Pages

Tuesday, November 8, 2011

ಮನದ ಮಳೆ ...!!!



ಹಚ್ಚ ಹಸಿರ ನಡುವೆ
ಉದ್ಯಾನವನದಲ್ಲಿ
ಅಂದು ನಾ ನಡೆಯುತ್ತಿದ್ದಾಗ
ವರುಣ ದೇವ ಅಬ್ಬರಿಸುತ್ತ
ಭುವಿಯ ಮುತ್ತಿಕೊಂಡ
ನಾ ದಾರಿ ಕಾಣದೆ ನಿಂತೇ ಆ ಮರದ ಬುಡದಲ್ಲಿ
ಅದೆಲ್ಲಿದೆಯೋ ನೀ
ಓಡಿ ಬಂದು ನಿಂತೇ ನನ್ನದೇ ಪಕ್ಕದಲ್ಲಿ
ನಿನ್ನ ಗುಂಗುರು ಕೂದಲು ತೋಯ್ದು
ನೀರು ತೊಟ್ಟಿಕ್ಕುತ್ತಿದ್ದರೆ
ನೀ
ನಿನ್ನ
ಚುನ್ನಿಯಿಂದ ಅದನ್ನು ಒರೆಸುವ ವೃಥಾ ಯತ್ನ ಮಾಡುತ್ತಿದ್ದೆ
ನಮ್ಮಿಬ್ಬರ ನಡುವೆ ಅಂತರ ಕಡಿಮೆ ಇತ್ತು
ನೀನಂತು ಸಂಕೋಚದ ಮುದ್ದೆಯಾಗಿದ್ದೆ
ನಾ
ಸ್ವಲ್ಪ ದೂರ ನಿಲ್ಲಲು ಯತ್ನಿಸಿದೆ
ನೀ ಕಣ್ಣಲ್ಲೇ ಕೇಳಿದೆ
ಆದರೆ ಅವಶ್ಯಕತೆ ಏನಿದೆ ಎಂದು
ನಿನ್ನ ಬಿಸಿ ಉಸಿರು..
ನನ್ನ ಎದೆ ಬಡಿತ ಹೆಚ್ಚು ಮಾಡುತ್ತಿತ್ತು
.....ಇದು ನಿಜವೇ ಎಂದು ಒಮ್ಮೆ ಯೋಚಿಸಿದೆ
ಅದು ನಿಜವೇ ಆಗಿತ್ತು
ನಮ್ಮಿಬ್ಬರ ಕಣ್ಣುಗಳು ತುಂಬಾ ಮಾತನಾಡಿದವು
ನಮ್ಮ ಅರಿವಿಗೆ ಬಾರದಂತೆ.
ಬಾಯಿ ಮಾತ್ರ ನಿಶ್ಯಬ್ದ
ಆ ಕ್ಷಣವೇ ಅಲ್ಲವೇ ನಮ್ಮೀ ಒಲವಿಗೆ
ನಾಂದಿಯಾಗಿದ್ದು..
ನೆನಪಿದೆಯಾ ಗೆಳತಿ..
ಆ ಮಧುರ ಕ್ಷಣ !!!

-ಹೆಚ್. ಆರ್. ಪ್ರಭಾಕರ್

No comments:

Post a Comment