Pages

Tuesday, August 30, 2011

ಮಾಯಾಂಗನೆ...!!!






ಗೆಳತಿ...

ನೀ ಮೊದಲು ನನ್ನ ಕಡೆ ನೋಡಿದಾಗ ಆಕಸ್ಮಿಕವೆಂದುಕೊಂಡೆ.....

ಎರಡನೆ ಸಲ ನೋಡಿದಾಗ ಸ್ವಾಭಾವಿಕ ಎಂದುಕೊಂಡೆ ...

ಮೂರನೇ ಸಲ ನೋಡಿದಾಗ ಸಹಜತೆ ಎಂದುಕೊಂಡೆ ...

ನಾಲ್ಕನೇ ಸಲ ನೋಡಿದಾಗ ನಿನ್ನ ಇಚ್ಹೆಯೇನುಸಾರ ಎಂದುಕೊಂಡೆ ...

ಐದನೇ ಸಲ ನೋಡಿದಾಗ ಎಲ್ಲೊ ನೋಡಿದ ನೆನಪೇನೋ ಎಂಬಂತೆ ಮೆಲುಕು ಹಾಕುತ್ತಿರಬಹುದು ಎಂದುಕೊಂಡೆ ....

ಆರನೆ ಸಲ ನೋಡಿದಾಗ ಏನೋ ವಿಳಾಸ ಕೇಳಲು ಇರಬಹುದೇನೋ ಅಂದುಕೊಂಡೆ ...

ಏಳನೇ ಸಲ ನೋಡಿದಾಗ ನಾನೇನಾದರೂ ವಿಚಿತ್ರವಾಗಿ ನಿನ್ನ ಕಣ್ಣಿಗೆ ಗೋಚರಿಸುತ್ತಿರುವೆನಾ ಎಂದುಕೊಂಡೆ ....

ಎಂಟನೆ ಸಲ ನೋಡಿದಾಗ ನಾನು ನಿನಗೆ ಇಷ್ಟವಾಗಿರಬಹುದು ಎಂದುಕೊಂಡೆ ....

ಒಂಬತ್ತನೇ ಸಲ ನೋಡಿದಾಗ ಇದು ಅತಿರೇಕಕ್ಕೆ ಹೋಗುತ್ತಿದೆ ಅಂದುಕೊಂಡೆ..

ಹತ್ತನೇ ಸಲ ನೋಡಿದಾಗ ನನ್ನ ಪಕ್ಕದವರನ್ನು ಎಂದುಕೊಂಡೆ ...

ಹನ್ನೊಂದನೇ ಸಲ ನೋಡಿದಾಗ ಆಟೋಗಾಗಿ ಎಂದುಕೊಂಡೆ ....

ಹನ್ನೆರಡನೆ ಸಲ ನೋಡಿದಾಗ ನನ್ನಲ್ಲಿ ಆಸೆ ಹುಟ್ಟಿಸಲು ಎಂದುಕೊಂಡೆ...

ಹದಿಮೂರನೇ ಸಲ ನೋಡಿದಾಗ ಇಷ್ಟ ಪಟ್ಟು ನೋಡಿರಬಹುದು ಎಂದುಕೊಂಡೆ...

ಇಷ್ಟು ಸಲ ನನ್ನ ಕಡೆ ನೋಡಿದ ನೀನು ....

ನನ್ನ ಮನದಲ್ಲಿ ಆಸೆ ಹುಟ್ಟಿಸಿ...ನನ್ನ ಕನಸುಗಳು ಹಿಮಾಲಯದೆತ್ತರಕ್ಕೆ ಹಾರುವಂತೆ ಮಾಡಿದೆ..

ನಾನು ರೆಕ್ಕೆ ಕಟ್ಟಿಕೊಂಡಂತೆ ಹಾರುತ್ತಲೇ ಇದ್ದೆ ....

ಆದರೆ ಗೆಳತಿ ನೀ.....................ನು ................. ಮಾಡಿದ್ದೇನು...?

ಬೆಂಕಿಯಂತೆ ಸುರ್ರನೆ ಬಂದ ಬೈಕನ್ನೇರಿ ......

ಬಿರುಗಾಳಿ ವೇಗದಲ್ಲಿ ....

ಮಿಂಚಿನಂತೆ ಮಾಯವಾದೆ...!!!











1 comment:

  1. 'ಅಯ್ಯೋ ಪಾಪ', 'ಮಾಯಾಂಗನೆ...!!!'-ಹೆಸರಿಗೆ ಅನ್ವರ್ಥವಾಗಿದೆ!

    ReplyDelete