ರಾಕೇಶ್ ಒಂದು ಕಂಪೆನಿಯ ಮುಖ್ಯಸ್ತ. ನೋಡಲು ಸುಂದರ, ಆಕರ್ಷಕ ವ್ಯಕ್ತಿತ್ವ, ಅದ್ಭುತ ಮಾತುಗಾರ. ಇದೆಲ್ಲದಕಿಂತ ಹೆಚ್ಚಾಗಿ ಒಳ್ಳೆಯ ಮನುಷ್ಯ. ಅಪ್ಪ ಅಮ್ಮ ಶಿವಮೊಗ್ಗದವರು..ಅಲ್ಲೇ ವಾಸ...ಅಣ್ಣ ಪುಣೆ ಯಲ್ಲಿ ಕೆಲಸ,ಅಣ್ಣ , ಅತ್ತಿಗೆ ಇಬ್ಬರು ಮಕ್ಕಳು ಬೇಸಿಗೆ ರಜಕ್ಕೆ ಶಿವಮೊಗ್ಗಕ್ಕೆ ಬರುತ್ತಾರೆ..ಏನಾದರೂ ಕಾರ್ಯಕ್ರಮ ಇದ್ದಾರೆ ಬರುತ್ತಾರೆ..ಬೆಂಗಳೂರಿನಲ್ಲಿ ಇವನು ಮನೆ ಮಾಡಿಕೊಂಡು..ಒಂಟಿಯಾಗಿ..ವಾಸ...ಇವನ ಸೈಲೆಂಟ್ nature ಗೆ PG adjust ಆಗೋಲ್ಲ ಅಂತ...ಮನೆ ಮಾಡಿದ..ಆಗಾಗ ಫ್ರೆಂಡ್ಸ್ ಎಲ್ಲ ಸೇರಿ ಮನೇಲಿ...ಪಾರ್ಟಿ ಮಾಡ್ತಾ, ಹರಟೆ ಹೊಡೆಯುತ್ತಿದ್ದರು...ಯಾರನ್ನು ರೂಂ ಮೆಟ್ ಮಾಡಿಕೊಳ್ಳುವ ಮನಸು ಇವನಿಗೆ ಇರಲಿಲ್ಲ...
ರಾತ್ರಿ ನಿದ್ದೆ ಬರ್ಲಿಲ್ಲ ಅಂದ್ರೆ..ಯಾವುದಾದರು ಪುಸ್ತಕ ಹಿಡ್ಕೊಂಡು ಕೂರೋ ವ್ಯಕ್ತಿ..ಬೇರೆಯ ಹುಡುಗರು..ರೂಂ ನಲ್ಲಿದ್ದರೆ..ಸುಮ್ನೆ ಅವರಿಗೂ..ತೊಂದರೆ..ನನಗು ತೊಂದರೆ...ಯಾಕೆ ಬೇಕು...? ಅಂತ ಸುಮ್ಮನಾಗಿದ್ದ..
