...................
ಮನಸು ಪ್ರತಿ ಸಾರಿಯೂ ಅವಳತ್ತ ಹೊರಳುತ್ತಿತ್ತು ಅವಳು ಯಾವಾಗ ತರಗತಿಗೆ ಬರುವಳೋ ಯಾವಾಗ ಅವಳನ್ನ ನೋದುವೇನೋ ಎನ್ನುವ ಕಾತುರ ಪ್ರತಿದಿನ ಪ್ರತಿಕ್ಷಣ ಅನ್ನಿಸ್ಸುತ್ತಿತ್ತು.
ಒಂದು ದಿನ ರಜಾ ಹಾಕಿದರಂತೂ ಮನಸು ಏನೋ ಕಳೆದುಕೊಂಡಂತೆ. ಏನೋ ಅಸಮಾದಾನ,.ಏನೋ ಆತಂಕ ಏನೋ ಕಳೆದುಕೊಂಡಂತೆ?
ಪ್ರತಿ ದಿನ ಬರೀ ನೋಡಿ ಆನಂದ ಪಡುತ್ತಿದ್ದವನು ಒಮ್ಮಿಂದೊಮ್ಮೆಲೆ ಧೈರ್ಯ ಮಾಡಿ ಮಾತನದಿಸೆ ಬಿಡೋಣ ಎಂಬ ಧೈರ್ಯ ಹೆಚ್ಚಾಯಿತು. ಮುಂಜಾನೆ ತರಗತಿಗೆ ೨ ತಾಸು ಮೊದಲೇ ಕ್ಯಾಂಪಸ್ ಗೆ ಹೋದೆ ಅವಳಿಗಾಗಿ ಕಾಯುತ್ತಲಿದ್ದೆ.ಒಂದೊಂದು ಕ್ಷಣವೂ ಒಂದೊಂದು ಯುಗದಂತೆ ಭಾಸವಾಗುತ್ತಿತ್ತು. ಕುಳಿತಲ್ಲಿಂದಲೇ ಪೇಚಾಡುತ್ತ ಪಡೆ ಪಡೆ ಟೈಮ್ ನೋಡುತ್ತಲಿದ್ದೆ. ಯಾವಾಗ ಅವಳು ಬರುವಳೋ, ಯಾವಾಗ ನಾನು ಅವಳನ್ನ ಮಾತನಾಡಿಸುವೇನೋ, ಇದು ಮೊದಲ ಪರಿಚಯವಾದರು ಸರಿ ಮನಸಿನ ಭಾವನೆಯನ್ನು ಯಾವಾಗ ಹೇಳುವೇನೋ ಎಂಬ ತುಡಿತ ಹೆಚ್ಚಾಗುತ್ತಲೇ ಇತ್ತು..
ಮೊದಲ ದಿನ ಕಾಲೇಜಿನಲ್ಲಿ ಹೊಸ ವಿದ್ಯಾರ್ಥಿಗಳಿಗಾಗಿ ಸ್ವಾಗತ ಕಾರ್ಯಕ್ರಮ ಏರ್ಪಾಟು ಮಾಡಲಾಗಿತ್ತು. ಅವಳು ಗುಲಾಬಿ ಬಣ್ಣದ ಸಲ್ವಾರ್ನಲ್ಲಿ ಕೂದಲನ್ನು ಇಳಿಬಿಟ್ಟು ಹಣೆಯ ಮೇಲೊಂದು ಪುಟ್ಟ ಬಿಂದಿ ಇಟ್ಟುಕೊಂಡು ತನ್ನ ಮುಂಗುರಳನ್ನು ಹಿಂದಕ್ಕೆ ಸರಿಸುತ್ತ ಹೆಜ್ಜೆ ಮೇಲೆ ಹೆಜ್ಜೆ ಇಡುತ್ತ ಕಾಲೇಜಿನ ಕಡೆಗೆ ಬರುತ್ತಿರುವಾಗಲೇ ನಾನವಳನ್ನ ಮೊದಲ ಸಲ ನೋಡಿದ್ದು. ನೋಡ ನೋಡುತ್ತಿದ್ದಂತೆಯೇ ಮನಸು ಗರಿ ಬಿಚ್ಚಿ ಕುಣಿಯಲಾರಮ್ಬಿಸಿತು. ಮನಸಿನಲ್ಲಿ ಏನೋ ಸಂತೋಷ ಸಂಬ್ರಮ ಖುಷಿ. ಆದರೆ ಕೆಲವೇ ಕ್ಷಣಗಳಲ್ಲಿ ತಿಳಿಯಿತು ಅವಳು ನಮ್ಮದೇ ಕ್ಲಾಸ್ ನವಲೆಂದು. ಇನ್ನೇನು ಬೇಕು ಸ್ವರ್ಗಕ್ಕೆ ಕಿಚ್ಚು ಹಚ್ಚಲಿಕ್ಕೆ ಎಂದು ಮನಸಿನಲ್ಲೇ ಅಂದುಕೊಂಡೆ. Love at First sight ಅಂದ್ರೆ ಇದೇನಾ...ಗೊತ್ತಿಲ್ಲ?
ಆದರೆ ಅಂದುಕೊಂದಸ್ತು ಸುಲಭವಾಗಲಿಲ್ಲ ಅವಳನ್ನ ಪರಿಚಯ ಮಾಡಿಕೊಳ್ಳುವುದು. ಕಾರಣ ಅವಳು ಮಾತು ಬೆಳ್ಳಿ ಮೌನ ಬಂಗಾರ ಎಂಬಂತಿರುತ್ತಿದ್ದಳು. ಹುಡುಗಿಯರ ಹತ್ತಿರವೇ ಹೆಚ್ಚು ಮಾತನಾಡುತ್ತಿರಲಿಲ್ಲ ಇನ್ನು ಹುಡುಗರ ಹತ್ತಿರ...?
