಿತಿದ್ದೆ..
ನಮಸ್ಕಾರ ಸಾಮೀ ಅಂದ ಭೀಮ..
ಏನೋ ಭೀಮ ತುಂಬಾ ದೂರ ಬಂದ್ಬಿಟ್ಟೆ ...ಏನ್ ಸಮಾಚಾರ ಅಂದೇ,,
ಅದೇ ಸಾಮೀ ನೀನು ಬಂದಿದಿಯ ಅಂತ ನಮ್ಮ ಎಂಕ ಹೇಳ್ದ ...ಅದಿಕ್ಕೆ ಬಂದೆ ಸಾಮೀ..
ಏನೋ ದುಡ್ಡು ಏನಾದ್ರು ಬೇಕಿತ್ತಾ ..? ಇಲ್ಲ ಸಾಮೀ ..ಅನ್ಗೆನಿಲ್ಲ ಅಂತ ತಲೆ ಕೆರ್ಕೊಂಡ..
ಮತ್ತೇನ್ ಬೇಕೋ..ಊಟ ಮಾಡ್ತಿಯ..
ಬೇಡ ಸಮೀ..ಈಗ ತಾನೇ..ಎಲ್ಡ್ ಮುದ್ದೆ ಉಂಡ್ಕೊಂಡ್ ಬಂದೆ ಅಂದ
ಮತ್ತೆ ಏನ್ ವಿಷ್ಯ ಹೇಳೋ ...ನೀನು ಸುಮ್ಸುಮ್ನೆ ಇಲ್ಲಿವರ್ಗು ಬರೋನಲ್ಲ ಹೇಳು..ಪರವಾಗಿಲ್ಲ ಅಂದೇ..
ಅದೇ ಸಾಮೀ ತೋಟದಾಗ್ ನೀರ್ ಕಟ್ ತಾ ಇದ್ದೆ..ಕರೆಂಟ್ ಹೊಂಟ್ ಓಯ್ತು ಅದಿಕ್ಕೆ ನಿಮ್ ಜೊತೆ ಮಾತಡಾನ ಅಂತ ಬಂದೆ..
ಸರಿ ಏನ್ ಸಮಾಚಾರ..
ಅದೇ ಸಾಮೀ ಮೊನ್ನೆ ಟಿವಿ ನೋಡ್ತಾ ಕುಂತಿದ್ದ್ನಾ .....ಅಂದ
ಆಮೇಲೆ ....
ಅದೇ ಸಾಮೀ ಅದರಾಗೆ ಒಂದು ಪುವೋನು ತೋರಿಸ್ತಾ ಇದ್ರೂ..
ಪುವೊನಾ...?
ಅದೇ ಸಾಮೀ ನೀವು ಎಲ್ಲಂದರಲ್ಲಿ ನಿಂತು ಮಾತಾಡ್ತಾ ಇರ್ತೀರಲ್ಲ ಮುಬೈಲ್ ....ಅಂದ
ಓಹೋ..ಮೊಬೈಲ್ ಫೋನಾ..ಅಂದೇ..
ಹೂ೦ ...ಅದೇ ಕಣ್ ಮತ್ತೆ..
ಸರಿ ಮುಂದಕ್ಕೆ ಹೇಳು..
ಅದೇನೋ ಹೊಸದಾಗಿ ಬಂದೈತಂತಲ್ಲ ...ಅದರ ಹೆಸರು ಅದೇನೋ..ಮರ್ತೋದೆ..
ಸರಿ..ಹೇಳು..ಹೆಸರು ಆಮೇಲೆ ಜ್ಞಾಪಿಸಿಕೊಳ್ಳೋಣ
ಅದರಾಗೆ ಅದೇನೇನೋ ಇಸೇಸ..ಐತಂತೆ..
ಮನೇಲಿ ಕುಂತ್ಕೊಂಡ್ ತೋಟಕ್ಕ್ ನೀರ್ ಹರಿಸ್ಬೋದಂತೆ..
ತೋಟಕ್ಕ್ ಔಸ್ಸ್ತಿ.ಓಡಿಬೋದಂತೆ
ಗೊಬ್ಬರ ಚೆಲ್ಬೋದಂತೆ..
ಮಡಕೆ ಉಳ್ಬೋದಂತೆ..ಅದಿಕ್ಕೆ..
ಅದಿಕ್ಕೆ..
......
ಮುಂದುಕ್ಕೆ ಹೇಳೋ..
