ರೈಲು ಬಿಡದಿ ಸ್ಟೇಷನ್ ದಾಟಿ ಮುನ್ನುಗ್ಗುತ್ತಿತ್ತು. ಶ್ವೇತ ಮನಸಿನಲ್ಲೇ ಲೆಕ್ಕಾಚಾರ ಹಾಕುತ್ತಿದ್ದಳು. ನನಗೆ ಎಂಟು ಜನ ಆಫೀಸಿನಲ್ಲಿ ಪ್ರಪೋಸ್ ಮಾಡಿದಾರೆ ಆದರೆ ನಾನು ಮಾತ್ರ ಸುಧನ್ವನ ಹಿಂದೆ ಬಿದ್ದಿದ್ದೇನೆ. ಅವನೋ...Moodi...ಏನು ಹೆಚ್ಚು ಮಾತಾಡೋಲ್ಲ.
ಈ ಮೂರು ಗಂಟೆಗಳ ಪ್ರಯಾಣವನ್ನು ಉಪಯೋಗಿಸಿಕೊಳ್ಳಬೇಕು, ಹೇಗಾದರು ಮಾಡಿ ಇವತ್ತು ನನ್ನ ಮನಸ್ಸಿನ ಆಸೆಯನ್ನು 'ಸುಧನ್ವ'ನಿಗೆ ಹೇಳಬೇಕು ಎಂದು ಗಟ್ಟಿ ನಿರ್ಧಾರ ತೆಗೆದುಕೊಂಡೆ ರೈಲನ್ನು ಹತ್ತಿದ್ದಳು..ಬಿಡದಿ ನಿಲ್ದಾಣ ಬಂದರೂ ಒಂದೇ ಒಂದು ಮಾತು ಸುಧನ್ವನ ಬಾಯಿಂದ ಹೊರಬಿದ್ದಿಲ್ಲ, ಇವಳೋ ಮಾತನಾಡಿಸಲು ಶತಪ್ರಯತ್ನ ಮಾಡುತ್ತಿದ್ದಾಳೆ....!
ಸುಧನ್ವ ನೀನು ಮಾತನಾಡದಿದ್ದರೆ ನಾನು ಬೇರೆ ಬೋಗಿಗೆ ಹೋಗಿ ಕುಳಿತುಕೊಳ್ಳುತ್ತೇನೆ ಎಂದು ಕೋಪದಲ್ಲಿ ಹೇಳಿದಾಗ ಸುಧನ್ವ ನಿಧಾನವಾಗಿ ಏನಾಯ್ತು? ಅಂದ. ನಾನು ಇಷ್ಟು ಹೊತ್ತಿನಿಂದ ಮಾತನಾಡ್ತಾ ಇದೀನಿ ನೀನು ಒಂದು ಮಾತು ಕೂಡ ಆಡಲಿಲ್ಲ...ಅಂದಳು ಸವೆತ ಮುನಿಸಿನಿಂದ. ಸಾರಿ ಶ್ವೇತ...ನಾನು ಏನೋ ಯೋಚಿಸುತ್ತಿದ್ದೆ...ಅಂದ....
ಸಧ್ಯ ಈಗಲಾದರೂ ಟ್ರಾಕ್ ಗೆ ಬಂದನಲ್ಲ ಎಂದು ಖುಷಿಯಿಂದ ಮಾತು ಮುಂದುವರೆಸುತ್ತ ಕೇಳಿದಳು ಏನು ಇದುವರೆಗೂ ಕನಸು ಕಾನುತ್ತಿದ್ಯಾ? ಎಂದು. ಇಲ್ಲ ಅಂತ ತಲೆ ಆಡಿಸಿದ ಸುಧನ್ವ ಅಲ್ಲ ಅಪರಿಚಿತರೆಲ್ಲ ಪರಿಚಯ ಮಾಡಿಕೊಂಡು ರೈಲಿನಲ್ಲಿ ಮಾತನಾಡುತ್ತಿದ್ದರೆ ನೀನೋ ಸೈಲೆಂಟ್ ಆಗಿದಿಯ..?! ಏನೋ ಇದು?
ಸರಿ ನಾನೊಂದು ಮಾತು ಕೇಳ್ತೀನಿ ಹೇಳ್ತಿಯ? ಅಂದಳು ಶ್ವೇತ...ಹೂಂ ಅಂದ ಸುಧನ್ವ.
ಪ್ರೀತಿ ಬಗ್ಗೆ ನಿನ್ನ ಅಭಿಪ್ರಾಯ? ಎಂದಳು..
ಪ್ರೀತಿ...
ಪದದ ಅರ್ಥವೇ ಸಾಗರದಷ್ಟು ಆಳ, ಆಕಾಶದಷ್ಟು ವಿಶಾಲ ...ಎಂದು ನಿಟ್ಟುಸಿರು ಬಿಟ್ಟ!