ಅವನ ಸಂಗಕ್ಕಾಗಿ ಹುಡುಗಿಯರು ನಾ ಮುಂದು ತಾ ಮುಂದು ಎಂಬಂತೆ ಬರುತ್ತಿದ್ದರು..ಸ್ಪುರದ್ರೂಪಿ..ಬುದ್ಧಿವಂತ... ಇವನು ಮಾತ್ರ ಚೂಸಿ. ಒಮ್ಮೆ ದೇವಸ್ತಾನಕ್ಕೆ ಹೋದಾಗ ಒಂದು ಹುಡುಗಿಯನ್ನ ನೋಡಿದ. ನೋಡುತ್ತಿದ್ದ ಹಾಗೆ ಯಾವುದೊ ಹಳೆಯ ನೆನಪು, ದೃಶ್ಯ, ಮಾತು, ನಗು, ಮುಖ ಮನಸಿನ ಸ್ಮೃತಿ ಪಟಲದಲ್ಲಿ ಸುಲಿದು ಹೋಯ್ತು. ಅರೆ ಯಾರಿವಳು? ಇವಳನ್ನು ಎಲ್ಲೊ ನೋಡಿದ ಹಾಗಿದೆಯಲ್ಲ ಎಂದು ಮನಸು ಹೇಳುತ್ತಿತ್ತು.ನೋಡಲು ತುಂಬಾ ರೂಪವತಿಯಾಗಿದ್ದಳು. ತಿಳಿ ನೀಲಿ ಬನದ ಚುಡಿ ದಾರ್ ಹಾಕಿದ್ದಳು..ಮುಖ ನೋಡಿದ ತಕ್ಷಣ ಎಂತಹವರಿಗೂ ಮತ್ತೊಮ್ಮೆ ನೋಡಬೇಕೆನಿಸುವ ಹಾಗನ್ನಿಸುತ್ತಿತ್ತು. ಒಬ್ಬಳೇ ಬಂದ ಹಾಗಿತ್ತು..ಮನಸ್ಸು ಮಾತ್ರ ಕೇಳಬೇಕೆಂದು ಚಡಪಡಿಸುತ್ತಿತ್ತು..ಆದರೆ....ಕೇಳುವುದು ಹೇಗೆ? ಕೇಳಿದರೆ ತಪ್ಪು ತಿಳಿದುಕೊಳ್ಳಬಹುದು? ಇರಲಿ ನೋಡೋಣ ಮುಂದೆ..ಎಂದೂ ಅಂದು ಮಾತನಾಡಿಸದೆ ಮನೆಗೆ ಬಂದ.
ಇದೆ ವಿಚಾರವನ್ನು ತನ್ನ ಸಹೋದ್ಯೋಗಿ ಗೌರಿ ಗೆ ಹೇಳಿದ. ಅವಲೋ ಮಾದ್ರೆನ್ ಹುಡುಗಿ.. ಅವಳು ಮಾತನಾಡಿಸಿದ್ದಾರೆ ತಪ್ಪೆನಾಗ್ತಿತ್ತು? ಎಂದೂ ಇವನನ್ನೇ ಕೇಳಿದಳು. ಸರಿ ಅಂದು ಸಂಜೆ ಗೌರಿ ಮತ್ತು ರಾಕೇಶ್ ಇಬ್ಬರು ಕಾಫೀ ಡೇ ನಲ್ಲಿ ಕುಳಿತಿದ್ದಾಗ ..ತಾನು ದೇವಸ್ತಾನದಲ್ಲಿ ನೋಡಿದ ಹುಡುಗಿ ರಸ್ತೆ ದಾಟಲು ಪ್ರಯತ್ನ ಪಡುತ್ತ ಇದ್ದಳು..ಹೇಯ್ ಗೌರಿ...ನೋಡು ಆ ಹುಡುಗಿ...ಎಂದೂ ಒಳಗಿನಿಂದಲೇ ತೋರಿಸಿದ...
just wait i will be back....ಎಂದೂ ಗೌರಿ ಅಲ್ಲಿಂದ ಏಳಲು ಪ್ರಯತ್ನಿಸಿದಳು..hey stop da...not now...ಅಂದ.
ಏನೋ ನೀನು ತಲೆಗೆ ಹುಳ ಬಿಟ್ಟು ಕೊಂಡಿದಿಯಾ ಅದನ್ನ ಕ್ಲಿಯರ್ ಮಾಡೋಣ ಅಂದ್ರೆ ಅದಕ್ಕೂ ಒಪ್ಪೋಲ್ಲ. ಏನ್ ಹುಡುಗನಪ್ಪ...ನೀನು? ಸಂಕೋಚದ ಮುದ್ದೆ ಅಂದಳು....
