Pages

Wednesday, November 2, 2011

ಪರ್ವಕಾಲ ಭಾಗ - ೪


(ಭಾಗ ೧,೨,೩, ಓದಿ ನಂತರ ಈ ನಾಲ್ಕನೆ ಭಾಗವನ್ನು ಓದಿ..)

ಸ್ನೇಹ..ಪ್ರತಿ ನಿತ್ಯ ಮಾತನಾಡುತ್ತ ಮಾತನಾಡುತ್ತ...ತನ್ನ ಅಮಾಯಕತೆ ಪ್ರದರ್ಶನ ಮಾಡುತ್ತಾ ಮಾಡುತ್ತ ತುಂಬಾ ಆತ್ಮೀಯಳಾಗುತ್ತ ಏನೆ ವಿಚಾರ ಇದ್ದರು ಸಹ ನನ್ನ ಸಲಹೆ ಕೇಳುತ್ತಿದ್ದಳು.

ಬೆಳಿಗ್ಗೆ ೭ ಗಂಟೆಗೆ ಫೋನ್ ಮಾಡಿ..

ಹಾಯ್..ಏನೋ ಮಾಡ್ತಾ ಇದ್ದೀಯ ಅಂದಳು..ನಾನಿನ್ನು ನಿದ್ದೇಲಿ ಇದ್ದೆ..ಏನೆ ನಿಂದು ಬೆಳಿಗ್ಗೆನೆ..

ಅಯ್ಯೋ ಸೋಂಬೇರಿ..ಏಳೋ..ನಾನಾಗಲೇ ಎದ್ದು ಕಾಲೇಜಿಗೆ ಹೋಗ್ತಾ ಇದೀನಿ..ನೀನಿನ್ನೂ ಮಲಗಿದಿಯ..ಏಳು..ಏಳು..ಏಳು...
ಅಯ್ಯೋ ಪಾಪಿ..ನನ್ನ ನಿದ್ದೆ ಭಂಗ ಮಾಡ್ತೀಯ..ನೀನು ನರಕಕ್ಕೆ ಹೋಗ್ತೀಯ..ಹುಷಾರು..

ನಿದ್ರಾ ಭಂಗಂ ಮಹಾ ಪಾಪಂ ಗೊತ್ತ..ಅಂದೇ..

ಅದು ನಿನಗೂ ನನಗು ಅಪ್ಲೈ ಆಗೋಲ್ಲ..ಎದ್ದೇಳೋ..

ಏನೆ ನಿನ್ನ ಗೋಳು..ಹೇಯ್..ಇವತ್ತು ಏನು ನಿನ್ನ ಪ್ರೋಗ್ರಾಮೆ ...ಕೇಳಿದಳು..

ಮಾಮೂಲಿ..ಆಫೀಸು..ಮನೆ..ಅಷ್ಟೇ..ಅಂದೇ.., ಸಂಜೆ ಫ್ರೀ ತಾನೇ..ಹೌದು..ಏನೀಗ..

ನೀನು ಸಂಜೆ ೬.೩೦ ಗೆ ನಮ್ಮ ಕಾಲೇಜ್ ಹತ್ರ ಬರಬೇಕು..ಆಯ್ತಾ..
ಅಷ್ಟೊತ್ ವರೆಗೂ ಅಲ್ಲಿ ನೀನೇನ್ ಮಾಡ್ತಾ ಇರ್ತೀಯ..ಅಂದೇ..
ಪೂರ್ತಿ ಕೇಳಿಸ್ಕೋ ...ಇವತ್ತು ನಮ್ಮ ಕಾಲೇಜ್ ನಲ್ಲಿ ''ಯೂತ್ ಫೆಸ್ಟಿವಲ್' ಇದೆ..ಅಲ್ಲಿ ನಾನು ನಂ ಫ್ರೆಂಡ್ಸ್ ಎಲ್ಲ ಕಾಯ್ತಾ ಇರ್ತೀವಿ..ನೀನು ಬರಲೇ ಬೇಕು..ಆಯ್ತಾ..
ಓಕೆ ...ಓಕೆ..ಅಂದೇ..
ಅಂದು ಸಂಜೆ ೬ ಗಂಟೆಗೆ ಮನೆಯಿಂದ ಹೊರಟೆ..ಅವರ ಕಾಲೇಜ್ ಹತ್ತಿರ ಹೋಗೋ ಹೊತ್ತಿಗೆ..೧೦ ಮೆಸೇಜ್ ಬಂದಿತ್ತು..

