Pages

Thursday, August 18, 2011

ಆ ದಿನಗಳು........



ಅದು ಕಾಲೇಜಿನ ಮೊದಲ ದಿನ. ಆಗ ತಾನೇ ಹಳ್ಳಿಯ ಕನ್ನಡ ಮಾದ್ಯಮದ ಶಾಲೆಯಿಂದ ಬಂದಂತಹ ನನಗೆ ಒಳಗೆ ಕೀಳರಿಮೆ..ಹೆಚ್ಚಾಗಿತ್ತು..ಕಾರಣ ನಮ್ಮ ತರಗತಿಯ ಬಹುತೇಕ ಸ್ನೇಹಿತರು ಆಂಗ್ಲ ಮಾದ್ಯಮದ ವಿದ್ಯಾರ್ಥಿಗಳು..ಅವರಿಗೆ ಇಂಗ್ಲಿಷ್ ಸುಲಭ ಸುಲಭ..ಇವರ ಮಧ್ಯೆ ನಾನು ಹೇಗೋ ಏನೋ ? ಎಂಬಂತೆ ಅಮಾಯಕತೆಯ ಮುಖ ಹೊತ್ತು ಮೊದಲ ದಿನ ಕಾಲೇಜಿಗೆ ಬಂದೆ.

ಬುರ್ತ್ತಿದ್ದ ಹಾಗೆಯೇ ಕ್ಲಾಸ್ ರೂಮು ಎಲ್ಲಿದೆ ಎಂದು ಹುಡುಕುವುದೇ ಒಂದು ಆತಂಕ ನನಗೆ. ಕ್ಲಾಸ್ ರೂಂ ಹುಡುಕಿ ಒಳಗೆ ಅಡಿಯಿಟ್ಟರೆ ಅಬ್ಬ...ಕ್ಲಾಸ್ ತುಂಬಿ ತುಳುಕಾಡುತ್ತಿದೆ ನಿಧಾನವಾಗಿ ಒಳಗೆ ಹೋದೆ ಎಲ್ಲರು...ಹೋ...........ಎಂದು ಕೂಗುತ್ತ ವೆಲ್ಕಮ್ ಮಾಡಿದರು ಕಾರಣ ಬಸ್ಸು ತಡವಾಗಿದ್ದರಿಂದ ನಾನು ಸ್ವಲ್ಪ ತಡವಾಗಿದ್ದೆ..ಆದರೆ ಉಪನ್ಯಾಸಕರು ಇನ್ನು ಬಂದಿರಲಿಲ್ಲ...

ಅಕ್ಕ ಪಕ್ಕದ ವಿದ್ಯಾರ್ಥಿಗಳನ್ನು ಪರಿಚಯ ಮಾಡಿಕೊಳ್ಳೋಣ ಎನ್ನುವಸ್ತರಲ್ಲಿ ಉಪನ್ಯಾಸಕರು ಬಂದರು. ಮೊದಲ ದಿನದ ಮೊದಲ ತರಗತಿ ಇಂಗ್ಲಿಷ್.

goooooooooooood....................morning sirrrrrrrrrrrrrrrrrrrrrr.................ಎಂದು ಎಲ್ಲರು ಒಂದೇ ಕೋರಸ್ ನಲ್ಲಿ ಉಳಿದರು. ನಾನು ಗುಂಪಲ್ಲಿ ಗೋವಿಂದ ಅನ್ನೋ ಹಾಗೆ ಗುಡ್ ಮಾರ್ನಿಂಗ್ ಹೇಳಿದೆ...


ಸರಿ ಶುರುವಾಯ್ತು...ಉಭಾಯಕುಶುಲೋಪರಿ.....ಉಪನ್ಯಾಸಕರು ಹೇಳಿದರು..ನನ್ನ ಹೆಸರು..ಬಾಲಸುಬ್ರಮಣ್ಯಂ ಇಂಗ್ಲಿಷ್ ಉಪನ್ಯಾಸಕ...ಈಗ ನಿಮ್ಮ ನಿಮ್ಮ ಪರಿಚಯ ಮಾಡಿಕೊಳ್ಳಿ...ಎಲ್ಲಿಂದ ಬಂದೀರಿ, ನಿಮ್ಮ ಮಾರ್ಕ್ಸ್ ಎಷ್ಟು, ಜೀವನದಲ್ಲಿ ಏನಾಗಬೇಕು ಅಂತ ಅಂದುಕೊಂಡಿದ್ದೀರಿ..ಎಂದು,

ಡೌನ್ಲೋಡ್: ಎಟ್ಯ್ಪೆ೧.ಕಂ/ಫ.ಫ್ಪ್
ಮೊದಲ ಒಬ್ಬ ಸುಕೋಮಲ ಹುಡುಗಿಯಿಂದ ಶುರುವಾಯ್ತು...ಮೊದಲ ಬೆಂಚಿನ ಮೊದಲ ವಿಧ್ಯಾರ್ಥಿನಿ..Hi my name is somya ...my SSLC percentage is 89% and i want to become IAS.

