
ಚಿನ್ನು,
ನೀನು ನನ್ನ ಭೇಟಿ ಮಾಡಲು ಬರುವೆಯೆಂದು ತಿಳಿದ ಆ ಘಳಿಗೆಯಿಂದ
ನಾನು ನಾನಾಗಿ ಉಳಿಯಲಿಲ್ಲ
ನನ್ನ ಕನಸುಗಳು ಗರಿ ಬಿಚ್ಚಿ ಕುಣಿಯಲಾರಮ್ಬಿಸಿವೆ
ನನ್ನ ಮನಸು ಕುನಿಯಲಾರಮ್ಬಿಸಿದೆ
ನನ್ನ ಮನಸು ಪುಳಕಾಗಿದೆ
ನನ್ನೆಲ್ಲ ಕನಸುಗಳನ್ನು ನಿನ್ನೊಂದಿಗೆ ಹಂಚಿಕೊಳ್ಳಲು ಹವನಿಸುತ್ತಿರುವೆ
ನೀ ಬಂದಾಗ ಸುರಿಯುತ್ತಿರುವ ಮಳೆಯಲ್ಲಿ ನಿನ್ನ ಜೊತೆ ನಡೆಯಬೇಕೆಂಬ ಬಯಕೆ ಹೆಚ್ಚುತ್ತಿದೆ
ನಮ್ಮಿಬ್ಬರ ಕನಸುಗಳ ಸಾಕಾರ ಗೊಳಿಸಲು ಯೋಜನೆ ರೂಪಿಸಬೇಕಿದೆ
ನಮ್ಮಿಬ್ಬರ ನಡುವೆ ಪ್ರೇಮ ಚಿಗುರಲಾರಮ್ಬಿಸಿದ ದಿನದಿಂದ ನಾವಾಡಿದ ಮಾತುಗಳನ್ನು ಮೆಲುಕು ಹಾಕಬೇಕಿದೆ
ಪ್ರೀತಿಯ ಉನ್ಮಾದದಲ್ಲಿ ತೆಲಬೆಕೆನಿಸಿದೆ
ಸ್ವರ್ಗಕ್ಕೆ ಕಿಚ್ಚು ಹಚ್ಚಬೇಕೆನಿಸಿದೆ.
ಭವಿತವ್ಯದ ಬಗ್ಗೆ ಚಿಂತಿಸಬೇಕಿದೆ
ನಿನ್ನ ಕಣ್ಣ ಆ ತುಂಟ ನೋಟ ನೋದಬೇಕೆನಿಸಿದೆ
ನಿನ್ನ ಕೈ ಹಿಡಿದು ನಾನಿನ್ದ್ದೇನೆ ಚಿಂತಿಸಬೇಡ ಎಂದು ಹೇಳಬೇಕೆನಿಸಿದೆ
ಬೇಗ ಬರುವೆಯ ಗೆಳತಿ ....
ನನ್ನ ನಿರೀಕ್ಷೆಯನ್ನು ಸಾಕಾರ ಮಾಡುವೆಯಾ
ನನ್ನ ಪ್ರೀತಿಯ ಸವಿಯನ್ನು ಸವಿಯುವೆಯಾ...
ನಿನ್ನ ಪ್ರೀತಿಯ ಸವಿಯನ್ನು ನನಗೆ ನೀಡುವೆಯಾ
ನಿನ್ನ ನಿರೀಕ್ಷೆಯ ಪ್ರತಿ ಘಳಿಗೆಯೂ ಯಾತನಾಮಯವಾಗಿದೆ...
ಈ ಯಾತನೆಯನ್ನು ನೀಗಿಸಿ ...ನನ್ನನ್ನು ಉಳಿಸುವೆಯಾ...?
No comments:
Post a Comment