ಹಾಂ..
ಗೆಪ್ಥಿಗ್ ಬಂತು..ಅದರ..ಹೆಸರು..
ಏನೋ ಅದು..
ಅದೇನೋ ಆಪಲ್ ಅಂತೆ..
ಅಡಿಕ್ಕೆನೋ ..ಗಾಗಲೇ ಮಾಪ್ ಇರ್ತದಂತೆ..
ಆಪಲ್ ..ಕಣೋ ಅದರ ಹೆಸರು..ನೀನು ಹೇಳ್ತಾ ಇರೋದು ಗೂಗಲ್ ಮ್ಯಾಪ್ ಬಗ್ಗೆನ..
ಹೌದು ಸಾಮೀ ...ಅದೇ ಅದೇಯಾ..
ಟಿ ವಿ ನೋಡ್ತಾ ಕುಂತಿದ್ದಾಗ ನಮ್ಮ ಎಂಕನ ಮಗ ಚೆನ್ನ ಬಂದ..
ಅವಾಗ ಈ ಫೋನ್ ತೋರಿಸ್ತಾ ಇದ್ದರು..ಟಿ ವಿ ನಾಗೆ..
ಅದಿಕ್ಕೆ ಚೆನ್ನ ಹೇಳ್ದಾ ಆ ಫೋನ್ ಇಟ್ಕೊಂಡ್ರೆ ರಾತ್ರಿ ಹೊತ್ನಾಗೆ ನೀರ್ ಕಟ್ಟೋಕೆ ತೋಟಕ್ಕೆ ಚಳೀನಾಗೆ ಹೋಗೋ ಕಷ್ಟ ಇರಾಕಿಲ್ಲ
ನಿಮ್ ಸಾಮೆರ್ಗೆ ಹೇಳಿ..ನೀನು ಆ ತರ ಫೋನ್ ಕೊಡುಸ್ಕೋ
ತೋಟದ ಕೆಲ್ಸಾನೆಲ್ಲ ಮನೇಲಿ ಕುಂತ್ಕೊಂಡ್ ಮಾಡ್ಬೋದು..ಅಂತ..
ಅದಿಕ್ಕೆ..
ನೀವು ಒಸಿ ..ದೊಡ್ ಮನಸ ಮಾಡ್ಬೇಕ್ರಾ...
ಏನ್ ಮಾಡ್ಬೇಕ್ ಹೇಳೋ..
ಅದೇ..ಆ ತರಾ ಫೋನ್..ನಂಗು..
ನಂಗು..
ಮುಂದೆ ಹೇಳೋ..
ನಂಗು..ತಂದು ಕೊಟ್ರೆ....ನಿಮ್ ತ್ವಾಟದ್ ಕೆಲ್ಸಾ ಬಿರ್ ಬಿರ್ನೆ ಮಾಡ್ಬೋದ್ರ..
ಈ ಸತ್ತಿ ಬಂದಾಗ..
ಒಂದು..ತಂದ ಕೊಟ್ರೆ ಬಾಳ ಸಹಾಯ ಅಗ್ತದ್ರಾ..
ಅಂದ..
ಎಲಾ ...ಭೀಮಾ.......
ಅಂದ್ಕೊಂಡ್ ....
ಮನೆಯಿಂದಲೇ ಕೆಲಸ ಮಾಡ್ಬೋದು ಅಂತ ಯಾರೋ ಹೇಳಿದ್ದು..
ಆಗ್ಲೇ ಹೇಳಿದ್ನಲ್ಲ..ನಮ್ಮ ಚೆನ್ನಾ..
ಓಹೋ..
ಚೆನ್ನ ಅದರ ರೇಟ್ ಹೇಳಿಲ್ವ..
ಇಲ್ಲ ಸಾಮೀ...
ಏನೋ ಒಂದೆಲ್ದ್ ಸವ್ರಾ ಇರ್ತದಾ...?
ಅಂದ..
ಅಲ್ವೋ.
ನೀನು ಹೇಳಿದ ಹಾಗೆ ತೋಟದ ಕೆಲಸ ಏನು ಮಾಡೋಕ್ಕೆ ಆಗೋಲ್ಲ..
ಆದರೆ ಗೂಗಲ್ ಮ್ಯಾಪ್ ಇರುತ್ತಪ್ಪ..
ಅಂದೇ..
ಹೌದ..ಅಂತ ತಲೆ ಕೆರ್ಕೊಂಡ..
