
.........
ಇನ್ನು ಯಾಕೆ ಅವಳು ಕರೆ ಮಾಡಲಿಲ್ಲ.
ನಾನು ನನ್ನ ಮನದ ಇಂಗಿತವನ್ನು ಅವಳಿಗೆ ಹೇಳಲು ತುದಿಗಾಲ ಮೇಲೆ ನಿಂತು ಚಡಪಡಿಸುತ್ತಿದ್ದೆ. ಅವಳು ಹೇಳಿದ್ದಳು ಆಫೀಸಿನಲ್ಲಿ ಕೆಲಸ ಜಾಸ್ತಿ ಇದೆ ಫ್ರೀ ಮಾಡಿಕೊಂಡು ಕರೆ ಮಾಡುತ್ತೇನೆ ಅಂತ. ನಾನು ಆಯಿತು..ಅಂತ ಹೇಳಿ..ಕಾತರದಿಂದ ಕಾಯುತ್ತಿದ್ದೆ.
ನಾಳೆ ಭೇಟಿ ಮಾಡೋಣ ಬೆಳಿಗ್ಗೆ ೧೧ ಗಂಟೆಗೆ ಲೇಕ್ ವ್ಯೂ ಪಾರ್ಕ್ ಹತ್ತಿರ ಬಾ ಅಂದಳು. ನಾನು ಓ.ಕೆ. ಅಂದೇ.
ಅವಳ ಕರೆ ಬಂದಾಗ ಮಧ್ಯಾನ ೪.೩೦ ದಾಟಿತ್ತು...ಸಂಜೆ ಆಗುತ್ತಿದ್ದಂತೆ...ಸಮಯವೇ ನಿಂತಂತೆ ಭಾಸವಾಗುತ್ತಿತು. ನನ್ನ ಬದುಕಿನ ಬಹಳ ಮುಖ್ಯವಾದ ಘಳಿಗೆ ನಾಳೆ ೧೧ ಗಂಟೆ. ಆ ಯೋಚನೆ ಎಷ್ಟರ ಮಟ್ಟಿಗೆ ನನ್ನ ಆವರಿಸಿತ್ತು ಅಂದರೆ ರಾತ್ರಿ ಊಟವಿರಲಿ ನಿದ್ದೆಯೂ ಹತ್ತಲಿಲ್ಲ. ಅದೆಷ್ಟು ಸಲ ಎದ್ದು ಸಮಯ ನೋಡಿದೆನು...ಇನ್ನು ಬೆಳಗಾಗಲಿಲ್ಲ...ಛೆ..ಸೂರ್ಯ ಇಂದು ತುಂಬಾ ತಡವಾಗಿ ಬರುವ ಹಾಗಿದೆ...ಅಂತ..ನನ್ನಷ್ಟಕ್ಕೆ ನಾನೇ ಏನೇನೊ ಯೋಚಿಸುತ್ತ ಹಾಸಿಗೆಯ ಮೇಲೆ ನಿದ್ದೆ ಬರದೆ ಹೊರಳಾಡುತ್ತಿದ್ದೆ. ನಿದ್ದೆ ಮಾತ್ರ ಸುಳಿಯುವ ಮಾತೆ ಇಲ್ಲ. ಬೆಳಗಾಯಿತು...ಎದ್ದು...ಬಾತ್ ರೂಮಿನತ್ತ ಓಡಿದೇ ...ನನ್ನ ಕರ್ಮಕ್ಕೆ ಚಳಿ ಕೊರೆಯುತ್ತಿತ್ತು..ನೀರು ಮಾತ್ರ ಬಿಸಿ ಇರಲಿಲ್ಲ..ನಿನ್ನೆ ಸೂರ್ಯನ ದರುಷಣವೇ ಆಗದೆ ಸೋಲಾರ್ ಕೆಲಸ ಮಾಡಿರಲಿಲ್ಲ. ಕಣ್ ಮುಚ್ಚಿಕೊಂಡು ಕೊರೆಯುತ್ತಿದ್ದ ತಣ್ಣೀರು ಮೈಮೇಲೆ ಸುರಿದುಕೊಂಡೆ. ಮೈಯೆಲ್ಲಾ ಗಡ ಗಡ ನಡುಗಲು ಶುರು ಆಯಿತು..ಮತ್ತೊಮ್ಮೆ..ಅದೇ ಕೆಲಸ ಮಾಡಿದೆ..ಚಳಿ ....ಚಳಿ ಚಳಿ ತಾಳೆನು ಈ ಛಳಿಯ ಅಹ...ಹಾಡು ನೆನಪಾಯಿತು..ಅಂತು ಇಂತೂ ತಣ್ಣೀರು ಸ್ನಾನ ಮುಗಿದಿತ್ತು..ನನ್ನ ದೇಹ ನನ್ನ ಕಂಟ್ರೋಲ್ ನಿಂದ ಹೊರಗಿತ್ತು...
