Pages

Thursday, August 18, 2011

ಮಧುರ ನೆನಪು...




ಹೊರಗೆ ಅದ್ಭುತವಾದ ಮಳೆ...
ಮನಸಿನಲ್ಲಿ ಹಳೆಯ ನೆನಪುಗಳ ...ಸರಮಾಲೆ

ಪ್ರತಿ ಕ್ಷಣ ನೀ ನನ್ನನ್ನು ಕಾಡುತ್ತಿರುವೆ..
ಕಳೆದ ಆ ಮಧುರ ಕ್ಷಣಗಳನ್ನು ನೆನಪಿಸುತ್ತಿರುವೆ...

ಹೇಳದೆ ಏಕೆ ಹೊರಟೆ ನನ್ನ ಬದುಕಿನ ಬಂಡಿಯಿಂದ
ಮತ್ತೆ ಬರುವೆಯ ಎಂಬಂತೆ ಕಾಯುತ್ತಿರುವೆ ಹಗಲಿರುಳು ಆಸೆ ಕಣ್ಣಿನಿಂದ


ನಾ ಮಾಡಿದ ಅಪರಾಧವಾದರೂ ಏನು ಎಂದು ನಿನ್ನ ಕೆಲಬೇಕೆನ್ನಿಸುತಿದೆ
ಆದರೆ ಕೇಳಬೇಕೆಂದರೆ ನಿನ್ನ ಇರುವಿಕೆ ಎಲ್ಲೆಂದು ತಿಳಿಯದಾಗಿದೆ..


ಬದುಕಿನ ಬಂಡಿಯಲ್ಲಿ ಈ ಯಾತನೆ ಮರೆಯದಂತಾಗಿದೆ
ಮರೆಯಲೆತ್ನಿಸಿದಷ್ಟು ನೀ ನನ್ನನ್ನು ಅವರಿಸಿಕೊಂಡಂತಾಗಿದೆ ..


ನೀ ಎಲ್ಲಿರುವೆಯೋ ಹೇಗಿರುವೆಯೋ ಎಂದು ತಿಳಿಯದಿದ್ದರೂ
ನಾ ಮಾತ್ರ ಆಸೆ ಕಂಗಳಿಂದ ಎದುರು ನೋಡುತ್ತಿದ್ದೇನೆ ಕಾರಣ
ಮತ್ತೆ ನೀ ನನ್ನ ಬದುಕಿನೊಳಗೆ ಕಾಲಿಡುವೆಯೆಂದು...?

No comments:

Post a Comment