ಅಂದು ರಾತ್ರಿ...ಶ್ವೇತ ಫೋನ್ ಮಾಡಿದಾಗ ಈ ವಿಷಯ ತಿಳಿಸಿದ...ಶ್ವೇತ ಮೈಸೂರಿನಲ್ಲಿ ಉದ್ಯೋಗಿ...ಇವನ ಕ್ಲಾಸ್ ಮೆಟ್. ಅವಳಿಗೆ ರಾಕೇಶ್ ಎಂದರೆ ತುಂಬಾ ಇಷ್ಟ ಒಬ್ಬ ಫ್ರೆಂಡ್ ಆಗಿ..ಅವಳು ಹೇಳಿದಳು...ಈ ಸಲ ಸಿಕ್ಕಾಗ ಮಾತ್ರ ಮಿಸ್ ಮಾಡದೇ ಮಾತನಾಡಿಸು...ಅವಳು ಯಾರು, ಏನ್ ಮಾಡುತ್ತಿದ್ದಾಳೆ..ಅನ್ನೋದು ಕೆದಕು...ಆಗಲಾದರೂ...ನಿನ್ನ ತಲೆಯಿಂದ ಈ ಯೋಚನೆ ಹೋಗಬಹುದು...ಮೊದಲು ಕ್ಲಿಯರ್ ಮಾಡಿಕೋ...ಸುಮ್ನೆ ತಲೆ ಕೆಡಿಸ್ಕೋಬೇಡ ಅಂತ...ಹೇಳಿ...ತನ್ನ ಬಾಯ್ ಫ್ರೆಂಡ್ ಫಾರಿನ್ ನಿಂದ ಬರ್ತಾ ಇದಾನೆ..ಮುಂದಿನ ತಿಂಗಳು...ನಿಶಿತಾರ್ಥ..ಅಂತ...ಹೇಳಿ...ಮಾತು ಮುಗಿಸಿದಳು...
ಮಧ್ಯ ರಾತ್ರಿಯಾದರೂ...ನಿದ್ದೆ ಹತ್ತಲಿಲ್ಲ...
ಎದ್ದು ಹೊರಗೆ ಬಂದು...ಸಿಗರೇಟ್...ಹಚ್ಚಿದ...ಟೆರೆಸ್ ನ ಒಂದು ಮೂಲೆಯಲ್ಲಿ ನಿಂತು...ಯೋಚಿಸ ತೊಡಗಿದ..
ಬೆಳಿಗ್ಗೆ ಭಾನುವಾರವಾದ್ದರಿಂದ...ರಾಹುಲ್ ಫೋನ್ ಮಾಡಿ...ಇಂದು 'thunder feel' ರೆಸಾರ್ಟ್ ಗೆ ಹೋಗೋಣ...ಪಾರ್ಟಿ ಮಾಡೋಣ.ಇಂದು ಸಹನಾ ಬರ್ತ್ ಡೇ ವಿಶ್ ಮಾಡಿದ್ಯ ಕೇಳಿದ....be ready i am coming within an hour...ಅಂದು ಫೋನಿಟ್ಟ...! ಇವನು ಸಹನಾ ಗೆ ಫೋನ್ ಮಾಡಿ...ವಿಶ್ ಮಾಡಿದ..!
ರಾಹುಲ್ ತನ್ನ ಸಫಾರಿ ಕಾರನ್ನು ೧೨೦ ರ ಸ್ಪೀಡ್ನಲ್ಲಿ ಓಡಿಸುತ್ತಿದ್ದ...ಹಿಂದೆ , ಅಮರ್, ಜ್ಯೋತಿ, ಇಂದಿರಾ, ಸಹನಾ ...ಜೋರಾಗಿ ಹರಟೆ ಹೊಡೆಯುತ್ತಿದ್ದರು...