ಯಾವ ಬಟ್ಟೆ ಹಾಕೊಳೋದು..ಹುಡುಕಿದೆ ಕಬೋಡ್ ಎಲ್ಲ ಚಲ್ಲ ಪಿಲ್ಲಿ ಮಾಡಿಟ್ಟೆ...ಕೊನೆಗೆ ನೀಲಿ ಜೀನ್ಸ್ ಮತ್ತು ಟಿ ಶರ್ಟ್ ಹಾಕಿಕೊಂಡು ತಲೆಯನ್ನು ತಿದ್ದಿ ತೀಡಿಕೊಂಡು..ಹೊರಟೆ..ಗಂಟೆ..ಇನ್ನು ಒಂಬತ್ತು..
ಇಷ್ಟು ಬೇಗ ಹೊರಟು ಏನು ಮಾಡುವುದು..ತಿಳಿಯಲಿಲ್ಲ..ಆದರು..ಹೊರಟೆ..ಹೋಗಿ ಪಾರ್ಕ್ ಹತ್ತಿರ ಬೈಕ್ ಪಾರ್ಕ್ ಮಾಡಿ ಒಳಗೆ ಅಡಿ ಇಟ್ಟೆ..ಅದು ಬಲಗಾಲು..!
ಎರಡು ಗಂಟೆ ಕಳೆಯುವ ಹೊತ್ತಿಗೆ ಎರಡು ಯುಗ ಕಳೆದಂತೆ ಆಯಿತು. ಪಾರ್ಕಿನ ಗೇಟಿನತ್ತ ನೋಡುತ್ತಲೇ ಇದ್ದೆ..ಅದೆಷ್ಟೋ ಹುಡುಗಿಯರು..ಹುಡುಗರು..ಬರುತ್ತಿದ್ದರು..ಹೋಗುತ್ತಿದ್ದರು..ಇವಳು ಇನ್ನು ಬಂದಿರಲಿಲ್ಲ ಅದೇ ನನ್ನ ಸಂಕಟ ವಾಗಿತ್ತು.
ಗಂಟೆ..ಹನ್ನೊಂದು ಅಯ್ಯಿತು..ಮತ್ತೆ ನೋಡಿದೆ..ಅಲ್ಲೆಲ್ಲೋ ದೂರದಲ್ಲಿ ಬಿಳಿ ಚೂಡಿದಾರ್ ..ಕಾಣಿಸಿತು..ಅವಳೇ..ಅನ್ನಿಸಿತು..ಹತ್ತಿರ ಹತ್ತಿರ ಬರುತ್ತಿದ್ದಳು...ಅವಳೇ ಆಗಿದ್ದಳು..
ನಾನು ಶತ ಪಥ..ಅಂತ ಹೆಜ್ಜೆ ಹಾಕುತ್ತಿದ್ದವನು..ಸುಮ್ಮನೆ ಅವಳನ್ನೇ ನೋಡುತ್ತಾ ನಿಂತೇ..ಜೋರಾಗಿ ಅಡಿ ಇಟ್ಟರೆ ಭೂಮಿಗೆ ನೋವಾಗುತ್ತೇನೋ ಎಂಬಂತೆ..ಹೆಜ್ಜೆ ಮೇಲೆ ಹೆಜ್ಜೆ ಇತ್ತು ನಡೆದು ನನ್ನತ್ತ ಬರುತ್ತಿದ್ದಳು. ನನ್ನ ಎದೆ ರಿಂಗಣಿಸುತ್ತ ಇತ್ತು .
ಹಾಯ್. .ಯಶಸ್..ಅಂದಳು..ನಾನು ಹಾಯ್..ಕಾವ್ಯ..ಅಂದೇ..
