Pages

Sunday, August 28, 2011

ಮೌನ ಮಾತಾದಾಗ...!

ಪ್ರಿಯೆ

ಮೊದಲ ಬಾರಿ ನಾ ನಿನ್ನ ನೋಡಿದಾಗ

ನಿನ್ನ ಮೇಲೆ ನನಗೆ ಪ್ರೇಮಾಂಕುರವಾಯಿತು ...

ಅಂದೇ ನಾ ಕನಸು ಕಂಡಿದ್ದೆ

ನಿನ್ನ ಕೈ ಹಿಡಿದು ಸಮುದ್ರ ತೀರದಲ್ಲಿ ನಡೆಯುತ್ತಾ

ನಿನ್ನೆಲ್ಲ ಮಾತು ಕೇಳುತ್ತಾ...

ನಿನ್ನ ಪ್ರೀತಿಯನ್ನ ಅನುಭವಿಸುತ್ತಾ...

ನಿನ್ನ ಸಾಂಗತ್ಯವನ್ನು ಆನಂದಿಸುತ್ತಾ ...

ಹೆಜ್ಜೆ ಹಾಕಬೇಕೆಂದು ..

ನೀನು ಮಾತನಾಡದೆ ಮೌನವಾಗಿದ್ದರು ಸರಿ

ನಿನ್ನ ಮನಸ್ಸಿನ ಮಾತನ್ನು ಅರ್ಥ ಮಾಡಿಕೊಂಡು

ಮೌನದಲ್ಲೇ ನಿನಗೆ ಉತ್ತರವನ್ನು ಕೊಡಬೇಕೆಂದು

ಆ ಘಳಿಗೆ ಬಂದೆ ಬಿಟ್ಟಿತು

ಅಂದು ನಾವಿಬ್ಬರು ಸಮದ್ರ ತೀರದಲ್ಲಿ

ಒದ್ದೆ ಪಾದಗಳಲ್ಲಿ ಹೆಜ್ಜೆ ಹಾಕುತ್ತಿದ್ದಾಗ

ಕೈ ಕೈ ಹಿಡಿದು ನಡೆಯುತ್ತಿದ್ದಾಗ

ನೀ ಮೌನವಾಗಿಯೇ ಕೇಳಿದೆ ಗೆಳತಿ

ನೀ ನನ್ನನ್ನು ಎಷ್ಟು ಪ್ರೀತಿಸುತ್ತಿಯೆಂದು ?

ಅದಕ್ಕೆ ನಾ ಹೇಳಿದೆ ಗೆಳತಿ

ನಾ ಹೇಗೆ ಹೇಳಲಿ ನನ್ನ ಪ್ರೀತಿಯ ಅಳತೆಯನ್ನು ....

ಅದನ್ನು ಅಳತೆ ಮಾಡಲು ಇನ್ನು ಮಾಪಕ ಬಂದಿಲ್ಲೆಂದು ....

ಆಕಾಶದಷ್ಟು ವಿಶಾಲವೆಂದರೆ ಅದು ತಪ್ಪಾಗುತ್ತದೆ .!

ಕಾರಣ

ಆಕಾಶದ ಅಳತೆ ನನಗೆ ಗೊತ್ತಿಲ್ಲ ...

ಸಮುದ್ರದಷ್ಟು ಆಳವೆಂದರೆ ಅದು ವಂಚನೆಯಾಗುತ್ತದೆ ಗೆಳತಿ

ಕಾರಣ

ಅದರ ಅಳವನ್ನು ಬಲ್ಲವನಲ್ಲ ನಾನು ..!

ನಾನು ಹೇಳಿದ್ದು ಇಷ್ಟೇ

ನನ್ನ ಪ್ರೀತಿಯನ್ನು ವ್ಯಕ್ತಪಡಿಸಲು

ಅಳತೆ ಗೋಲು ಎಲ್ಲಿಂದ ತರಲಿ ಎಂದೂ ..

ಆದರೂ ಹೇಳಿದೆ...

ನೀನೆ ನನ್ನ ಜೀವವೆಂದು.....!

2 comments:

  1. ಅಳತೆಗೆ ನಿಲುಕದ ಪ್ರೀತಿಯ ಪರಿಯ ವ್ಯಕ್ತಗೊಳಿಸಿರುವ ನಿಮ್ಮ ಕವನ ಚೆನ್ನಾಗಿದೆ. ಅಭಿನ೦ದನೆಗಳು.

    ReplyDelete
  2. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...ನಿಮ್ಮಂತಹವರ ಪ್ರೋತ್ಸಾಹಕ ನುಡಿಗಳು ಹೊಸ ಹುಮ್ಮಸ್ಸನ್ನು ನೀಡುತ್ತಿದೆ..ಅನ್ನಿಸಿದ್ದನ್ನು ಬರೆಯಲು ಇದು ಟಾನಿಕ್ ಎಂದರು ತಪಾಗಲಿಕ್ಕಿಲ್ಲ..

    ReplyDelete