ಪಕ್ಕದಲ್ಲಿದ್ದ ಶ್ವೇತ ಕೇಳಿದಳು...ಸ್ವಲ್ಪ ವಿಸ್ತಾರವಾಗಿ ಹೇಳ್ಬಾರ್ದ?
ಸೀಟಿನಿಂದ ಮೇಲೆದ್ದ ಸುಧನ್ವ ಬಾಗಿಲ ಬಳಿ ಹೋಗಿ ಸಿಗರಟು ಹಚ್ಚಿ ಪುಂಖಾನುಪುಂಖವಾಗಿ ಸೇದತೊಡಗಿದ. ಹಿಂದೆಯೇ ಬಂದ ಶ್ವೇತ ಮತ್ತೆ ಪ್ರಶ್ನೆ ಮಾಡಿದಳು...ಪ್ಲೀಸ್ ಹೇಳೋ?
...ಅದೊಂದು ಕಾರ್ಯಗರಕ್ಕೆಂದು ನಾನು ಬೆಂಗಳೂರಿಗೆ ಹೋಗಿದ್ದೆ ಅಲ್ಲಿದ್ದ ೬೦ ಮಂದಿ ಹುಡುಗಿಯರಲ್ಲಿ ಬೇಡ ಬೇಡವೆಂದರೂ ಅವಳತ್ತಲೇ ಹೊರಳುತ್ತಿತ್ತು ನನ್ನ ನೋಟ. ಇಡೀ ಕಾರ್ಯಾಗಾರದ ಆ ೫ ದಿನವೂ ನನ್ನ ದೃಷ್ಟಿ ಅವಳ ಮೇಲೆಯೇ ಇತ್ತು. ಕಾರ್ಯಗಾರದಲ್ಲಿ ಕೇಳುವ ಎಲ್ಲ ಪ್ರಶ್ನೆಗಳಿಗೆ ಉತ್ತರ ಹೇಳಲು ಪಡೆ ಪಡೆ ನಾನೇ ಎದ್ದು ನಿಲ್ಲುತ್ತಿದ್ದೆ>. ಪ್ರತಿ ಸಾರಿಯೂ ಅವಳು ನನ್ನನ್ನೇ ನೋಡುತ್ತಿದ್ದಳು. ಅವಳು ನನ್ನನ್ನು ನೋಡಲಿ ಎಂಬ ಕಾರಣಕ್ಕಾಗಿಯಾದರೂ ನಾನು ಉತ್ತರ ಹೇಳಲೆಬೇಕಿತ್ತು! ಹೇಳುತ್ತಿದ್ದೆ!!
ಹೆಚ್ಚು ಸಮಯ ಹಿಡಿಯಲಿಲ್ಲ ಅವಳು ನನ್ನನ್ನು ಮಾತನಾಡಿಸಲು. ಎರಡನೆ ದಿನ ತಿಂಡಿ ತಿನ್ನಲು ಎಲ್ಲರು ಸಾಲಾಗಿ ಹೋಗುತ್ತಿದ್ದಾಗ ಎಲ್ಲಿದ್ದಲೋ? ಎದುರು ಪ್ರತ್ಯಕ್ಷವಾಗಿ Hi, I am Nandini...ಅಂದಳು. ಹಲೋ I am sudhanva from Mysore..ಅಂದೇ.
ಉಭಾಯಾಕುಶಲೋಪರಿ..ಶುರುವಾಯ್ತು. ಪ್ರಥಮ ನೋಟದಲ್ಲೇ ಮತ್ತಷ್ಟು ಸ್ಪೂರ್ತಿ ನೀಡಿದ್ದಳಲ್ಲ ಬಹುಶಹ ಇಬ್ಬರಿಗೂ ಕ್ಲೋಸ್ ಆಗಲಿಕ್ಕೆ ಹೆಚ್ಚು ಸಮಯ ಬೇಕಾಗಲಿಲ್ಲ..!
ನನ್ನ ಅವಳ ರುಚಿ-ಅಭಿರುಚಿ, ವಿದ್ಯೆ-ಊರು, ತಿಂಡಿ-ತಿನಿಸು ಹೀಗೆ ಪ್ರತಿಯೊಂದರ ಬಗ್ಗೆಯೂ ಸಂಬಾಷಣೆ ನಿರರ್ಗಳವಾಗಿ ನಡೆಯುತ್ತಿತ್ತು.
