Pages

Wednesday, August 24, 2011

ನಿರೂಪಕನ ಪೀಕಲಾಟ..!



ಸಾಮಾನ್ಯವಾಗಿ ಸಾರ್ವಜನಿಕ ಸಮಾರಂಭ, ಗಣೇಶನ ಉತ್ಸವ, ಇಂತಹ ಸಂದರ್ಬದಲ್ಲಿ ವೇದಿಕೆ ಕಾರ್ಯಕ್ರಮಗಳ ನಿರೂಪಣೆಗೆ ಹೋದಾಗ ಅಲ್ಲಿ ಕಾರ್ಯಕ್ರಮದ ಆಯೋಜಕರು ಒಂದೆರಡು ಗಂಟೆ ಮೊದಲೇ ಬರಲು ತಿಳಿಸಿರುತ್ತಾರೆ. ಸರೀ ತಯಾರಿ ಮಾಡಿಕೊಳ್ಳಲು ಅಲ್ಲಿ ಮೊದಲೇ ಹೋದರೆ ಆಸಾಮಿಗಳು ಯಾರು ಪತ್ತೆ ಇರೋಲ್ಲ. ಹೇಗೂ ಬಂದಿದ್ದೇನೆ ಇನ್ನು ವಾಪಾಸ್ ಹೋಗಲು ಆಗುವುದಿಲ್ಲವಲ್ಲ ಅಂತ ಅಲ್ಲೇ ವೈಟ್ ಮಾಡ್ತಾ ಕೂತಾಗ ಆಯೋಜಕರು ನೀಟ್ ಆಗಿ ಡ್ರೆಸ್ ಮಾಡಿಕೊಂಡು ಬರ್ತಾ ಸಾರಿ ಸರ್ ನಾನು ಇಲ್ಲೇ ಹೋಗಿದ್ದೆ ಟ್ರಾಫಿಕ್ ನಲ್ಲಿ ಸಿಕ್ಕಿಕೊಂಡೆ ತಡ ಆಯಿತು...ಬನ್ನಿ ಬನ್ನಿ ಕಾರ್ಯಕ್ರಮದ ಬಗ್ಗೆ, ಅತಿಥಿಗಳ ಬಗ್ಗೆ ಪಟ್ಟಿ ಮಾಡುತ್ತ ಪ್ಲಾನ್ ಮಾಡೋಣ ಅಂತ ಒಂದು ಕಡೆ ಕೂರಿಸಿಕೊಂಡು ಆಹ್ವಾನ ಪತ್ರಿಕೆಯಲ್ಲಿನ ಎಲ್ಲ ಹೆಸರುಗಳನ್ನೂ ತೋರಿಸುತ್ತ ಯಾರ್ಯಾರು ಭಾಷಣ ಮಾಡ್ತಾರೆ, ಯಾರ್ಯಾರು ಮಾಡೋಲ್ಲ, ಯಾರ ಬಗ್ಗೆ ಜಾಸ್ತಿ ಹೋಗಲಿ ಹೇಳಬೇಕು, ಯಾರ ಬಗ್ಗೆ ಕಡಿಮೆ. ಯಾರು ಹೆಚ್ಚು ಹಣ ಕೊಟ್ಟಿದಾರೆ ಅವರನ್ನು ದಾನ ವೀರ ಶೂರ ಕರ್ಣ ಅಂತ ಏನೆಲ್ಲ ಹೊಗಳಬೇಕು ಅನ್ನುವ ಪಾಠ ಒಪ್ಪಿಸುತ್ತಾರೆ...

ಕಾರ್ಯಕ್ರಮ ಆರಂಭವಾಗುವ ಹೊತ್ತಿಗೆ ಈ ಪಾಠ ಪಡೆ ಪಡೆ ರಿಪೀಟ್ ಆಗಿರುತ್ತೆ ಅನ್ನೋದು ಬೇರೆ ಮಾತು.

ಒಂದು ಕಡೆ ಜನಾ ಬಂದಿರ್ತಾರೆ, ಚೆರುಗಳು ತುಂಬಿರುತ್ತೆ, ಅತಿಥಿಗಳು ಇನ್ನು ಬಂದಿರುವುದಿಲ್ಲ ಆಗ ಮತ್ತೆ ಬಂದು ಸರಿ ನೀವು ಅಲ್ಲಿಯವರೆಗೂ ಏನಾದ್ರು ಮಾತಾಡ್ತಾ ಇರಿ ಮೈಕ್ ನಲ್ಲಿ ಎಂದೂ ಹೇಳಿ ಹೋಗುತ್ತಾರೆ.