ಎಷ್ಟರ..ಅದರ ರೇಟ್..
......
ಹೇಳಿದೆ..
ಭೀಮ ತಲೆ ತಿರುಗಿ ಬೀಳೋದೊಂದು...ಬಾಕಿ ಇತ್ತು..
ಹೌದ...ಅಯ್ಯೋ ಅದೆಲ್ಲ..ನಮ್ಮಂತಾ ಬಡವರ್ಗಲ್ಲ..ಬಿಡಿ ಸಾಮೀ..
''ಬಡವಾ ನೀ ಮಡಗ್ದಂಗಿರು..ಅಂದಂಗೆ..ನನಗ್ಯಾಕ್ ಆ ಫೋನು..ಅಂದು..
ನಾನಿನ್ನು ಬತ್ತಿನಿ..
......ಅಂದ
ಹೋಗಲಿ ಇಷ್ಟು ದೂರ ಬಂದಿದಿಯ ತಗೋ..ಅಂತ..೧೦೦ ರು ಕೊಟ್ಟೆ..
ಅವನ ಮುಖಾ ಊರಗಲ ಅರಳಿತು..
ಎಂಗೋ ಎಲ್ಡ್ ದಿನ..
ತೀರ್ಥಕ್ಕೆ...ಯೋಚನೆ ಇಲ್ಲ..
ನಾ ಬತ್ತಿನ್ ಸಾಮೀ ಅಂತ..
ಹೊರಟ....
ನಾ ...ಮನಸ್ನಲ್ಲೇ ಯೋಚಿಸಿದೆ
ಏನಪ್ಪಾ ಟಿವಿ ನೋಡ್ತಾ ಜನಾ ಇನ್ನು ಏನೇನು ಕನಸುಗಳನ್ನು ಕಾಣುತ್ತ ಇದ್ದಾರೋ
ಕಷ್ಟ ಪಟ್ಟು ಕೆಲಸ ಮಾಡೋ ಜನಾ ಹೇಗೆ ಸುಖದತ್ತ ವಾಲೋ ಹಾಗೆ ಈ ಮಾಧ್ಯಮ ಕ್ರಾಂತಿ ಮಾಡ್ತಾ ಇದೆ..
ಮುಂದೆ ಹೇಗೋ..ಏನೋ..
ಅಂತ..ಯೋಚಿಸುತ್ತ..ಕುಳಿತೆ....!!!
-ಹೆಚ್. ಆರ್. ಪ್ರಭಾಕರ್..

7 comments:

  1. ಭೀಮ ಕನಸು ಕ೦ಡಿದ್ದೆನೊ ಸರಿ, ನೀವು ಅವನಿಗೆ `ತೀರ್ಥ'ಕ್ಕೆ ಹಣ ಕೊಟ್ಟಿದ್ದೂ..... ಲೇಖನ ಚೆನ್ನಾಗಿದೆ, ಅಭಿನ೦ದನೆಗಳು. ನನ್ನ ಬ್ಲಾಗ್ ಗೆ ಭೇಟಿ ಕೊಡಿ.

    ReplyDelete
  2. dhanyavaadagalu...
    khandita nimma blogigu bheti koduttene..halavaaru sala bheti kottu abhipraaya post maadalu prayathnisi..viphalanaade..matte prayatnisuve..

    ReplyDelete
  3. ಬದಲಾವಣೆ ಜಗದ ನಿಯಮ..ಆದರೆ...ಬದಲಾವಣೆ ನಮ್ಮತನವನ್ನು ಮರೆಸಬಾರದು ಅಲ್ವೇ..?

    ReplyDelete