ಹೀಗೆ ಶುರುವಾಗಿ ಪ್ರತಿಯೊಬ್ಬರು ಅವರವರ ಆಸೆ ಗುರಿಗಳನ್ನು ಹೇಳುತ್ತಾ ಬಂದರು. ನನ್ನ ಸರದಿ ಹತ್ತಿರ ಬರುತ್ತಿದ್ದಂತೆ ಎಡೆ ಧವ ಧವ ಕಾರಣ ನಮ್ಮ ಹಳ್ಳಿ ಶಾಲೇಲಿ ನಾನೇ ರಾಜ...ಅಲ್ಲಿ ನಾನೆ ಲೀಡರ್ ..ಇಡೀ ಶಾಲೆಗೆ ನಾನು ಗೊತ್ತು ಎಲ್ಲ ಕಾರ್ಯಕ್ರಮ ಸ್ಚೂಲ್ದ್ ಡೇ, ಸ್ಪೋರ್ಟ್ಸ್ ಡೇ, ಸರಸ್ವತಿ ಪೂಜೆ, ಪ್ರಭಂದ ಸ್ಪರ್ದೆ ಇವೆಲ್ಲಕ್ಕೂ ನಾನೆ ಹೋಗ್ತಾ ಇದ್ದೆ ಎಲ್ಲ ಶಿಕ್ಷಕರಿಗೂ ನಾನು ಅಚ್ಚುಮೆಚ್ಚು....

ಆದರೆ ಇಲ್ಲಿ ಎಂದರೋ ಮಹಾನುಭಾವುಲು...ಅನ್ನೋ ಹಾಗೆ ನನ್ನ ಅಂಕಗಳು ಇಲ್ಲಿನ ವಿದ್ಯಾರ್ಥಿಗಳ ಅಂಕಗಳ ಹತ್ತಿರ ಸುಳಿಯಲಿಲ್ಲ ಅಸ್ತೆ ಅಲ್ಲದೆ ಮೊದಲ ದಿನವೇ ಆತ್ಮ ವಿಶ್ವಾಸ ಕಡಿಮೆ ಆಗಿತ್ತು. ಸರಿ ನನ್ನ ಪರಿಚಯ ಹೇಳಿಕೊಂಡೆ ಜೀವನದಲ್ಲಿ ಒಬ್ಬ ಉತ್ತಮ ನೆತಾರನಗಬೇಕು, ಬದುಕು ಅಂದರೆ ಬರೀ ಡಾಕ್ಟ್ರು, ಎಂಜಿನೀರ್ ಅಸ್ತೆ ಅಲ್ಲ ನಾನು ಯಾವುದೇ ಕೆಲಸ ಮಾಡಿದರು ಯಾವುದೇ ಕ್ಷೇತ್ರಕ್ಕೂ ಹೋದರು the best.....ಆಗಬೇಕು ಅನ್ನೋದು ನನ್ನ ಆಸೆ ಎಂದು ಒಂದು ಪುಟ್ಟ ಭಾಷಣ ಮಾಡಿದೆ...ಎದ್ದು ನಿಲ್ಲುವ ವರಗೆ ಇದ್ದ ಆತಂಕ ಅದೆಲ್ಲಿ ಮಯವಗಿತ್ತೋ...ಗೊತ್ತಿಲ್ಲ..

ಹೀಗೆ ದಿನಗಳು ಉರುಲಿತಿದಂತೆ ಎಲ್ಲರು ಅಚ್ಚುಮೆಚ್ಚಿನ ಸ್ನೇಹಿತರು ಸ್ನೇಹಿತೆಯರು ಆದರು..