ಮತ್ತೆ ಬಂದು ಸಾರ್ ಅನೌನ್ಚೆ ಮಾಡಿ ಸರ್..ಸಾಹೇಬರು, ನಾಯಕರು... ಇನ್ನು ೧೦ ನಿಮಿಷದಲ್ಲಿ ಬರ್ತಾರೆ, ೫ ನಿಮಿಷದಲ್ಲಿ ಬರ್ತಾರೆ ..೪..೩..೨..೧..ಅಂತ ಹೇಳಿ ಅಂತ ಪಡೆ ಪಡೆ ಹೇಳುತ್ತಾ ರಸ್ತೆ ಕಡೆ ನೋಡ್ತಾ ಇರ್ತಾರೆ.

ಸರಿ ಅತಿಥಿಗಳು ಬಂದರು, ವೇದಿಕೆಗೆ ಕರೆ ತಂದರು..ವೇದಿಕೆ ಮೇಲೆ ಆಸೀನರಗೋ ಮೊದಲೇ ನಿರೂಪಕನ ಬಳಿ ಬಂದು ನನ್ನನ್ನ ಸ್ವಲ್ಪ ಹೋಗಲೀ ಸರ್ ನಾನು ಈ ಭಾಗದ ಸಮಾಜ ಸೇವಕ ಅಂತ ಹೇಳಿ ಹೋಗ್ತಾರೆ...ಅವರ ಹಿಂದೆ ಅವರ ಹಿಂಬಾಲಕರು ಒಂದಷ್ಟು ಒಗ್ಗರಣೆ ಹಾಕ್ತಾರೆ.

ಕಾರ್ಯಕ್ರಮ ಶುರು ಆಯಿತು ಆಯೋಜಕರಲ್ಲಿ ಒಬ್ಬರು ಬಂದು ಸ್ವಾಗತ್ ಭಾಷಣ ಮಾಡ್ತಾರೆ ಅದು...ಅರ್ಧ ಗಂಟೆ..ಯಾರ ಹೆಸರು ಬಿಡೋದಿಲ್ಲ...ಅಷ್ಟು ಹಾನೆಸ್ಟ್.

ಇನ್ನು ಅತಿಥಿಗಳ ಭಾಷಣ ಬರುವ ಹೊತ್ತಿಗೆ ನಿರೂಪಕನಿಗೆ ೩-೪ ಸಲ ಹೇಳಿ ಕಳಿಸ್ತಾರೆ ವೇದಿಕೆಯ ಮೇಲಿಂದ..ಸಮಾಜ ಸೇವೆ (?) ಬಗ್ಗೆ ಜಾಸ್ತಿ ಹೇಳಿ ಈ ಭಾಗದ ಜನಪ್ರಿಯ ನಾಯಕ ಅಂತ ಹೇಳಿ....ಹೀಗೆ ಅವರ ಬಿರುದು ಬಾವಲಿಗಳನ್ನು ಹೇಳುತ್ತಾ ಹೋಗುತ್ತಾರೆ...

ಇನ್ನು ನಿರೂಪಕನಿಗೆ ಮಾತನಾಡುವ ಗೀಳು ಇದ್ದಲ್ಲಿ ಇಂತಹ ಬೃಹತ್ ವೇದಿಕೆ, ಕಿಕ್ಕಿರಿದ ಜನಸಂದಣಿ, ಎಲ್ಲವನ್ನು ಕಂಡು ಅವನೋಳಗಿರುವ ಮಾತುಗಾರ ಜಾಗೃತನಾಗುತ್ತಾನೆ. ತನ್ನ ವಾಕ್ ಚಾತುರ್ಯದ ಮೂಲಕ ತನ್ನ ಬಾಯಿ ಚಪಲವನ್ನು ತೀರಿಸಿಕೊಳ್ಳುತ್ತಾನೆ. ಕೇಳುಗರಿಗೆ ಅರ್ಥವಾಗಲಿ..ಬಿಡಲಿ..ಎನ್ನುವ ಗೋಜಿಗೆ ಹೋಗದೆ ತನ್ನ ಅನುಭವ, ತನ್ನ ಓದು, ತನ್ನ ಬರವಣಿಗೆ, ಜೊತೆಗೆ ಕಾವ್ಯ, ಚುಟುಕ, ಕವನ ಇವುಗಳ ಮೂಲಕ ಕೇಳುಗರನ್ನು ತನ್ನೆಡೆಗೆ ಸೆಳೆದುಕೊಳ್ಳಲು ಸನ್ನಿವೇಶವನ್ನು ಪ್ರಯೋಗಿಸುತ್ತಾನೆ.