ಇತರ ಶಿಭಿರಾರ್ಥಿಗಲಿಗೋ ನಮ್ಮ ಮೇಲೆಯೇ ದೃಷ್ಟಿ ನೆಟ್ಟಿತ್ತು. ತಿಂಡಿ ಮುಗಿಸಿಕೊಂಡು ಕಾರ್ಯಾಗಾರದ ಹಾಲ್ ಸೇರಿಕೊಲ್ಲುವಷ್ಟರಲ್ಲಿ ನನ್ನ ಗೆಳೆಯರ ಪ್ರಶ್ನೆಗಳು ಶುರು? ಯಾರವಳು...? ಏನು ಮಾತನದುತ್ತಿದ್ದಿರಿ? ಇತ್ಯಾದಿ..ಇತ್ಯಾದಿ? ಅವರತ್ತ ಮುಗುಳ್ನಕ್ಕು ನನ್ನ ಸೀಟ್ ನಲ್ಲಿ ಕೂತೆ?
ಅಲ್ಲಿದ್ದ ೫ ದಿನವೂ ಬಹುಶ ಸ್ವರ್ಗಕ್ಕೆ ಕಿಚ್ಚು ಹಚ್ಚುವಂತ ಆನಂದ ನನಗೆ. ಬದುಕಿನಲ್ಲಿ ಹೊಸ ಅನುಭವ..ಮನಸು ಪ್ರಫುಲ್ಲಾ ...!
ಪ್ರತಿದಿನವೂ ಮಾತನಾಡಿ ಮಾತನಾಡಿ ಬಹಳ ವರ್ಷದ ಸ್ನೇಹಿತರೆನೋ ಅನ್ನುವಂತಿತ್ತು ನಮಗೆ. ಸರಿ ಕೊನೆಯ ದಿನ ಮರಳಿ ಗೂಡಿಗೆ ಎಂಬಂತೆ ಊರಿಗೆ ಹೊರಡಲೇ ಬೇಕಿತ್ತು..!? ಸರಿ ಅವಳು ಆಗ ತಾನೇ BE ಮುಗಿಸಿ ಉದ್ಯೋಗದ ಹುದುಕಾತದಲ್ಲಿದ್ದಳು. ಅವಳದು ಬೆಂಗಳೂರೇ ಆಗಿರೋದ್ರಿಂದ ಬೇಗ ಮರೀತಲೇ, ಫ್ರೆಂಡ್ಸ್ ಜಾಸ್ತಿ, ಮಾಯಾನಗರಿ..ಇದು ಎಲ್ಲವನ್ನು ಮರೆಸುತ್ತೆ ಅನ್ನುವ ಆತಂಕದಲ್ಲೇ ರೈಲನ್ನು ಹತ್ತಿ ಮೈಸೂರಿಗೆ ಹೊರಟೆ..!
ಮನೆಗೆ ಹೋಗುತ್ತಿದ್ದ ಹಾಗೆ ಅಮ್ಮ ಕೇಳಿದಳು..ಹೇಗಿತ್ತೋ...ಕಾರ್ಯಗಾರ?
ನಾನು ಭಾರವಾದ ಮನಸ್ಸಿನಿಂದ ಚೆನ್ನಾಗಿತ್ತು...ಎಂದು ಹೇಳಿ ರೂಂ ಸೇರಿಕೊಂಡೆ...
ರೂಂ ಸೇರಿಕೊಂಡು ೫ ನಿಮಿಷ ಕಳೆದಿಲ್ಲ ಮೊಬೈಲ್ ಫೋನ್ ರಿಂಗ್ ಆಯಿತು. ಯಾರೂ ಅಂತ ನೋಡಿದರೆ...ನಂದಿನಿ!! ಖುಷಿಯಾಗಿ ಮೊಬೈಲ್ ಎತ್ತಿಕೊಂಡು ಹಲೋ ಎಂದೇ...Hiiiii...ಎಂಬ ಸ್ವೀಟ್ ವಾಯ್ಸ್. ಸಾರ್ಥಕವಾಯ್ತು ನಂಬರ್ ಕೊಟ್ಟಿದ್ದಕ್ಕೆ ಎಂದುಕೊಂಡು..ಕಳೆದ ೫ ದಿನಗಳ ಶಿಬಿರದ ಬಗ್ಗೆ, ಒಡನಾಟದ ಬಗ್ಗೆ ಶಿಭಿರಾರ್ಥಿಗಳ ಬಗ್ಗೆ ಅಲ್ಲಿ ನಡೆದ ಘಟನಾವಳಿಗಳ ಬಗ್ಗೆ ಹರಟೆ ಹೊಡೆದಿದ್ದೆ ಹೊಡೆದಿದ್ದು...ನಕ್ಕಿದ್ದೆ ನಕ್ಕಿದ್ದು!!!