ಇವನು ಮಾತ್ರ...ಅದೇ...ಹುಡುಗಿಯ ನೆನಪಲ್ಲಿ.........ಯೋಚನೆಯಲ್ಲಿ ಬಿದ್ದಿದ್ದ...ಯಾರವಳು...? ಯಾರವಳು...? ಎಷ್ಟು ಯೋಚಿಸಿದರು...ನೆನಪಗುತ್ತಿಲ್ಲವಲ್ಲ...?
ಬೆಂಗಳೂರಿನಿಂದ ೮೦ ಕಿಲೋ ಮೀಟರ್ ದೊರದಲ್ಲಿತ್ತು ರೆಸಾರ್ಟ್...ರಾಹುಲ್ ನ ...ಸ್ಪೀಡ್ ಗೆ ರೆಸಾರ್ಟ್ ತಲುಪಿದ್ದೂ...ಆಯಿತು....
ಇಂದು ಸಹನಾಳ...ಬರ್ತ್ ಡೇ ..ಇದ್ದುದ್ದರಿಂದ..ಈ ಪಾರ್ಟಿ...ಜೋರಾಗಿತ್ತೂ..ಮತ್ತೆ ರಾತ್ರಿ ಬಂದು...ಮನೆ ತಲುಪಿದಾಗ 11 ಆಗಿತ್ತು...
ಬೆಳಿಗ್ಗೆ ಎದ್ದಾಗ ಸ್ವಲ್ಪ ತಲೆ ನೋವು ಇದೆ ಅನ್ನಿಸಿತು.....ನಿನ್ನೆಯ ಹ್ಯಾಂಗ್ ಓವರ್ ಇಣುಕುತ್ತಿತ್ತು...oh..god..ಅವಳ ನೆನಪಲ್ಲಿ ಕುಡಿದದ್ದು ಸ್ವಲ್ಪ ಜಾಸ್ತಿಯಾಯ್ತು...ಈಗ...ತಲೆನೋವು...ಛೆ......ಅಂತ ...ಬಾತ್ ರೂಮಿನತ್ತ ಹೊರಟ.
ಆಫೀಸಿನಲ್ಲಿ...ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಂತೆ...ಅಮ್ಮ ಫೋನ್ ಮಾಡಿದರು...hi...ಅಮ್ಮ ಹೇಗಿದ್ದೀಯ..ಅಪ್ಪಾಜಿ ಹೇಗಿದಾರೆ...ಅಂದ..ನೀನು ಮುಂದಿನ ಶನಿವಾರ ಊರಿಗೆ..ಬಾ ಭಾನುವಾರ ಒಂದು ಕಡೆ ಹುಡುಗೀನ ನೋಡಲು...ಹೋಗಬೇಕು...ಒಳ್ಳೆ ಸಂಭಂದ ಬಂದಿದೆ..
ಅಮ್ಮ..ಈಗಲೇ ಮದುವೆಗೆ ಏನ್ ಅವಸರ..ಮುಂದಿನ ವರ್ಷ ನೋಡೋಣ..ಅಂದ..
ಆಕಡೆ ಅಪ್ಪಾಜಿ..ಲೋ ಮಗನೆ ನಮಗಿರೋ ಒಂದೇ ಜವಾಬ್ದಾರಿ..ಆಸೆ ಅಂದ್ರೆ ನಿನ್ನ ಮದುವೆ...ಸುಮ್ನೆ ಬಾ ಹೋಗಿ ನೋಡಿಕೊಂಡು ಬರೋಣ ..ನಿನಗಿಷ್ಟವಾದರೆ ಮದುವೆ....! ಆಯ್ತಾ..
ಆಯಿತು ಅಪ್ಪಾಜಿ...ಬರ್ತೀನಿ...