ಈ ವಿಚಾರ ಗೊತ್ತಾದ ಮೇಲೆ ಈಗಲೇ ಮಾತನಾಡಿಸುವುದು ಒಳ್ಳೆಯದಲ್ಲ ಸ್ವಲ್ಪ ಸಮಯ ಕಳೆಯಲಿ ಆಮೇಲೆ ಮಾತನಾಡಿಸೋಣ, ನನ್ನ ಮನಸ್ಸಿನ ಭಾವನೆ ಹೇಳೋಣ ಎಂದುಕೊಂಡು ಅವಳ ರುಚಿ, ಅಭಿರುಚಿ, ವಿವರ ಕಲೆಹಾಕಲು ಆರಂಬಿಸಿದೆ.
ಅಪ್ಪ ಸರ್ಕಾರಿ ಅಧಿಕಾರಿ, ಒಬ್ಬ ಅಣ್ಣನಿದ್ದಾನೆ ಅವನು ಮುಂಬೈ ನಲ್ಲಿ ಉದ್ಯೋಗದಲ್ಲಿದ್ದಾನೆ, ಇನ್ನು ಒಬ್ಬಳು ಪುಟ್ಟ ತಂಗಿ ಇನ್ನು ಹೈಸ್ಚೂಲ್ ಮೊದಲ ವರ್ಷದಲ್ಲಿದಲೇ ಈಗ ಸದ್ಯಕ್ಕೆ ಮನೆಯಲ್ಲಿರುವವರು ಅವಳ ತಾಯಿಯೂ ಸೇರಿ ೪ ಮಂದಿ.
ಅವಳ ಮನೆಯ ವಿಳಾಸ ಪತ್ತೆ ಮಡಿ ಅವಳ ಚಲನ ವಲನ ಗಮನಿಸಿ ಅವಳ ದಿನಚರಿ ಗಮನಿಸಿದ್ದು ಅತ್ಯು. ಪಿ.ಯು ಮಂಗಳೂರಿನಲ್ಲಿ ಮುಗಿಸಿ ಪದವಿಗೆ ನಮ್ಮ ಕಾಲೇಜಿಗೆ ಸೇರಿದ್ದಳು. ಅಪ್ಪ Transferble ಜಾಬ್ ನಲ್ಲಿ ಇದ್ದುದರಿಂದ ನಮ್ಮ ಕಾಲೇಜಿಗೆ ಸೇರಿದ್ದಳು.
ಇಸ್ಟೆಲ್ಲಾ ವಿವರ ಸಿಕ್ಕ ಮೇಲೆ ಇನ್ನು ಕುಶಿ ಆಯಿತು. ಮನಸಿನಲ್ಲಿ ಅಂದುಕೊಂಡೆ...ಮಗಾ ಒಳ್ಳೆ ರೆಸೆರ್ಚ್ ಮಾಡಿದಿಯ ಅಂತ..
ಇನ್ನೇನು ಕಾಲೇಜಿನ ಬೆಲ್ಲು ಹೊಡೆಯಲು ಕೇವಲ ೧೦ ನಿಮಿಷ ವಿದೆ ಎನ್ನುವಾಗ ರಸ್ತೆಯತ್ತ ನೋಡಿದೆ...ದೊರದಲ್ಲಿ ಅವಳ ಸುಂದರ ಸುಕೊಮಲವಾದ ಮುಖ ಕಾಣಿಸಿತು. ಮನಸಿನ ಉದ್ವೇಗ ಹೆಚ್ಚಾಯಿತು. ಅವಳು ಹತ್ತಿರ ಬರುತ್ತಿದ್ದಂತೆ...ಎದೆಯ ಬಡಿತ ಹೆಚ್ಚಾಗುತ್ತಿತ್ತು.
ಇನ್ನೇನು ಹಾತೀರ ಬಂದಳು...ನನಗು ಅವಳಿಗೂ ಕೇವಲ ೧೦ ಹೆಜ್ಜೆ...................................
.......................................................
........................................ಮಾತನಾಡಿಸಲು ಧೈರ್ಯ ಮಾಡಿ ಮುಂದೆ ಅಡಿಯಿತ್ತೆ....
............................................................ಥಟ್ಟನೆ ಎಚ್ಚರ ವಾಯ್ತು, ಅಲಾರ್ಮ್ ಒಂದೇ ಸಮನೆ ಹೊಡೆದುಕೊಳ್ಳುತ್ತಿತ್ತು. ................ಸಮಯ ಬೆಳಿಗ್ಗೆ ೬ ಘಂಟೆ ...ಒಹ್ ......
ಕನಸಾ...ಛೆ ...ಪುರ್ತಿಯಾಗಲೇ ಇಲ್ಲ ಎಂಬ ಬೇಸರದಲ್ಲಿ...ಎದ್ದು ಬಾತ್ ರೂಮಿನತ್ತ ಹೆಜ್ಜೆ ಹಾಕಿದೆ...!!!
ವೌ ಮೇರೆ ದೋಸ್ತ್ ಕನಸು ನಿಜವಾಗಿದ್ದರೆ.......ಮುಂದೇನೂ !
ReplyDelete