ಇಬ್ಬರು ಕುಳಿತು ಕೊಂಡೆವು. ನಾನು ಅವಳನ್ನೇ ತದೇಕಚಿತ್ತದಿಂದ ನೋಡುತ್ತಿದ್ದೆ..ಅವಳ ಅಂದ ಚಂದ ಹಾವ ಭಾವ ರೂಪ ರಾಶಿ ನೋಡಿ ಮಂತ್ರ ಮುಗ್ದನಾಗಿದ್ದೆ..ಶ್ವೇತ ವಸ್ತ್ರಧಾರಿಯಾಗಿ ನನ್ನ ಕಣ್ಣಿಗೆ ಅಪ್ಸರೆ ಹಾಗೆ ಕಾಣುತ್ತಿದ್ದಳು. ಅವಳ ಗುಂಗುರು ಕೂದಲು..ಗಾಳಿಗೆ ಪದೇ ಪದೇ ಹಣೆಗೆ ತಾಗುತ್ತ ಕಿವಿಗೆ ತಾಗುತ್ತ ಇದ್ದಾರೆ ಅವಳು ಮುಂಗುರುಳನ್ನು ಮತ್ತೆ ಮತ್ತೆ ಹಿಂದಕ್ಕೆ ಸರಿಸುವ ಪ್ರಯತ್ನ ಮಾಡುತ್ತಿದ್ದಳು..ಅವಳು ಸುಮ್ಮನೆ ಕುಳಿತಿದ್ದಳು..ನಾನು ಸಹ. ...???
ಅವಳು ಕುಳಿತಿರುವ ಭಂಗಿ ನೋಡಿ ಅಂದು ಕೊಂಡೆ ಸಾಕಷ್ಟು ಸಮಯ ಫ್ರೀ ಮಾಡಿಕೊಂಡೆ ಬಂದಿದ್ದಾಳೆ ಅಂತ..!
ಅವಳ ಮುಖದಲ್ಲಿ ಕುತೂಹಲ ಇತ್ತು..ನನ್ನ ಮನದಲ್ಲಿ ಆತಂಕ ಇತ್ತು..ಅವಳನ್ನೇ ದಿಟ್ಟಿಸಿ ನೋಡುತ್ತಿದ್ದೆ..ಮಾತು..ಹೊರಡಲಿಲ್ಲ..ಅವಳು ಕೇಳಿದಳು..ಏನಾದರು..ಮಾತಾಡು..ನಾ ಮತ್ತೆ ಮತ್ತೆ ಮೌನಿಯಾದೆ. ಅವಳನ್ನು ನೋಡುತ್ತಿದ್ದರೆ ನನಗೆ ಮಾತು ಹೊರಳಲಿಲ್ಲ..ಹಾಗೆ ನೋಡುತ್ತಾ ದಿನ ದೂದಬೇಕು..ಆ ಚೆಲುವಿನ ಖನಿಯನ್ನು ಕಣ್ಣ ತುಂಬಿಕೊಳ್ಳಬೇಕು..ಮನಸು ತುಂಬಿಕೊಳ್ಳಬೇಕು..ಎಂಬ ಆಸೆ ಇತ್ತು...
ಅವಳ ಅಂದ ಚೆಂದ ರೂಪ ಲಾವಣ್ಯ ನನ್ನ ಬೇರೆಯದೇ ಪ್ರಪಂಚಕ್ಕೆ ಕರೆದುಕೊಂಡು ಹೋಗಿತ್ತು..ಇಂತಹ ಸ್ನಿಗ್ಧ ಸೌಂದರ್ಯ ವತಿಯನ್ನು ನಾನು ಪ್ರಪೋಸ್ ಮಾಡಲು ಹೊರಟಿದ್ದೆನಾ..? ನನಗೆ ನಾನೇ ಮತ್ತೆ ಮತ್ತೆ ಕೇಳಿಕೊಂಡೆ...ಅವಳ ನಗುವಿನಲ್ಲಿ ಸಾವಿರ ಬಲ್ಬುಗಳ ಬೆಳಕಿತ್ತು...ಅವಳು ನಕ್ಕಾಗ ಗುಣಿ ಬೀಳುವ ಆ ಕೆನ್ನೆಗ ಅಮೃತ ದ ಅಷ್ಟು..ಶಕ್ತಿ ಇತ್ತು.ಇನ್ನೇನು ಬೇಕು ಈ ಬದುಕಿಗೆ ಭಾವ ಲೋಕದಲ್ಲಿ ತೇಲಿ ಹೋಗುತ್ತಿದ್ದೆ..
