Pages

Sunday, August 21, 2011

ಬಿಕ್ಕಿ ಬಿಕ್ಕಿ ಅತ್ತುಬಿಟ್ಟೆ...??!!



ಗೆಳತಿ,



'ಅಳು' ವೆಂದರೆನೆಂದು ನನಗೆ ಗೊತ್ತಿರಲಿಲ್ಲ...

ಬದುಕಿನಲ್ಲಿ..!

ನೋವು, ಕಷ್ಟ,ದುಃಖ ದುಮ್ಮನವೇ ಹಾಸು, ಹೊದ್ದು ಮಲಗಿದ್ದವನು ನಾನು..
ಆದರೂ ಎಂದೂ ದುಃಖ ಒತ್ತರಿಸಿರಲಿಲ್ಲ...!

ಬದುಕಿನ ಅನೇಕ ವರ್ಷಗಳನ್ನು ಕಷ್ಟ, ಕಾರ್ಪಣ್ಯ, ಬಡತನದ ನೋವಿನಲ್ಲಿ ಕಳೆದವನು ನಾನು..
ಆದರೂ ಎಂದೂ ದುಃಖ ಒತ್ತರಿಸಿರಲಿಲ್ಲ..!

ಸಮಾಜದಲ್ಲಿ ಎಲ್ಲರೂ ನೆಮ್ಮದಿಯಿಂದಿದ್ದಾರೆ ನಾನು ಮಾತ್ರ ದುಃಖದ ಮಡುವಿನಲ್ಲಿ...
ಬೆಂದು ಬಸವಳಿಯುತ್ತಿದ್ದೇನೆ ಎಂದು ಯೋಚಿಸುತ್ತಿದ್ದವನು ನಾನೂ..
ಆದರೂ ಎಂದೂ ದುಃಖ ಒತ್ತರಿಸಿರಲಿಲ್ಲ...!

ಬದುಕಿನ ಮೊದಲ ದಿನದಿಂದ ನೀನು ನನ್ನ ಬದುಕಿನೊಳಗೆ..
ಪ್ರವೇಶಿಸುವ ತನಕ ನೋವಿನಲ್ಲಿ ಮುಳುಗಿದ್ದವನು ನಾನೂ,,.
ಆದರೂ ಎಂದೂ ದುಃಖ ಒತ್ತರಿಸಿರಲಿಲ್ಲ..!

ಬಡತನದ ಬೇಗೆಯಲ್ಲಿ ಮಿಂದೆದ್ದೆ...
ಇಂದಿನ ಊಟಕ್ಕೆ ಏನು ಮಾಡಬೇಕೆಂದು ಕಂಗಾಲಾಗಿದ್ದವನು ನಾನೂ
ಆದರೂ ಎಂದೂ ದುಃಖ ಒತ್ತರಿಸಿರಲಿಲ್ಲ..!

ಆದರೆ ...

ಗೆಳತಿ...

,,,,,,,,,
.......
ಒಂದೇ ಮಾತಿನಲ್ಲಿ ನೀನು ಹೇಳಿಬಿಟ್ಟೆಯಲ್ಲ ....

ನನ್ನನ್ನು ಮರೆತುಬಿದೂ ಎಂದೂ.....

ಆಗ...

ಬಿಕ್ಕಿ ಬಿಕ್ಕಿ.....ಅತ್ತುಬಿಟ್ಟೆ.....!!

No comments:

Post a Comment