ಬುಧವಾರ ಸಂಜೆ...ಎಲ್ಲರೂ ಸೇರಿ ಗರುಡಾ ಮಾಲ್ ಗೆ ಹೋಗಿ ಶಾಪಿಂಗ್ ಮಾಡಿ..ಅಲ್ಲೇ mac'donald..ನಲ್ಲಿ ಕುಳಿತು..ಬರ್ಗರ್ ತಿನ್ನುತ್ತಿದ್ದಾಗ..ಈ ಮದುವೆ ಪ್ರಪೋಸಲ್ ವಿಷಯ..ಅಮ್ಮ ಫೋನ್ ಮಾಡಿದ್ದೂ..ಹೇಳಿದ..ಅದಕ್ಕೆ..ಕಿರಣ್..ಸಹನಾ ಎಲ್ಲರೂ ...ಹೋಗಿ ಬಾರೋ..
ಹುಡುಗಿಯನ್ನು ನೋಡಿಕೊಂಡು ಬಾ...ಅಪ್ಪ ಅಮ್ಮನಿಗೂ ಸಮಾಧಾನ..
........ಅವಳು...?.......?...........?
ಮನಸಿನಲ್ಲಿ ಅಂದುಕೊಂಡ......ಲೋ ಮಗನೆ..ನನಗೆ ಗೊತ್ತು ನಿನ್ನ ಚಿಂತೆ...ನೀ ಹೋಗಿ ಬಾ ....
ಮನಸಿಲ್ಲದಿದ್ದರೂ...ಊರಿಗೆ ಹೋದ..
ಭಾನುವಾರ ಮುಂಜಾನೆ ಅಪ್ಪ ಅಮ್ಮ ಮಾವ...ಸೇರಿ..ಕಾರಿನಲ್ಲಿ ಹೊರಟರು...ಆ ಪ್ರಕೃತಿಯ ಮಡಿಲಿನಿಂದ..ತಂಗಾಳಿ ಬೀಸುತ್ತಿತ್ತು...ತೀರ್ಥಹಳ್ಳಿಯ ಆ ರಸ್ತೆ ನಿರ್ಜನವಾಗಿ ...ಪ್ರಕೃತಿ ಸೌಂದರ್ಯ..ಹೆಚ್ಚು ಆಪ್ತವಾಗುತ್ತಿತ್ತು..ನದಿ ತೀರದ ಆ ಹಳ್ಳಿ...ಮಲೆನಾಡಿನ ಸ್ಪಷ್ಟ ಚಿತ್ರಣವನ್ನು ನೀಡುತ್ತಿತ್ತು...
ಇವನ ಮನಸ್ಸು ಮಾತ್ರ.......ಅವಳ ಹಿಂದೆ ಸುತ್ತುತ್ತಿತ್ತು.....
ಬನ್ನಿ..ಬನ್ನಿ..ಎಂದೂ ಹುಡುಗಿಯ ತಂದೆ ಸ್ವಾಗತ..ಕೋರಿದರು..ಎಲ್ಲರೂ ಒಳಗೆ ಹೋಗಿ ಕುಳಿತಾಗ...ಮನೆ...ಸುಂದರವಾಗಿತ್ತು..ಎಲ್ಲರಿಗೂ..ಹುಡುಗಿಯ ತಾಯಿ..ನೀರು ಕೊಟ್ಟರು...
ಉಭಯಾ ಕುಶಲೋಪರಿ ಆಯಿತು...
ಶಾರದಾ...ಮಗಳನ್ನು ಕರೆದುಕೊಂಡು ಬಾ..
ರಾಕೇಶ್ ಪತ್ರಿಕೆ ಓದುತ್ತಿದ್ದ..ಮಾವ...ಲೋ ಪತ್ರಿಕೆ ಆಮೇಲೆ ಓದು..ಅಲ್ಲಿ ನೋಡು...ಮೆಲುದನಿಯಲ್ಲಿ ಹೇಳಿದರು..
ನಿಧಾನವಾಗಿ ತಲೆ ಎತ್ತಿ ನೋಡಿದ...!!!!
ಮಲೆನಾಡಿನ ಕಾಫೀ ಪರಿಮಳ ..........ಮನೆಯಲ್ಲ ಹರಡಿತ್ತು...
