Pages

Sunday, August 28, 2011

ಭರವಸೆ





ಗೆಳತಿ .....

ನನ್ನ ಗೆಳೆಯನ ಮನೆಗೆಂದು ನಾ ಬಂದಿದ್ದಾಗ

ರಸ್ತೆಯ ತಿರುವಿನಲ್ಲಿ ನೀ ನಿಂತಿದ್ದೆ

ತಿರುವಿನ ಎಡಕ್ಕೆ ಚಲಿಸಬೇಕೋ ಬಲಕ್ಕೆ ಚಲಿಸಬೇಕೋ ಎಂಬ ಜಿಜ್ಞಾಸೆಯಲ್ಲಿ ನೀನಿದ್ದೆ

ನಾ ನಿನ್ನ ಮುಂದೆ ಹಾದು ಹೋಗುವಾಗ

ನೀ ನನ್ನ ಕೇಳಿದೆ ನಿನ್ನ ಗೆಳತಿಯ ಮನೆಯ ವಿಳಾಸ

ನಾ ವಿಳಾಸ ತೋರಿಸುವ ನೆಪದಲ್ಲಿ ನಿನ್ನನ್ನು ಮೂರನೇ ತಿರುವಿನ ಕಡೆಗೆ ಕರೆದೊಯ್ದೆ

ಆ ತಿರುವಿನಲ್ಲಿ ನಿನ್ನ ಗೆಳತಿಯ ಮನೆ ಬರುವಷ್ಟರಲ್ಲಿ

ನಿನ್ನ ಹೆಸರನ್ನು ಕೇಳಿಕೊಂಡೆ 'ಮಧುರಾ' ಎಂತಹ ಹೆಸರೇ ನಿನ್ನದು ....

ಆ ಕ್ಷಣದಲ್ಲೇ ನನ್ನ ಮನದಿ ಮಧುರ ಭಾವನೆ ಸುಳಿಯುವಂತೆ ಮಾಡಿದ್ದೆ

ನೀ ನನ್ನ ಹೆಸರು ಕೇಳಿದಾಗ ನಾನೆಂದೆ 'ಸುಮಂತ'

ಆಗಲೇ ನನಗನಿಸಿದ್ದು

ನಮ್ಮಿಬ್ಬರ ನಡುವೆ 'ಅಂತ' ರ ಇಲ್ಲವಾದಾಗ

ನಮ್ಮ ಬದುಕಾಗುತ್ತದೆ 'ಸುಮಧುರ'

ಅಂದಿನಿಂದ ಶುರುವಾಯಿತು ನೋಡು ನನ್ನ 'ಮಧುರ' ಯಾತ್ರೆ

ಆರು ಭೇಟಿಗಳಲ್ಲೇ ನೀ ನನ್ನ ಮೆಚ್ಚಿದ್ದೆ

ಏಳನೇ ಭೇಟಿಯಾಗಿದ್ದು ನದೀ ತೀರದಲ್ಲಿ

ನೀ ನದಿಯಂಚಿನಲ್ಲಿ ಕುಳಿತು ನಿನ್ನ ಪಾದಗಳನ್ನು ತೊಯ್ಸಿಕೊಳ್ಳುತ್ತಿದ್ದೆ

ನಿನ್ನ ಮುದ್ದಾದ ಪಾದಗಳನ್ನು ಮೀನುಗಳು ಸ್ಪರ್ಶಿಸಿ ಹೋಗುತ್ತಿದ್ದರೆ

ಆ ಸ್ಪರ್ಶಕ್ಕೆ ನೀ ಪುಳಕಗೊಂಡಾಗ

ನಿನ್ನ ನೋಡಿ ನಾನೂ ಪುಳಕಗೊಂಡೆ

ಆ ಕ್ಷಣದ ನಿನ್ನ ಸಂಭ್ರಮವನ್ನು ನಾ ಬದುಕಿನುದ್ದಕ್ಕೂ

ನೀಡುವೆನೆಂದು... ನಾ ಕಣ್ಣಲ್ಲೇ ಹೇಳಿದಾಗ ...

ನಿನ್ನ ಕಣ್ಣಲ್ಲಿನ ಆ ಸಂತೃಪ್ತಿ...ನಾ ಕಂಡಾಗ

ನಾ ಮೂಕನಾದೆ ಗೆಳತಿ

ಅದೆಷ್ಟು ಭರವಸೆ ನಿನಗೆ ನನ್ನ ಮೇಲೆ..!

2 comments:

  1. Thumba Chennagide Prabhakar Anna.... Nimage Yenu Prerane preethiya kavana bareyodakke??? Anubhava or ....... ????

    ReplyDelete
  2. prerane yenu anta helali jeevananubhava lokaanubhava....

    ReplyDelete