ಇನ್ನು ಭಾಷಣಕ್ಕೆ ನಿಂತ ಅತಿಥಿ (ಗಳು) ..ಸಮಾರಂಬದ ಉದ್ದೇಶವನ್ನು ಬಿಟ್ಟು ಬೇರೆಲ್ಲ ಮಾತನಾಡುತ್ತಾರೆ. ತನ್ನನ್ನು ತನು ಪುನ್ಖನುಪುನ್ಖವಾಗಿ ಹೊಗಳಿಕೊಂಡು ಮುಂದಿನ ಚುನಾವಣೆಗೆ ನಿಲ್ತಾ ಇದೀನಿ ನಿಮ್ಮ ಆಶಿರ್ವಾದ ನನಗೆ ಬೇಕು ಅಂತ ...ಹೇಳಿ ತನ್ನ ಸುಧೀರ್ಗ (?) ಭಾಷಣಕ್ಕೆ ತೆರೆ ಎಳೆಯುತ್ತಾನೆ.

ನಂತರ ಈ ರೀತಿಯ ನಾಯಕರು (?) ಹಲವಾರು ಮಂದಿ ಇದ್ದರಂತೂ ಮುಗಿದೇ ಹೋಯಿತು..

ಅಲ್ಲಿ ಜನಾ ಕಾಯುತ್ತಿರುವುದು ಹಾಸ್ಯೋತ್ಸವಕ್ಕೋ, ಅರ್ಕೆಷ್ಟ್ರಕ್ಕೋ ಅನ್ನೋದು ಈ ಅತಿಥಿಗಳು ಅರ್ಥಾನೆ ಮಾಡಿಕೊಳ್ಳುವುದಿಲ್ಲ. ಇನ್ನು ಅವರೆಲ್ಲರಿಗೂ ಹಾರ, ತುರಾಯಿ, ಸನ್ಮಾನ ಅಂತ ಅಗೋ ಹೊತ್ತಿಗೆ ರಾತ್ರಿ ೯ ಧಾಟಿರುತ್ತೆ.

ಅರ್ಕೆಸ್ತ್ರ ಮಂದಿ..ಇಷ್ಟು ತಡ ಮಾಡಿದರೆ ನಾವು ಹಾಡುವುದು ಯಾವಾಗ , ಜನರನ್ನ ರಂಜಿಸುವುದು ಎಲ್ಲಿ ಅಂತ ಚಿಂತೆ ಮಾಡ್ತಾ ಕೂತಿರ್ತಾರೆ.

ಇದುವರೆಗೂ ನಿರೂಪಕನನ್ನ ಇನ್ನಿಲ್ಲದಂತೆ ಮಾತನಾಡಿಸುತ್ತಿದ್ದ ಆಯೋಜಕರು, ಅತಿಥಿಗಳ ಹಿಂಬಾಲಕರು ...ಆಮೇಲೆ ನಿರೂಪಕನ ಕಡೆ ತಿರುಗಿ ಕೂಡ ನೋಡೋದಿಲ್ಲ.

ಆಗ ಅವರ ಗಮನವೆಲ್ಲ ಅತಿಥಿಗಳನ್ನು ಬೀಳ್ಕೊದುವುದರ ಕಡೆಗೆ, ಹಾಡುಗಳ ಕಡೆಗೆ & ತೀರ್ಥ ಪ್ರಸಾದದ ಕಡೆಗೆ !

ನಿರೂಪಕನಿಗೆ ಗಂಟಲು ಆರಿರುತ್ತದೆ..ಅಲ್ಲಿ ನೀರು ಕೊಡಲೂ ಯಾರೂ ಇರೋದಿಲ್ಲ...

ಒಂದೇ ಸಮಾಧಾನ ಎಂದರೆ..ಜನರ ಪ್ರಶಂಸೆ ಫೀಡ್ ಬ್ಯಾಕ್ ಮಾತ್ರ ತಕ್ಷಣ ಸಿಗುತ್ತೆ...! ಅದರಲ್ಲೂ ಹುಡುಗಿಯರ ಪ್ರಶಂಸೆ ಸಿಕ್ಕರಂತೂ .....ರೆಕ್ಕೆ ಕಟ್ಟಿಕೊಂಡು ಹಾರುವುದೊಂದೇ ಬಾಕಿ...!!!

No comments:

Post a Comment