Pages

Tuesday, November 22, 2011

''ಕನವರಿಕೆ''





ಆಗಸದ ತುಂಬೆಲ್ಲ ನಿನ್ನ ಬಿಂಬ
ಭುವಿಯ ತುಂಬೆಲ್ಲ ನಿನ್ನ ಇರುವಿಕೆಯ ಸಂಚಲನ
ನಿನದೆ ನೆನಪಲಿ ನಾ ಹೊರಟೆ
ಆ ದ್ವೀಪಕೆ ...
ನಿನ್ನ ನೆನಪುಗಳು
ಹೆಜ್ಜೆ ಹೆಜ್ಜೆಗೂ ಕಾಡುತ್ತ ಕಾಡುತ್ತ
ನಾ ನಾನಾಗಿರಲಿಲ್ಲ ಗೆಳತಿ..
ನಾ ನಾನಾಗಿರಲಿಲ್ಲ

ತಂಗಾಳಿಯ ತಂಪಿನಲಿ
ನೀಲಿ ವರ್ಣದ ಆ ನೀರಿನಲಿ
ನಿನ್ನ ನೆನಪುಗಳು ಅಲೆಯೇರಿ
ಬರುತಿವೆ ಗೆಳತಿ
ಅಲೆಯೇರಿ ಬರುತಿವೆ..

ನಿನ್ನ ಇರುವಿಕೆಯ ಭಾವ
ನಾ ಪಡೆಯಲು ಯತ್ನಿಸಿ
ಸೋತು ಹೋದೆ ಗೆಳತಿ
ನಾ ಸೋತು ಹೋದೆ ....

ದ್ವೀಪವೇ ಕತ್ತಲಾಗಿ
ಆಕಾಶವೇ ಕಳಚಿಬಿದ್ದು
ಸುನಾಮಿ ಅಪ್ಪಳಿಸಿ ಬಂದಿದ್ದರು
ನಿನ್ನ ನೆನಪು ಮಾತ್ರ
ನನ್ನಿಂದ ದೂರಗುತ್ತಿರಲಿಲ್ಲ ಗೆಳತಿ
ದೂರಾಗುತ್ತಿರಲಿಲ್ಲ....

ಬೀಸುವ ಪ್ರತಿ ಗಾಳಿಯ ಜೊತೆ
ಕದಲುವ ಪ್ರತಿ ಎಲೆಗಳ ಜೊತೆ
ಹಾರುವ ಮರಳ ಕಣದ ಜೊತೆ
ನನ್ನ ಮನ ಸ್ಪರ್ಧೆಗಿಳಿದಿತ್ತು ಗೆಳತಿ
ಸ್ಪರ್ಧೆಗಿಳಿದಿತ್ತು..

ಇಷ್ಟಾದರೂ
ನೀ ಮಾತ್ರ
ನನ್ನ ಕಾಡದ ದಿನವಿರಲಿಲ್ಲ
ಕಾಡದ ಕ್ಷಣವಿರಲಿಲ್ಲ
ಹೊಸ ಭರವಸೆಯೊಂದಿಗೆ ನಾ ಅಲ್ಲಿ
ಕಾಯುತ್ತಲೇ ಇದ್ದೆ..
ನೀ ಬರುವೆ ಎಂದು..
ಆದರೆ
ನೀ
ಬರಲಿಲ್ಲ ಗೆಳತಿ
ನೀ
ಬರಲಿಲ್ಲ..!!!!

-ಹೆಚ್.ಆರ್.ಪ್ರಭಾಕರ್.

(ಮಾಲ್ಡೀವ್ಸ್ ದ್ವೀಪದಲ್ಲಿ ಕಾಡಿದ ನೆನಪು)

No comments:

Post a Comment