.........................
ಕಾಫೀ ಹಿಡಿದು ಬರುತ್ತಿದ್ದಳು ಹುಡುಗಿ...!!!. ಗುಲಾಬಿ ಬಣ್ಣದ ಸೀರೆಯುಟ್ಟು......ತಲೆ ತಗ್ಗಿಸಿ..ನಿಧಾನವಾಗಿ ನಡೆಯುತ್ತಾ..ಹೆಜ್ಜೆ ಮೇಲೆ ಹೆಜ್ಜೆ ಇಡುತ್ತ..ಸಂಕೋಚದಿಂದ..ಬರುತ್ತಿದ್ದಳು..ಗೆಜ್ಜೆಯ ನಿನಾದ..ಹಿಮ್ಮೇಳವಾಗಿ ಕೇಳಿಸುತ್ತಿತ್ತು...
ಒಂದು ಕ್ಷಣ ಇವನಿಗೆ...ಒಹ್..ನಿಜವಾ ಇದು...ಅನ್ನಿಸಿತು.....!!!
ಸಾವರಿಸಿಕೊಂಡ...ಬಂದು...ಎಲ್ಲರಿಗೂ ಕಾಫೀ ಕೊಟ್ಟಳು..ಇವನು ಥ್ಯಾಂಕ್ಸ್..ಅಂದ..
ಎದುರು ಒಂದು ಸೋಫಾದ ಮೇಲೆ ಕೂರಲು ಹೇಳಿದರು...ತಂದೆ..
ಇವನಿಗೆ ಇನ್ನು ನಂಬಲು ಆಗುತ್ತಿಲ್ಲ....ಅದೇ ಮುಖ..ಅದೇ ಸೌಂದರ್ಯ..ಮತ್ತೆ ಮತ್ತೆ ನೋಡಬೇಕೆನಿಸುವ..ತವಕ.........!! ಅವಳೇ ಇವಳು...!!!
ಇವಳು...ನನ್ನ ಮಗಳು..ನಂದಿನಿ..MBA ಮಾಡಿಕೊಂಡು...ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾಳೆ..ಅಲ್ಲಿ ಅಣ್ಣನ ಜೋತೆಯಲ್ಲಿದ್ದಾಳೆ...
ನಂದಿನಿ...ಒರೆ ನೋಟದಿಂದ..ಇವನತ್ತ ನೋಡಿದಳು..ಕಣ್ಣು ಕಣ್ಣು ಕಲೆತಾಗ...ಅವಳು ನಾಚಿಕೊಂಡು ದೃಷ್ಟಿ..ಬೇರೆ ಕಡೆ ತಿರುಗಿಸಿದಳು...
...ಸರಿ ಮಾರಾಯರೇ...ನಾವು ನಿಮಗೆ ಫೋನ್ ಮಡಿ ತಿಳಿಸುತ್ತೇವೆ...ಅಂತ ಅಲ್ಲಿಂದ ಹೊರಟರು...
ರಾಕೇಶ್ ಈ ಮದುವೆಗೆ ಒಪ್ಪಿದ್ದ...ಬೆಂಗಳೂರಿಗೆ ಬಂದವನೇ ಸ್ನೇಹಿತರನ್ನೆಲ್ಲ ಮನೆಗೆ ಕರೆದ..ಈ ವಿಷಯ ಹೇಳಿದ...ಎಲ್ಲರಿಗೂ...ಒಂದೇ ಖುಷಿ...ಸಂತೋಷ..ಸಂಭ್ರಮ ...ಅಷ್ಟರಲ್ಲಿ...ಇವನ ಆಫಿಸ್ ಗೆಳೆಯ ಸಾಗರ್ ಬಂದ..