ಎಲ್ಲಿದಿಯ..ಎಲ್ಲಿದಿಯ..ಎಲ್ಲಿದಿಯ..ಅಂತ..

ಮಧ್ಯೆ ಒಂದು ಕಡೆ ಬೈಕ್ ನಿಲ್ಲಿಸಿ...ಫೋನ್ ಮಾಡಿದೆ..ಅಯ್ಯೋ ಪಾಪೀ ಸ್ವಲ್ಪನು ತಾಳ್ಮೆ ಇಲ್ಲ ನಿನಗೆ ನಾನು..ಬೈಕ್ ಓಡಿಸೋದು..ಬೇಡ್ವ..ಅಂದೇ..

ಇಲ್ಲ ಕಣೋ ನನ್ನ ಫ್ರೆಂಡ್ಸ್ ಎಲ್ಲ ಕೇಳ್ತಾ ಇದ್ದರು..ಅದಕ್ಕೆ..
ಸರಿ ಒಂದು ಕೆಲಸ ಮಾಡು..ಅಂದಳು..ನಾನ್ನು..ಏನು..ಅಂದೇ..ಹಾರ್ಕೊಂಡ್ ಬಂದ್ಬಿಡು..ಆಯ್ತಾ..ಅಂದಳು..

ಛೀ ಪಾಪೀ..ಅಂದು ಮತ್ತೆ ಬೈಕ್ ಸ್ಟಾರ್ಟ್ ಮಾಡಿದೆ..

ಹೋಗಿ ಕಾಲೇಜಿನ ಪಾರ್ಕಿಂಗ್ ಲಾಟ್ ನಲ್ಲಿ ಬೈಕ್ ಪಾರ್ಕ್ ಮಾಡೋ ಹೊತ್ತಿಗೆ ೮ ಜನರ ಗುಂಪು ಬಂದು ಸುತ್ತುವರಿತು..

ನಾನು .....ಅಸ್ಶರ್ಯದಿಂದ..ನೋಡ್ತಾ ಇದ್ದೆ..

ಎಂಟು ಜನ ಸುಮ್ಮನೆ ನನ್ನ ಸುತ್ತ ನಿಂತರು..

೬ ಜನ ಹುಡುಗಿಯರು ೨ ಹುಡುಗರು.

ಇವಳೆಲ್ಲಿ ಹೋದಳು..ಅಂತ ಆಚೀಚೆ ನೋಡ್ತಾ ಇದ್ದೆ...ಹೇಯ್...ಅಂತ ಎಲ್ಲ ಒಟ್ಟಿಗೆ ಕಿರುಚಿದರು..

ನಾನು ಬೆಚ್ಚಿ ಬಿದ್ದೆ..ಆಗ ಎಲ್ಲ ಜೋರಾಗಿ ನದಲಿಕ್ಕೆ ಶುರು ಮಾಡಿದರು..

ಗುಂಗುರು ಕೂದಲಿನ ಒಬ್ಬ ಹುಡುಗಿಯ ಹಿಂದೆ ಅವಿತಿದ್ದ ಸ್ನೇಹ..ನನ್ನ ಮುಂದೆ ಬಂದು ನಿಂತಳು..

ಏನೋ ಫುಲ್..ಭಯ ಬಿದ್ಯಾ..ಅದಲು..ಹೊಗೆಲೆ ನಾನ್ಯಾಕೆ ಭಯ ಬಿಳಲಿ ..ಅಂದೇ.