ತರಗತಿಯ ಎಲ್ಲ ಹುಡುಗಿಯರು ಬಹಳ ಕ್ಲೋಸ್ ಆಗಿದ್ದರಿಂದ ಬಹಳ ಫ್ರೆಂಡ್ಲಿ ಆಗಿ ಮೂವ್ ಮಾಡ್ತಿದ್ದೆ. ಅದೇ ಪ್ರತಿ ದಿನ ಬಸ್ಸಿನಲ್ಲಿ ಬರುವಾಗ ಬೇರೆ ಕಾಲೇಜಿನ ಹುಡುಗಿಯೊಬ್ಬಳು ನನ್ನನ್ನು ತುಂಬಾ ಕಾದುತ್ತಿದ್ದಳು...ಅಂದರೆ ಅವಳನ್ನ ನೋಡಿದರೆ ಏನೋ ಕುಶಿ, ಸಂಬ್ರಮ, ಸಂತೋಷ,..

ಅವಳು ಎಡಗಡೆ ಸೀಟ್ ನಲ್ಲಿ ಕುಳಿತರೆ ನಾನು ಅವಳ ಹಿಂದಿನ ಸೀಟ್...ಬಸ್ ಏನಾದ್ರು ರಶ್ ಇದ್ರೆ ನಾನು ಅವಳಿಗೆ ಸಮೀಪದಲ್ಲೇ ನಿಲ್ಲುವುದು ....

ಅವಳ ಜೊತೆ ಇದ್ದ ಇತರೆ ಹುಡುಗಿಯರನ್ನು ಸರಿಯಾಗಿ ನೋಡಿದ್ದೇ..ಇಲ್ಲ ಹೇಗಿದ್ದರೂ ಏನು ಎಂದು..ನನ್ನ ಪೂರ್ತಿ ಏಕಾಗ್ರತೆ ಇವಳ ಮೇಲೆ...

ಅವಳೂ ಒಂದು ದಿನ ಮಾತನಾಡಲಿಲ್ಲ....ನಾನು ಒಂದು ದಿನ ಮಾತನಾಡಲಿಲ್ಲ


ನೋಡಿದಾಗ ಮಾತ್ರ ಸ್ಮೈಲ್ ಮಾಡುತ್ತಿದ್ದಳು.....

ಪ್ರಪಂಚ ಪ್ರಳಯ ಅದ್ರು ಸರಿ ನಾನು ಕಾಲೇಜಿಗೆ ಹೋಗಲೇ ಬೇಕು ಅಂತ ನಾನು ಹೊರಟರೆ ಕೆಲವೊಮ್ಮೆ ಅವಳು ಚಕ್ಕರ್ ಹಾಕುತ್ತಿದ್ದಳು ಬಸ್ಸಿನಲ್ಲಿ ಬರುತ್ತಿರಲಿಲ್ಲ

ಅವತ್ತೆಲ್ಲ ಬಸ್ಸು ಬಣ ಬಣ ...ಯಾರು ಇಸ್ತವಾಗ್ತಾ ಇರ್ಲಿಲ್ಲ...ಒಂದು ಕಡೆ ಕಂಡಕ್ಟರ್ ನನ್ನ ಡ್ರೈವರ್ ನ ನೋಡಿ ಕೋಪ ಉಕ್ಕಿ ಬರ್ತಿತ್ತು ...ನನ್ನವಳನ್ನು ಯಾಕೆ ಕರೆತರಲಿಲ್ಲ ಎಂದು..

ಪಾಪ ಬಡಪಾಯಿಗಳು...ಅವರೇನು ಮಾಡಲು ಸಾದ್ಯ...ಎಂದು ನನಗೆ ನಾನೇ ಸಮಾದಾನ ಮಾಡಿಕೊಳ್ಳುತ್ತಿದ್ದೆ...

ಅದೊಂದು ದಿನ ಒಬ್ಬ ಪುಟ್ಟ ಹುಡುಗ ಪ್ರತಿದಿನ ನಮ್ಮ ಜೊತೆ ಪ್ರಯಾಣ ಮಾಡುತ್ತಿದ್ದ..ಅವನು ಅವಳ ಪಕ್ಕ ಕುಳಿತಿದ್ದ ಅವನು ಬಸ್ಸು ಇಳಿದ ತಕ್ಷಣ ಅವನನ್ನ ಫ್ರೆಂಡ್ ಮಾಡಿಕೊಂಡೆ...ಅವಳ ಹೆಸರೇನು ಎಂದು ಚಾಕ್ ಲೇಟ್ ಕೊಡಿಸಿದೆ...