೩೦ ನಿಮಿಷವಾಯಿತು..ನಲವತ್ತು ನಿಮಿಷವಾಯಿತು..ಒಂದು ಘಂಟೆಯೂ..ಕಳೆಯಿತು..ನಾ ಮಾತಾಡಲಿಲ್ಲ......ಅವಳು ಆಗಾಗ ಮಾತಾಡುವ ಪ್ರಯತ್ನ ಮಾಡಿದಳು ...ನಾನು ಮೌನಕ್ಕೆ ಶರಣಾಗಿದ್ದೆ ....ಅವಳನ್ನ ನೋಡುವ ಭರದಲ್ಲಿ...ಯಾವುದೊ ಅವ್ಯಕ್ತ ಭಾವ ನನ್ನಲಿ ಮೂಡಿತ್ತು...
.....ಸಮಯ ಮಾತ್ರ ತನ್ನ ಪಾಡಿಗೆ ತಾನು ಮುಂದೆ ಮುಂದೆ ಓಡುತ್ತಿತ್ತು...ಕೋಮಲವಾದ ಅವಳ ಮುಖದಲ್ಲಿ ಅಸಹನೆಯ ಗೆರೆಗಳು ಕಾಣಿಸಿದವು...ನನ್ನ ಮನಸು ಕಂಪಿಸಿದಂತೆ ಆಯಿತು..ಅವಳತ್ತ ನೋಡಿದೆ..ಅವಳು ಕೋಪದಿಂದ ಮೇಲೆದ್ದಳು..ಎದ್ದವಳೇ ಮುಖ ಸಿಂಡರಿಸಿಕೊಂಡು..ಹೇಳಿದಳು..ಇಲ್ಲಿ ಬಂದು ಕುಳಿತು ಒಂದು ಘಂಟೆ ಕಳೆಯಿತು..ಹೀಗೆ ಸುಮ್ಮನೆ ಕುಳಿತು ಕೊಂಡರೆ ಪ್ರಯೋಜನವಿಲ್ಲ..ಏನೋ ಮಾತಾಡಬೇಕು ಅಂತ ಕರೆಸಿ ನೀ ಹೀಗೆ ಸುಮ್ಮನೆ ಕೂತರೆ ನಾ ಏನು ಮಾಡಲಿ...ನನ್ನ ತಾಳ್ಮೆಗೂ ಒಂದು ಮಿತಿಯಿದೆ...
ನನಗಿನ್ನೂ ಕೂರುವಷ್ಟು ತಾಳ್ಮೆಯಿಲ್ಲ...ಗುಡ್ ಬೈ..ಅಂದು ಹೊರಟಳು....
ನಾ ಈಗ ಮೌನ ಮುರಿಯಲೇ ಬೇಕಾದ ಅನಿವಾರ್ಯತೆ..ಬಂದಿತ್ತು..
ಒಂದು ನಿಮಿಷ..ಕಾವ್ಯ..
ಏನು..
ನನ್ನ ತಪ್ಪು ತಿಳಿಬೇಡ ...ನಾನು ನಿನ್ನ ಬಳಿ ಮಾತನಾಡಬೇಕೆಂದು ಕೇಳಿದಾಗ ನೀ ಒಪ್ಪಿದೆ..ಇಲ್ಲಿಯವರೆಗೂ ಬಂದೆ..ಸಂತೋಷ..ಆದರೆ ನಾ ಮೌನವಾಗಿ ಕುಳಿತು ನಿನ್ನೆಡೆಗೆ ನೋಡುತ್ತಿದೇನೆ..ಮಾತನ್ನು ಮಾತ್ರ ಆಡುತ್ತಿಲ್ಲ..ಅದಕ್ಕಾಗಿ ನೀ ಕೋಪಿಸಿಕೊಂಡು ಹೊರಟಿರುವೆ..