ಓಕೆ ..ಓಕೆ..ಮೀಟ್ ಮೈ ಫ್ರೆಂಡ್ಸ್..

ಲತಾ, ಕಾವ್ಯ, ರಮ್ಯ, ಸಂಜನಾ, ಲಕ್ಷ್ಮಿ, ರಾಜೇಶ್, ಪ್ರಶಾಂತ್ ಅಂಡ್ ವಾಣಿ..

ಎಲ್ಲರೂ..ಹಾಯ್...ಅಂದರು..ನಾನು ಕೂಡ ಹಾಯ್ ...ಫ್ರೆಂಡ್ಸ್..ಅಂದೇ..

ಓಕೆ..ಕಂ..ಲೆಟ್ಸ್ ಗೋ..ಅಂತ.ಯೌಥ್ ಫೆಸ್ಟಿವಲ್ ಕಡೆ..ಕರೆದುಕೊಂಡು ಹೋದರು..

ನಾನು ಅವರ ಜೊತೆ ಮಾತಾಡುತ್ತ ...ನಗುತ್ತ ಹೆಜ್ಜೆ ಹಾಕುತ್ತಿದ್ದೆ..

ಅವರೆಲ್ಲ ಒಂದೇ ಮಾತು ಹೇಳುತ್ತಿದ್ದರು..ಸ್ನೇಹ ಯಾವಾಗ್ಲೂ ನಿಮ್ಮ ಬಗ್ಗೆನೇ ಹೇಳ್ತಾ ಇರ್ತಾಳೆ...ನೀವು ಹಾಗಂದ್ರೀ..ಹೀಗಂದ್ರಿ..
ನಿಮ್ಮದೇ...ಮಾತು ಅಂದರು...ನಾನು ....ಹೌದ..ಎಂಬಂತೆ..ತಲೆ ಆಡಿಸುತ್ತ..ಅವರ ಜೊತೆ ನಡೆದೇ..

ಇಡೀ ಕಾಲೇಜು ಮೈದಾನವೆಲ್ಲ ಹುಡುಗ ಹುಡುಗಿಯರದೇ..ಸಾಮ್ರಾಜ್ಯ..ಎಲ್ಲಿ ನೋಡಿದರು ಒಬ್ಬರಿಗಿಂತ ಒಬ್ಬರು ಎಂಬಂತ ಸುಂದರಿಯರು..
ಅವರನ್ನು ಇಮ್ಪ್ರೇಸ್ಸ್ ಮಾಡೋಕೆ ಬಂದಂತಿದ್ದ ಹುಡುಗರು...
ವೇದಿಕೆ ಮೇಲೆ ಜಗ ಮಗ ದೀಪಗಳು..ಮೈದಾನವೆಲ್ಲ ಸ್ವಲ್ಪ ಮಾತ್ರ ಬೆಳಕು..ಮಬ್ಬುಗತ್ತಲಿನ ವಾತಾವರಣ..
ಒಂದು ಕಡೆ ...ಎಲ್ಲರೂ ನಿಂತು...ವೇದಿಕೆಯತ್ತ ನೋಡುತ್ತಿದ್ದೆವು..

ನೋಡುತ್ತಿದ್ದ ಹಾಗೆ ಒಬ್ಬ ಸುಂದರ ಹುಡುಗಿ ವೇದಿಕೆ ಮೇಲೆ ಬಂದು..ಗುಡ್ ಇವಿನಿಂಗ್ ಫ್ರೆಂಡ್ಸ್..ಅಂದಳು..

ಗುಡ್ ಇವಿನಿಂಗ್...ಅಂತ ಎಲ್ಲರೂ ಒಕ್ಕೊರಲಿನಿಂದ ಹೇಳಿದರು...

