Pages

Tuesday, August 16, 2011

ಆಪರೇಶನ್ ಕ್ಯಾಟ್ ..!!!



ಇತ್ತೆಚೆಗೊಂದು ದಿನ ಮನೆಯಲ್ಲಿ ಯಾವುದೊ ಒಂದು ಪುಸ್ತಕ ಓದುತ್ತ ಕುಲಿತಿದ್ದಗೆ ಒಮ್ಮಿನೋದೊಮ್ಮೇಲೆ ಒಂದು ಬೆಕ್ಕು ಕಿಟಕಿ ಮೂಲಕ ಒಳಬಂತು. ಬಾಯಿಯಲ್ಲಿ ಏನೋ ಕಚ್ಚಿ ತಂದಿದ್ದು ನೋಡಿ ಇಲಿ ಎಂದುಕೊಂಡು ಬೆಕ್ಕನ್ನ ಫಾಲೌ ಮಾಡಿದೆ. ಅದು ಸೀದಾ ಹೋಗಿ ವಾರ್ಡ್ ರೋಬ್ ಸೇರಿಕೊಲ್ಲಬೇಕೆ.

ನಾನೆಂದು ಬೆಕ್ಕನ್ನ ಮುಟ್ಟಿಲ್ಲ, ಮುಟ್ಟಿಲ್ಲ ಅನ್ನೋದಕ್ಕಿಂತ ಭಯ ಅಂದ್ರೆ ಸೂಕ್ತ. ಸರಿ ಹೋಗಿ ವರ್ಡ್ ರೋಬ್ ಬಾಗಿಲನ್ನ ಪೂರ್ತಿ ಸರಿಸಿದರೆ ಪಿಳಿ ಪಿಳಿ ಕಣ್ಣು ಬಿಡುತ್ತಿವೆ ೫ ಬೆಕ್ಕಿನ ಮರಿಗಳು. ನನಗೋ...ಮೈ ಜುಮ್ ಎನ್ನಿಸಿತು..ಹೊರಗೆ ಮಳೆ ಬಂದು ನಿಂತಿದೆ...ರಾತ್ರಿ ೯ ಗಂಟೆ ಆಗಿದೆ ಸರಿ ಅದನ್ನು ಈಗ ಟಚ್ ಮಾಡಲು ಹೋದರೆ ತಾಯಿ ಬೆಕ್ಕು ಸುಮ್ಮನಿರುವುದೇ? ಅದರಲ್ಲೂ ಅಂತಹ ಮಳೆಯ ವಾತವರಣದಲ್ಲಿ ಅಮಾನವೀಯವಾಗಿ ಹೇಗೆ ಹೊರ ಹಾಕುವುದು? ಸ್ವಲ್ಪ ಯೋಚಿಸಿದೆ..ಎಷ್ಟು ದಿನದಿಂದ ಇದು ನನ್ನ ಮನೆಯಲ್ಲಿ ವಸವಿದೆಯೋ ಗೊತ್ತಿಲ್ಲ ಅದರಲ್ಲೂ ನಾನೊಬ್ಬನೇ ಇದ್ದೇನೆ ಎಂದು ಅರಿತು ಕಂಪೆನಿ ಕೊಡುವುದಕ್ಕೆ ಬಂದಿರಬೇಕು ಎಂದು ಸಮಾದಾನ ಮಾಡಿಕೊಂಡು ಮಲಗೋಣ ಎಂದು ಗಟ್ಟಿ ಧೈರ್ಯ ತಂದುಕೊಂಡೆ.

ಅದು ನನಗೇನು ತೊಂದರೆ ಕೊಡುವುದಿಲ್ಲ ಎಂಬ ಅರಿವಿದ್ದರು ಮನಸ್ಸಿಗೆ ಏನೋ ಆತಂಕ...ರಾತ್ರಿ ಪೂರ ನೆಮ್ಮದಿಯಾಗಿ ನಿದ್ದೆ ಏನು ಮಾಡಲಿಕ್ಕೆ ಆಗಲಿಲ್ಲ. ಸರಿ ಬೆಳಿಗ್ಗೆ ಎದ್ದು ಹೇಗೆ ಈ ಬೆಕ್ಕನ್ನ ಜಾಗ ಖಾಲಿ ಮಾಡಿಸುವುದು ಎಂಬ ತಲೆಬಿಸಿಯಲ್ಲಿ ಇದ್ದಾಗ...