ಆದರೆ ನಿನಗೆ ಗೊತ್ತ ಕಾವ್ಯ..ನಾ ನಿನ್ನ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತೇನೆ..ಅದೆಷ್ಟು ನೀ ನನ್ನ ಆವರಿಸಿಕೊಂದಿರುವೆ ಅಂದರೆ ನನ್ನ ಬದುಕಿನ ಪ್ರತಿ ಘಳಿಗೆಯಲ್ಲೂ, ಪ್ರತಿ ಕೆಲಸದಲ್ಲೂ, ಪ್ರತಿ ನೆನಪಿನನ್ನು ನೀ ಇರುವೆ. ಹಾಗಾಗಿ ನೀ ಬಂದ ಸಂಭ್ರಮವನ್ನು ನನ್ನ ಕಣ್ಣುಗಳು ಆನಂದದಿಂದ ನೋಡುತ್ತಾ ಪುಳಕಗೊಳ್ಳುತ್ತಿದ್ದವು.....
ಮತ್ತು ಒಂದು ಸ್ವಾರ್ಥ ಇತ್ತು ಕಾವ್ಯ..ನಾ ಮಾತಾಡಿ ಮುಗಿಸಿದ ತಕ್ಷಣ ನೀ ನಿನ್ನ ಅಭಿಪ್ರಾಯ ಹೇಳಿ (ಅದು ಏನಾದರು ಸರಿ) ಹೊರಡುತ್ತಿಯ....? ಅದನ್ನು ನಾನು ತಡೆದುಕೊಳ್ಳಲಾರೆ ..
ನಾ ಮೌನಿಯಾಗಿದ್ದಷ್ಟು ಹೊತ್ತು ನೀ ಇಲ್ಲೇ ಇರುತ್ತಿಯ ...ನಂತರ ವಿಷಯ ಪ್ರಸ್ತಾಪಿಸೋಣ ಅನ್ನೋ...ಚಿಂತನೆಯಲ್ಲಿ..ನಾ ಮುಳುಗಿದ್ದೆ..
ಆದರೆ ಒಂದಂತು..ಸತ್ಯ...ನಾ ನಿನ್ನ ....ತುಂಬಾ ಪ್ರೀತಿಸುತ್ತೇನೆ...!!!!
.......
......
,,,,ಇಷ್ಟು ಹೇಳಿ ಮತ್ತೆ ಮೌನಕ್ಕೆ ಶರಣಾದೆ ....
ಸಾಕಷ್ಟು ದೂರದಲ್ಲಿ ಇದ್ದ ಕಾವ್ಯ ಳ ಮುಖದಲ್ಲಿದ್ದ ಗಂಭೀರತೆ, ಕೋಪ ಮಾಯವಾಗಿ ಮುಗುಳ್ನಕ್ಕಳು..ಓಡಿ ಬಂದು...ನನ್ನ ಹತ್ತಿರ ನಿಂತಳು..ನಿಂತು ಹೇಳಿದಳು..
ಅಯ್ಯೋ..ಪೆದ್ದು..ನಾನು ಕೂಡ ನಿನ್ನ ಪ್ರೀತಿಸ್ತ ಇದೀನಿ ಕಣೋ..ನೀನು ಬೇಗ ನಿನ್ನ ಬಾಯಿಂದ I Love You..ಅಂತ ಹೇಳಲಿ ಅಂತ ಕಾಯುತ್ತ ಕುಳಿತಿದ್ದೆ..
ನೀ ಮೌನವಾಗಿ ಕುಳಿತದ್ದು ನೋಡಿ ನನ್ನ ಆತಂಕ ಜಾಸ್ತಿ ಆಯಿತು..ಅದಕ್ಕೆ ಕೋಪ ಬಂತು..ಎಲ್ಲಿ ನೀನು ಈ ವಿಷಯ ಪ್ರಸ್ತಾಪ ಮಾಡುವುದಿಲ್ಲವೋ ಅಂತ..,,....ಅದಕ್ಕೆ..ಎದ್ದು ಹೋಗುವ ನಾಟಕ ಮಾಡಿದೆ..ಅಂದಳು...
ಅಂದವಳೇ..
I Love you yashas....ಅಂತ ಓಡಿ ಬಂದು ನನ್ನ ತೆಕ್ಕೆಗೆ ಬಿದ್ದಳು...!!!!
-ಹೆಚ್.ಆರ್.ಪ್ರಭಾಕರ್.
very good HRP
ReplyDeletethank..u..ji
ReplyDelete