ಆಗ ಅವನು ನಾಳೆ ಹೇಳುತ್ತೇನೆ ಅಂತ...ಓಡಿದ

ಸರಿ ನಾಳೆ ಮತ್ತೆ ಅವನಿಗೆ ಚಾಕ್ ಲೇಟ್ ಸೇವೆ ಶುರು...ಹೀಗೆ ಚೆನ್ನಾಗಿ ಉಪಯೋಗಿಸಿಕೊಂಡ ಆ ಪುಟ್ಟ ಹುಡುಗ...ಹೆಸರನ್ನು ಅವಳ ಎಲ್ಲ ವಿಚಾರಗಳನ್ನು ಹೇಳಿದ


ಆ ಹೆಸರು ಕಿವಿಗೆ ಬಿದ್ದರೆನೆ ರೋಮಾಂಚನ ಆಗ್ತಾ ಇತ್ತು......

ಒಂದು ಇಡೀ ವರ್ಷವಾಯ್ತು ಅವಳನ್ನ ಮಾತನಾಡಿಸಲು........

ಇಬ್ಬರ ನಡುವಿನ ಗೆಳೆತನ ಬೆಸೆಯಿತು...ಬೇರೆ ಬೇರೆ ಸೀಟ್ ಗಳಲ್ಲಿ ಕುಳಿತು ಕೊಳ್ಳುತ್ತಿದ್ದ ನಾವು ಈಗ ಒಂದೇ ಸೀಟ್ ನಲ್ಲಿ ಕುಳಿತುಕೊಳ್ಳಲು ಶುರು ಮಾಡಿದೆವು.

.......ಅವಳ ಎಲ್ಲ ಗೆಳತಿಯರು ಈಗ ನನಗೆ ಪರಿಚಯವಾಗಿ ಕ್ಲೋಸ್ ಆದರು.

ಕಾಲೇಜಿನ ಸ್ನೇಹಿತೆಯರ ಜೊತೆ ಸರಾಗವಾಗಿ ಮಾತನಾಡುತ್ತಿದ್ದ ನಾನು ಇವಳ ಜೊತೆ ಸ್ವಲ್ಪ ಯೋಚಿಸಿ ಮಾತನಾಡುತ್ತಿದ್ದೆ...ಎಲ್ಲಾದರು ಮನಸಿನ ಭಾವನೆ ಬ್ಲಾಸ್ಟ್ ಆದರೆ ಎಂಬ ಆತಂಕದಿಂದ...


.....ಬದುಕು...ಹೀಗೆ ನಡೆಯುತ್ತಿತ್ತು....ಕಾಲೇಜು ಸ್ನೇಹಿತರು..ಬಸ್ಸಿನ ಈ ಸುಂದರಿ..ಇನ್ನೇನು ಬೇಕು ಬದುಕಲ್ಲಿ....

ಪ್ರತಿ ದಿನ ಮಾತು ಕಥೆ ಎಲ್ಲ ನಡೆಯುತ್ತಿದ್ದರು ಅದಕ್ಕಿಂತ ಮುಂದೆ ಹೋಗಲು ಸಾದ್ಯವೇ ಆಗುತ್ತಿರಲಿಲ್ಲ.

ಸರಿ ದ್ವಿತೀಯ ಪಿ ಯು ಪರೀಕ್ಷೆ ಮುಗಿಯಿತು...

ನಾನು ಇನ್ನು ಮೂರು ವರ್ಷ ಒಟ್ಟಿಗೆ ಪಯಣ ಮಾಡುತ್ತೇವೆ...ಡಿಗ್ರೀ ನಲ್ಲಾದರು ನನ್ನ ಪ್ರೇಮ ನಿವೇದನೆ ಮಾಡಲೇ ಬೇಕು ಎಂಬ ಹಠ ತೊಟ್ಟೆ...

ಪಿ ಯು ಪಲಿತಾಂಶ ಬಂತು...

ನಾನೂ ಪಾಸ್ ಆಗಿದ್ದೆ..............ಅವಳು ಪಾಸ್ ಆಗಿದ್ದಳು...


ನನ್ನದು ಡಿಗ್ರಿ ಅದ್ಮಿಶೇನ್ ಆಯಿತು...ಅವಳು ಬೇರೆ ಕಾಲೇಜು ಆಗಿದ್ದರಿಂದ ಮತ್ತೆ ಅದೇ ಕಾಲೇಜಿಗೆ ಸೇರಿರುತ್ತಲೇ ಬಿಡು ಎಂದುಕೊಂಡು ..ಪದವಿ ಕಾಲೇಜಿನ ಮೊದಲ ದಿನಕ್ಕಾಗಿ..ಕಾಯುತ್ತ ಕೂತೆ...


