Pages

Saturday, August 20, 2011

ಸಂತೃಪ್ತಿ...

ಓ ನನ್ನ ಜನುಮದ ಗೆಳತಿ...

ಎಲ್ಲ ಪ್ರೇಮಿಗಳಂತೆ ನಾವು ಮರ ಸುತ್ತಲಿಲ್ಲ...
ಕೈ ಕೈ ಹಿಡಿದು ಓಡಾಡಲಿಲ್ಲ...

ಕಾಫೀ ಪಾನೀಯ ಎಂದು ಹೋಟೆಲ್ ನ ಕಡೆ ಹೆಜ್ಜೆ ಹಾಕಲಿಲ್ಲ...
ಪಾರ್ಕಿನಲ್ಲಿ ಕುಳಿತು ಹರಟಲಿಲ್ಲ...

ಅನಾವಶ್ಯಕ ಸಂದೇಶಗಳ ವಿನಿಮಯ ಮಾಡಿಕೊಳ್ಳಲಿಲ್ಲ...
ಸದಾಕಾಲ ಮೊಬೈಲ್ ಗೆ ಅಂಟಿಕೊಲ್ಲಲಿಲ್ಲ...

ಇಷ್ಟಾಗಿಯೂ ......!

ನಾವಿಬ್ಬರು ಹತ್ತಿರವಾಗುವುದು ಬಿಡಲಿಲ್ಲ...
ಬೇರೆ ವಿಚಾರಗಳ ಬಗ್ಗೆ ಕಿವಿ ತಾಕಿಸದೆ ಇರಲಿಲ್ಲ...

ಮನೆಯವರಿಗೆ ತಿಳಿಸಲು ತಡ ಮಾಡಲಿಲ್ಲ....

ಅದಕ್ಕೆ.....!

ಅವರು ಒಪ್ಪದಿದ್ದರೆ ಮುಂದೇನು? ಎಂಭ ಭಯ ಕಾಡದೆ ಇರಲಿಲ್ಲ....
ಹೇಳಲೇ ಬೇಕಿದ್ದ ಎಸ್ಟೋ ಸಂಗತಿಗಳಿಗೆ ಮನದಲ್ಲೇ ಕಡಿವಾಣ ಹಾಕುವುದು ಮರೆಯಲಿಲ್ಲ....

ನೀನು ಹಾಗೆ ಉಳಿದೆಯಲ್ಲ...!
ನಾನೂ ಹಾಗೆ ಉಳಿದೆನಲ್ಲಾ..!!

ನಮ್ಮಿಬ್ಬರಿಗೂ ಯಾವುದೇ ಜವಾಬ್ದಾರಿಗಲಿರಲಿಲ್ಲ...

ಆದರೂ......

ಬದುಕಿನ ಬಗ್ಗೆ ಆಸಕ್ತಿ ಹೆಚ್ಚಿತ್ತಲ್ಲಾ..
ನಮ್ಮಯ ಬಂಧನವನ್ನು ಶಾಶ್ವಥಗೊಲಿಸಬೇಕು ಎಂಬ ಹಂಬಲ ವಿತ್ತಲ್ಲಾ..

ಮದುವೆ ಬಂದನದಿಂದ ಬೆಸೆಯಬೇಕೆಂಬ ಆಸೆ ನಮ್ಮದಾಗಿತ್ತಲ್ಲ...
ಆದ್ದರಿಂದಲೇ ಹೀಗಿದ್ದೆವೆನ್ನುವುದು ಪರಸ್ಪರ ಇಬ್ಬರಿಗೂ ಅರ್ಥವಾಗಿತ್ತಲ್ಲ..

ಅದೆಲ್ಲಕ್ಕಿಂತ...

ಮನೆಯಲ್ಲಿ ವಿಷಯ ತಿಳಿಸಿದಾಗ ಅವರು...Yes...ಎಂದಿದ್ದೆ ಸೋಜಿಗವಾಗಿತ್ತಲ್ಲ...

ಬೇಡದ ಚಿಂತೆಯಿಂದಾಗಿ ನಮಗೆ ಕೆಲವು ಮಧುರಾ ಗಳಿಗೆಗಳು ಸಿಗಲಿಲ್ಲವಲ್ಲ...

ಎಂದು ನಮ್ಮನ್ನು ನಾವೇ ಶಪಿಸಿಕೊಂದೆವಲ್ಲ...!

ಇಂದು ಮದುವೆಯನ್ನು ಆಗಿದ್ದೆವಲ್ಲಾ ....!!!
ನಮ್ಮಿಬ್ಬರ ಪ್ರೀತಿಯ ಕುರುಹಾಗಿ...

ಆರತಿಗೆ ಮಗಳು...
ಕೀರುತಿಗೆ...ಮಗ..ಹುಟ್ಟಿರುವರಲ್ಲಾ...

ನಮ್ಮ ಬಂಧನ ಗಟ್ಟಿ ಗೊಲಿಸಿದ್ದರಲ್ಲಾ..

ನಮ್ಮ ಪ್ರೇಮ ಸಾಫಲ್ಯ ಕಂಡಿದೆಯಲ್ಲಾ...

ನಮ್ಮಿಬ್ಬರ ಕುಟುಂಬಗಳನ್ನು ಬೆಸೆದಿದ್ದೀವಲ್ಲಾ..

ಗೌರವವನ್ನು ಕಾಪಡಿಕೊಂದೆವೆಂಬಾ ಎಂಬ ತೃಪ್ತಿ ನಮ್ಮಿಬ್ಬರಿಗೂ ಇದೆಯಲ್ಲ..

ಇಂತಹುದೇ ತೃಪ್ತಿ ಎಲ್ಲ ಪ್ರೇಮಿಗಳಿಗೂ ಸಿಗಲೀ ಎನ್ನುವ ಹಾರೈಕೆ ನಮ್ಮಿಬ್ಬರದಾಗಿದೆಯಲ್ಲಾ..

ಅಷ್ಟು ಸಾಕು...

ಇನ್ನೇನು ಬೇಕು ಈ ಬದುಕಿಗೆ ....? ಜನ್ಮ ಸಾರ್ಥಕ ವಾಗಿದೆಯಲ್ಲ...!!!

No comments:

Post a Comment