Pages

Saturday, August 27, 2011

'ತ್ಯಾಗ'



ಅಂದು ನಾ ಮುಂಗಾರು ಮಳೆ ನೋಡಿದಾಗ

ಪ್ರೀತಿ ಮಧುರ ತ್ಯಾಗ ಅಮರ ಎಂಬ ಮಾತು ಅರ್ಥ ಪೂರ್ಣ ಎಂದೆನಿಸಿತ್ತು

ತ್ಯಾಗದಲ್ಲಿ ಅರ್ಥವಿದೆ ಅನ್ನಿಸಿತ್ತು

ಆದರೆ ಗೆಳತಿ

ಇಂದು ನೀನು ಅಪ್ಪ ಅಮ್ಮನ ಮನ ನೋಯಿಸದಿರಲು

ನಮ್ಮ ಪ್ರೀತಿಯನ್ನು 'ತ್ಯಾಗ' ಮಾಡೋಣ ಎಂದಾಗ

ಮನಸು ದುಃಖಿಸುತ್ತಿದೆ ಗೆಳತಿ

'ತ್ಯಾಗ' ದ ಅರ್ಥ ಆಗ ಆಗಿರಲಿಲ್ಲ

ಈಗ ಆಗುತ್ತಿದೆ

ನೀನಿಲ್ಲದ ನನ್ನ ಬದುಕು ಮಂಜು ಮುಸುಕಿದೆ

ಆದರೂ ...

ಈ ತ್ಯಾಗದ ಹಿಂದೆ ನಿನ್ನ ಸಂತೋಷವಿದೆ

ಬದುಕಿನುದ್ದಕ್ಕೂ ಸಂಭ್ರಮವಿದೆ

ಎಂದು ನಾನು ಅರಿತುಕೊಂಡಾಗ

ಗೆಳತಿ

ತ್ಯಾಗ ನಿಜಕ್ಕೂ 'ಅಮರ' ವೆ ಎನಿಸಿತು

ಕಾರಣ

ಬದುಕಿನ 'ಸಿಹಿ' ಎಲ್ಲ ನಿನ್ನದಾಗಲಿ..

ಕಹಿ ಮಾತ್ರ ನನಗಿರಲಿ ....!

No comments:

Post a Comment