ಪ್ರಿಯೆ,
ನಿನ್ನ ಕಂಡ ಮೊದಲ ದಿನವೇ ನಾ ಕಳೆದು ಹೋದೆ
ಅಂದಿನಿಂದ ನನ್ನ ಬಗ್ಗೆ ನಾ ಮರೆತು ಹೋದೆ
ನಿನ್ನ ಅಂದ ನಿನ್ನ ಚಂದ ಎಷ್ಟು ಸುಂದರ
ನಿನ್ನ ಮಾತು ನಿನ್ನ ನಡಿಗೆ ಇನ್ನು ಸುಮಧುರ
ನಿನ್ನ ಒನಪು ನಿನ್ನ ನಗುವು ಹೀಗೆ ಇದ್ದರೆ
ನನ್ನ ಬದುಕು ನಿತ್ಯ ಸುಮಧುರ ಕಾವ್ಯಧಾರೆ
ಇಷ್ಟು ದಿನವು ನನ್ನ ಬಳಿಗೆ ಏಕೆ ಬಾರದೆ
ನನ್ನ ಮನದಿ ದುಖ ದುಗುಡ ಹೆಚ್ಚು ಮಾಡಿದೆ
ಇನ್ನು ನೀನು ಹೆಚ್ಚು ದಿನವು ಸಿಗದೇ ಉಳಿದರೆ
ನನ್ನ ಹೃದಯ ಭಾರವಾಗಿ ಕಂಪಿಸದಿರೆ
ಇಷ್ಟು ಹೇಳಿ ನನ್ನ ನೋವು ನುಂಗುತಿರುವೇನು
ನನ್ನ ಮನದ ನೋವು ಅಳಿಸ ಬರುವೆಯೇನು?
No comments:
Post a Comment