ಬಂದವನಿಗೆ..ವಿಷಯ ತಿಳಿಸಿದ..ಎಲ್ಲರೂ ಫೋಟೋ ನೋಡುತ್ತಿದ್ದರು...
ಸಾಗರ್ ಫೋಟೋ ಕಸಿದು ಕೊಂದ...!!!..
ಲೋ ಈ ಹುಡುಗಿಯೇನೋ?
ಹೌದು...ಯಾಕೆ..
ಇವಳು ಯಾರು ಗೊತ್ತ...
ಯಾರು...? ಅದೇನೋ ಹೀಗೆ ಕೆಳುತ್ತಿಯ..
ನನ್ನ ಕಸಿನ್ ಮದುವೆಗೆ ತುಮಕೂರಿಗೆ ಹೋಗಿದ್ದಾಗ..ಅಲ್ಲಿ ಇದ್ದಳಲ್ಲ ನನ್ನ ಕಸಿನ್ ಸ್ವಪ್ನ ಲ ಕಲೀಗ್ ....ಇವಳ ಹೆಸರು...ನಂದಿನಿ..ತಾನೇ?
ನೀನು ಇವಳ ಜೊತೆ ಮಾತಡಿದಿಯ..ನಾನು ನನ್ನ ಹೆಂಡತಿ ನನ್ನ ಕಸಿನ್ ನೀನು ನಮ್ಮ ಇತರೆ ಕಸಿನ್ಸ್.ಈ ಹುಡುಗಿ ಅವತ್ತು ಮದುವೆಯಲ್ಲಿ ಎಷ್ಟು ಹರಟೆ...ಹೊಡೆದಿದ್ದೀವಿ...ಮರೆತು ಬಿಟ್ಯಾ..?
ನೀನು ಪದೇ ಪದೇ ಇವಳನ್ನೇ ನೋಡುತ್ತಿದ್ದೆ..ನಾನು ನಿನ್ನ ರೇಗಿಸಿದ್ದೆ...! ಅಂದ
ಒಹ್..ಹೌದಲ್ವ...
ಅವತ್ತು ಅವಳನ್ನ ನೋಡಿದ ಆ ಕ್ಷಣಗಳು..ನನ್ನ ಮನಸಿನಲ್ಲಿ ಎಷ್ಟು ಬೆರೂರಿದ್ದವು..!!! ತುಂಬಾ ಆಪ್ತಳೆನಿಸಿದ್ದಳು...!! ತನ್ನ ಮನಸಿನ ಭಾವನೆ ಮೊದಲ ಭೇಟಿಯಲ್ಲೇ ಹೇಗೆ ವ್ಯಕ್ತಪಡಿಸೋದು..ಅದು ಸಭ್ಯತೆಯಲ್ಲ..ಅದು ಸ್ನೇಹಿತನ ಕಸಿನ್ ಮದುವೆ..ಅವಳ ಸ್ನೇಹಿತೆ ಬೇರೆ ಇವಳು?
ಆದರೆ ಅದನ್ನು ಅವಳಿಗೆ ಹೇಳುವ ಸಮಯ ಬರಲೇ ಇಲ್ಲ..
ಕೆಲಸದ ಒತ್ತಡದ ನಡುವೆ ...ಮರೆತೂ ಬಿಟ್ಟಿದ್ದ...
ಅಬ್ಭಾ ....ಅಂತು ಅವಳನ್ನೇ ಮದುವೆ ಆಗುತ್ತಿದ್ದೆನಲ್ಲ...! ನನ್ನ ಅವತ್ತಿನ ಆಸೆ ಇಂದು ಈಡೇರುತ್ತಿದೆ..ಅಂದುಕೊಂಡು...
ಅವಳ ಫೋಟೋವನ್ನೇ ನೋಡುತ್ತಾ...!!!....ನಿಂತ..!!!! ಅವನ ಮನಸ್ಸೆಲ್ಲ...ಅವಳೇ ತುಂಬಿದ್ದಳು...!!!