Pages

Wednesday, August 10, 2011

ಲೋಕದದ ಡೊಂಕ ನೀವೇಕೆ ತಿದ್ದುವಿರಿ...

ಪ್ರತಿಯೊಬ್ಬ ವ್ಯಕ್ತಿಯಲ್ಲೂ ತಪ್ಪು ಹುಡುಕುವುದು ಕೆಲವರ ಸಹಜ ಗುಣ. ನಾವು ಹುಡುಕಿದ ತಪ್ಪಿಗಿಂತ ನಾವಾಡುವ ಮಾತಿನಿಂದ ಎದುರು ವ್ಯಕ್ತಿಯನ್ನ ನೋಯಿಸುವುದು ಹೆಚ್ಚಿನ ಸಂದರ್ಬದಲ್ಲಿ ಮಾಡುತ್ತೇವೆ. ಅದಕ್ಕಿಂತಲೂ ಆತ ಮಾಡಿದ ತಪ್ಪಿನ ಅರಿವಾಗುವಂತೆ ಮಾಡುವುದು, ತಪ್ಪನ್ನು ಸರಿಪಡಿಸುಕೊಳ್ಳುವಂತೆ ಪ್ರೇರೇಪಿಸುವುದು, ಮತ್ತೆ ತಪ್ಪು ಮಾಡದಂತೆ ಆತ್ಮ ವಿಶ್ವಾಸ ತುಂಬುವುದು ಹೆಚ್ಚು ಅರ್ಥಪೂರ್ಣ ಅನ್ನಿಸುತ್ತೆ. ತಪ್ಪು ಮಾಡೋದು ಸಹಜ ತಿದ್ದಿ ನಡೆಯೋನು ಮನುಜ ಅನ್ನೋ ಹಾಗೆ ನಮ್ಮೆಲ್ಲರ ತಪ್ಪುಗಳನ್ನ ತಿದ್ದಿಕೊಂಡು ಸರಿದರಿಯತ್ತ ನಡೆದು ತೋರಿಸುವುದು ನಿಜವಾದ ಮನುಷ್ಯನ ಲಕ್ಷಣ ಅಲ್ಲವೇ?

No comments:

Post a Comment