Pages

Saturday, August 20, 2011

ಸ್ವಗತ .....!!!!


ಅಂದು ಮುಸ್ಸಂಜೆ ಭೇಟಿಯಾಗಿ...ಒಬ್ಬರಿಗೊಬ್ಬರು ಪರಿಚಯವಾಗಿ..
ಇಬ್ಬರೂ ಬಹಳ ಹತ್ತಿರ ಹತ್ತಿರವಾಗಿ...

ತೀವ್ರಗಾಗಿ,,,

ಪರಸ್ಪರ ಜೊತೆಯಾಗಿ..

ನನ್ನಲ್ಲೂ...ನಿನ್ನಲ್ಲು...ಪುಳಕ ಹೆಚ್ಚಾಗಿ...

ರೋಮಾಂಚನ ಸುಖವಾಗಿ...
ಜಗವೆಲ್ಲ ಮರೆಯುವಂತಾಗಿ...

ಯಾವುದಕ್ಕೂ ಹೆದರದಂತಾಗಿ..
ನೂರಾನೆ ಬಲ ಬಂದಂತಾಗಿ...

ಸಂಕೋಚ ಸುಳಿಯದಂತಾಗಿ..

ಅದೂ ...

ನಮ್ಮಿಬ್ಬರಿಗೂ ತಿಳಿಯದಂತಾಗಿ..
ನಾವೇ ಪ್ರಣಯ ಪಕ್ಷಿಗಳಾಗಿ..

ನಮ್ಮ ಸಮ ಯಾರಿಲ್ಲೆಂದು..ನಾವೇ ಪ್ರೇಮಿಗಳಾಗಿ...
ಪ್ರೇಮದ ಬಳ್ಳಿ ಚಿಗುರಿದಂತಾಗಿ..

ಮಗ್ಗು ಬಿರಿದು...ಕಾಯಾಗಿ...

ಹಣ್ಣಾಗಿ...

ಇಬ್ಬರಿಗೂ ತಿನ್ನುವ ಬಯಕೆಯಾಗಿ...

ಪ್ರೇಮದ ವಿಷಯ ಮನೆಯಲ್ಲಿ ತಿಳಿಸುವಂತಾಗಿ..
ಅವರು ತಿರಸ್ಕರಿಸುವಂತಾಗಿ..

ನಾವಿಬ್ಬರು ದೂರಾಗಿ...

ನಾನೊಂದು ತೀರದಲ್ಲಿ ನಿಲ್ಲುವಂತಾಗಿ...
ನೀನೊಂದು ದಡದಲ್ಲಿ ಕೂರುವಂತಾಗಿ...

ಪ್ರತಿ ದಿನವೂ ನಿನ್ನ ನೆನಪಾಗಿ ..
ಕಾಲ ದೂಡುತ್ತಿರುವೆ ಬೇಸರವಾಗಿ..

ನಿನಗೂ ಹೀಗನ್ನಿಸುತ್ತಿರಬಹುದು ಎಂಬಂತಾಗಿ..

ಏನೊಂದು ತಿಳಿಯದೆ ಕಂಗಾಲಾಗಿ ...
ಬರೆಯುತ್ತಿರುವೆ ಈ ವಿರಹವನು ಕವನವಾಗಿ...

ನನ್ನ ಕವನವನ್ನು ಓದುವ ಅವಕಾಶ ನಿನ್ನದಾಗಿ..
ಓಡೋಡಿ ಬರುವೆಯಾ ನನ್ನವಳಾಗಿ...

ಇಂತಿ ನಿನ್ನ ಒಲುಮೆಯ.

ಗೆಳೆಯ.....!

No comments:

Post a Comment