ಒಬ್ಬ ಹುಡುಗ ಎದುರು ಮನೆಯಲ್ಲಿ ಕಟ್ಟಡ ಕೆಲಸ ಮಾಡುತ್ತಿದ್ದ ಅವನನ್ನ ಹತ್ತಿರ ಕರೆದು ಈ ವಿಚಾರ ಹೇಳಿದೆ ಅದಕ್ಕವನು ಒಹ್...ನಾನು ನಮ್ಮ ಮನೆಗೆ ತೊಗೊಂಡ್ ಹೋಗ್ತೀನಿ ಅಲ್ಲಿ ಯಾರಿಗಾದರೂ ಮರಿಗಳನ್ನು ಕೊಡುತ್ತೇನೆ ಅಂದ, ನನಗೆ ತಾಯಿ ಮಕ್ಕಳನ್ನು ಹೇಗೆ ಬೇರೆ ಮಾಡುವುದು, ಆಮೇಲೆ ಪಾಪ ಪ್ರಜ್ಞೆ ಕಾಡುವುದು ಗ್ಯಾರಂಟಿ ಎಂದು ಯೋಚಿಸಿ ಬೇಡ ಅವುಗಳನ್ನ ಬೇರೆ ಮಾಡಬೇಡ ಎಂದೇ ಅದಕ್ಕವನು ಸರಿ ಖಾಲಿ ಮಾಡಿಸುತ್ತೇನೆ ನೀವು ತಲೆ ಬಿಸಿ ಮಾಡ್ಕೋಬೇಡಿ ಅಂದ. ಅಬ್ಬ ಒಳ್ಳೆ ಕೆಲಸ ಆಯಿತು ಅಂತ ಆ ಹುಡುಗನನ್ನು ಮನೆಗೆ ಬರಮಾಡಿಕೊಂಡೆ.

ಹುಡುಗ ಒಳಗೆ ಬಂದು ನಿದಾನವಾಗಿ ವರ್ಡ್ ರೋಬ್ ನೋಡಿದ. ತಾಯಿ ಮಕ್ಕಳಿಬ್ಬರು ಸ್ವಚಂದವಾಗಿ ರೆಸ್ಟ್ ತೊಗೋತ ಇದ್ದರು. ಸದ್ದು ಮಾಡುತ್ತ ತಾಯಿ ಬೆಕ್ಕನ್ನ ಹೊರಗೆ ಓಡಿಸಿದ...೫ ಮರಿಗಳನ್ನು ನಿದಾನವಾಗಿ ಹಿಡಿದು ಹೊರತಂದು ಟೆರೆಸ್ ಮೇಲೆ ಇತ್ತ...ಸ್ವಲ್ಪ ಹೊತ್ತು ದೂರದಲ್ಲಿ ಕುಳಿತು ನೋಡುತ್ತಾ ಇದ್ದೆ ತಾಯಿ ಬೆಕ್ಕು ತನ್ನೆಲ್ಲ ಮರಿಗಳನ್ನ ಹೊತ್ತು ಬೇರೆ ಲೋಕಷೆನ್ ಗೆ ಶಿಫ್ಟ್ ಆಯಿತು.

ಅಂತು ಇಂತೂ 'Operation Cat' ಸುಖಾಂತ್ಯ ಕಂಡಿತು. ನನಗು ಸ್ವಲ್ಪ ನೆಮ್ಮದಿ ಆಯಿತು.

ಕಥೆಯ ನೀತಿ: ಬೇರೆಯವರ ಬೆಕ್ಕು ಬಂದು ನಿಮ್ಮ ಮನೇಲಿ ಮರಿ ಹಾಕಬಾರದು ಎಂದಾದರೆ ನಿಮ್ಮ ಕಿಟಕಿ ಬಾಗಿಲನ್ನು ಸರಿಯಾಗಿ ಭದ್ರ ಮಾಡಿ.

No comments:

Post a Comment