...ಮೊದಲ ದಿನ ಬಂತು...

ಬಸ್ಸು....ಬಂತು....

ನಾನೂ ಬಸ್ಸು ಹತ್ತಿ ಅವಳಿಗಾಗಿ ಹುಡುಕಿದೆ....ಎಲ್ಲಿದ್ದಾಳೆ..???

ಎಲ್ಲಿದ್ದಾಳೆ? ಹುಡುಕಿದೆ ಹುಡುಕಿದೆ....ಹುದುಕಾಆಆಆಆಆಆಆಆದಿದೆ ?


ಆ ಪುಟ್ಟ ಹುಡುಗ ಹೇಳಿದ...ಅಕ್ಕ...ಬೆಂಗಳೂರಿನ ಕಾಲೇಜಿಗೆ ಸೇರಿದ್ದಾಳೆ ...ಅಲ್ಲೇ ಅವರ ಚಿಕ್ಕಮ್ಮನ ಮನೆಯಲ್ಲಿ ಇದ್ದು ಓದುತ್ತಳಂತೆ..ಅಂತ...

ಮನಸಿನ ತುಂಬೆಲ್ಲ ಅವಳದೇ ಗುಂಗು ತುಂಬಿಕೊಂಡು...ಈ ಮೂರೂ ವರ್ಷದಲ್ಲಿ ಎಂದಾದರೂ ಒಂದು ದಿನ ...ನೀನಂದ್ರೆ ನನಗಿಸ್ತ ಕಣೆ...ಅಂತ ಹೇಳಬೇಕು...ಎಂಬ ನನ್ನ ಆಸೆ....ಹಾಗೆ ಉಳಿಯಿತು...


...ವರುಷಗಳು ಕಳೆಯಿತು...ಪದವಿ ಯಾ ಕೊನೆಯ ವರುಷದಲ್ಲಿ ಇದ್ದಾಗ....ಅದೇ ಹುಡುಗ...ಬಂದು ಹೇಳಿದ...ಅಣ್ಣ ಅಕ್ಕನಿಗೆ ಮದುವೆ ಆಯಿತು..ಅಂದ..

ಜಂಗಾ ಬಲ ಉಡುಗಿ ಹೋಯ್ತು...ನನ್ನ ಕನಸಿನ ಗೋಪುರಕ್ಕೆ ಯಾರೋ ಬಂದು ಬಾಂಬ್ ಇತ್ತಂತೆ ಆಯಿತು..

ಇಷ್ಟು ಬೇಗ ಯಾಕೆ ಅಂದೇ...ಅದಕ್ಕೆ ಅವರ ತಂದೆಗೆ ತುಂಬಾ ಹುಷಾರಿರಲಿಲ್ಲ...ಅದಕ್ಕೆ ಅವರು ಮಗಳ ಮದುವೆ ನೋಡಬೇಕು ಅಂದರಂತೆ...

ಸರಿ ಯಾರೋ ಸಂಬಂದದಲ್ಲಿ ಹುಡುಗ ಇದ್ದನಂತೆ...ಅದಕ್ಕೆ...ಮದುವೆ ಮಾಡಿಸಿ ಬಿಟ್ಟರು..ಅಂದ..


ಒಹ್...ದೇವರ್ರೆ...

ಏನು ನಿನ್ನ ಲೀಲೆ...

ವರುಷಗಳು ನಾನು ಕಾದಿದ್ದು...ಇದಕ್ಕೇನ...ಎಂದು ಮನಸ್ಸು ರೋದಿಸುತ್ತಿತ್ತು...

ಇತ್ತೆಚೆಗೊಂದು ದಿನ ಅವಳು ತನ್ನ ಇಬ್ಬರು ಮಕ್ಕಳ ಜೊತೆ ಕಾಣಿಸಿದಳು...ನೋಡಿದಾಗ ಮಾತನಾಡಿಸುವ ಧೈರ್ಯ ಬರಲಿಲ್ಲ...

ಇದೆಲ್ಲ ನೆನಪಾಯ್ತು.....................................

............................................................


.............ಅಂದ ನನ್ನ ಗೆಳೆಯ..!

No comments:

Post a Comment