ಶುರುವಾಯ್ತು..ಪಾಪ್ ಸಂಗೀತ..ವೇದಿಕೆ ಮೇಲೆ ಯಾವುದೊ ಪಾಪ್ ತಂದ ಬಂದು ಪ್ರದರ್ಶನ ಕೊಡ್ತಾ ಇತ್ತು..ನಮಗೂ ಅದಕ್ಕೂ ಸಂಬಂಧವೇ ಇಲ್ಲದಂತೆ..ನಾವಿಲ್ಲಿ ಮಾತಿನಲ್ಲಿ ಮುಳುಗಿದ್ದ್ವಿ..

ಸ್ನೇಹಾಳ ಎಲ್ಲ ಫ್ರೆಂಡ್ಸ್ ಕೂಡ ನನ್ನ ನೋಡಿ ತುಂಬಾ ಇಮ್ಪ್ರೇಸ್ಸ್ ಆಗಿದ್ರು..ಮೊದಲೇ ನನ್ನ ಬಗ್ಗೆ ಎಲ್ಲ ವಿಚಾರ ಇವಳು ಅವರಿಗೆ ಹೇಳಿದ್ದರಿಂದ..ಎಲ್ಲರೂ ತುಂಬಾ ಇಷ್ಟ ಪಟ್ಟರು ಅಷ್ಟೇ ಅಲ್ಲದೆ ಆಗ ತಾನೇ ಪರಿಚಯ ಆಗಿದ್ದರು ಸಹ ನಾನು ತುಂಬಾ ಬೇಗ ಅವರ ಜೊತೆ ಇನ್ವೊಲ್ವೆ ಆಗಿದ್ದೆ..ಅದು ಅವರಿಗೆಲ್ಲ ತುಂಬಾ ಖುಷಿ ಕೊಟ್ಟಿದ್ದು..

ಆ ಸಂಜೆಯ ಕಾರ್ಯಕ್ರಮದಲ್ಲಿ ಸ್ನೇಹಳನ್ನು ಸೇರಿ..ಎಲ್ಲರನ್ನು ತುಂಬಾ ಗೋಳು ಹುಯ್ದುಕೊಂಡಿದ್ದೆ..ಬಂತು..ತುಂಬಾ ತಮಾಷಿ ಮಾಡಿ ನಕ್ಕೆವು..

ಅಲ್ಲೇ ಡಿನ್ನರ್ ಮುಗಿಸಿ ..ಐಸ್ ಕ್ರೀಂ ತಿನ್ನೋ ಹೊತ್ತಿಗೆ..ರಾತ್ರಿ ೯.೩೦ ದಾಟಿತ್ತು..

ಎಲ್ಲರಿಗೂ ಬಾಯ್ ಹೇಳಿ ನಾನು ಸ್ನೇಹ ಬೈಕ್ ಏರಿ..ಹೊರಟೆವು..ಅವಳನ್ನು ಮನೆಯ ವರೆಗೂ ಡ್ರಾಪ್ ಮಾಡಿ ನಾನು ಹೊರಡಬೇಕಿತ್ತು..

ಗಾಡಿ ಸ್ಟಾರ್ಟ್ ಮಾಡೋ ಹೊತ್ತಿಗೆ.ಅವಳು ಶುರು ಮಾಡಿದಳು..

ತುಂಬಾ ಚಳಿ ಆಗ್ತಾ ಇದೆ ಕಣೋ..!!! ಕಾಲೇಜು ಗೇಟ್ ನಿಂದ ಹೊರಬಂದು..ಗಾಡಿ ರಸ್ತೆಗೆ ಇಳಿಯಿತು..

ಅವಳು ಚಳಿ ಚಳಿ..ಅಂತ ಮತ್ತೆ ಅನ್ನಲು ಶುರು ಮಾಡಿದಳು..!!!

(ಮುಂದುವರೆಯುವುದು)

3 comments:

  1. Hey ur stories are very much interesting kano, i m feeling as if i m watching daily serial only. The only difference is tat will come daily but here i need to wait for days to know next wat happend...

    eagerly waiting for the next episode..........

    ReplyDelete
  2. thanks..da...definatiely you can read the next episode as early as possible...!!!!

    ReplyDelete
  3. very nice that to in Kannada thank u
    very much keep it up work

    ReplyDelete