ಹೀಗೆ ಕಳೆಯಿತು ಆರು ತಿಂಗಳು. ನಾನು ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದುದರಿಂದ ಪ್ರತಿದಿನ ಚಾಟ್ ಮಾಡ್ತಾ ಇದ್ವಿ, ಫೋನ್ ನಲ್ಲಿ ಮಾತನಾಡ್ತಾ ಇದ್ವಿ, ಒಂದೆರಡು ಸಲ ಬೆಂಗಳೂರಿನ ವರೆಗೂ ಹೋಗಿ ಭೇಟಿಯೂ ಆಗಿದ್ದೆ. ಸರೀ ಮನಸ್ಸಿನ ಭಾವನೆ ಎಷ್ಟು ದಿನ ಅಂತ ಮುಚ್ಚಿಡೋಕೆ ಸಾಧ್ಯಾ?
One fine day..ಮೆಸೇಜ್ ಮಾಡಿದೆ ನಾಳೆ ಬೆನಗ್ಲೂರಿಗೆ ಬರುತ್ತಿದ್ದೇನೆ ಎಂದು. OK ಎಂದಳು.
ಅವತ್ತು ರಾತ್ರಿಯಿಡೀ ನಿದ್ದೆಯೇ ಹತ್ತಿರಕ್ಕೆ ಸುಳಿಯಲಿಲ್ಲ>>!
ಇಬ್ಬರು ಹೋಗಿ ಒಂದು ಪ್ರಶಾಂತವಾದ ಪಾರ್ಕ್ ನಲ್ಲಿ ಕುಳಿತೆವು..ನನಗೆ ಒಳಗೆ ಆತಂಕ...ಹೇಗೆ ಪ್ರಪೋಸ್ ಮಾಡುವುದು ಎಂದು? ಪ್ರಪೋಸೆ ಮಾಡಿದರೆ ನಮ್ಮ ಎಲ್ಲಿ ನಮ್ಮ ಗೆಳೆತನಕ್ಕೆ ಧಕ್ಕೆ ಯಗುತ್ತೋ? ಎಂದು. ೫-೧೦ ನಿಮಿಶವದು ಎಂದು ಮಾತನಾಡಲಿಲ್ಲ. ಅವಳು ಕೆಳುತ್ತಲಿದ್ದಳು ಏನು ವಿಷಯ ಎಂದು?
ಒಳಗೆ ಧವ ಧವ ....ಸಾವರಿಸಿಕೊಂಡು,ಧೈರ್ಯ ಮಾಡಿಕೊಂಡು ತಂದಿದ್ದ ಗಿಫ್ಟ್ ಕೈಗಿತ್ತು ....
......I....Love....You......ಅಂದೇ>>!!!!
ಒಂದೆರಡು ನಿಮಿಷವಾದರು ಅವಳು react ಮಾಡದಿರುವುದನ್ನ ಕಂಡು ನನ್ನ ಎಡೆ ಇನ್ನು ಜೋರಾಗಿ ಹೊಡೆದುಕೊಳ್ಳುತ್ತಿತ್ತು...ಆತಂಕ, ಉದ್ವೇಗ, ಮನೆ ಮಾಡಿತ್ತು...!
????????? ಸಾರಿ ಕಣೋ ...ನಿನ್ನ ಮೇಲೆ ನನಗೆ ಅಂತಹ ಭಾವನೆ ಇಲ್ಲ...You are good friend of mine...! Infact ನನಗೆ marriage fix ಆಗಿದೆ.
ಅದು ನನ್ನ ಅತ್ತೆಯ ಮಗನ ಜೊತೆ. ನಿನ್ನ ಮಾತು, ಬುದ್ದಿವಂತಿಕೆ, ನಿನ್ನ ವ್ಯಕ್ತಿತ್ವ ನೋಡಿ ನಿನ್ನ ಇಷ್ಟ ಪತ್ತೆ ಅದೂ ಒಂದು ಒಳ್ಳೆ ಫ್ರೆಂಡ್ ಆಗಿ.ಪ್ಲೀಸ್ ತಪ್ಪು ತಿಳ್ಕೊಬೇಡ..Don't be disappoint ....
ಅಂದದ್ದೇ ಅಲ್ಲಿಂದ ಹೊರಟಳು....!!
ರೈಲು ನಿಧಾನವಾಗಿ ಮೈಸೂರು ರೈಲು ನಿಲ್ದಾಣದಲ್ಲಿ ನಿಲ್ಲುತ್ತಿತ್ತು...ಸುಧನ್ವನ ಕಣ್ಣಿನಿಂದ ಕಣ್ಣೀರ ಧಾರೆ ಹರಿಯುತ್ತಿತ್ತು..
ಶ್ವೇತ ಕೂಡ ಕನ್ನೋರೆಸಿಕೊಂಡಳು...ಅವನ ಬುಜವನ್ನ ತಟ್ಟುತ್ತ....
ತನ್ನ ಬ್ಯಾಗನ್ನ ಹೆಗಲಿಗೇರಿಸಿಕೊಂಡು ಭಾರವಾದ ಹೆಜ್ಜೆಗಳನ್ನಿಡುತ್ತ ಸುಧನ್ವ ಅಲ್ಲಿಂದ ಹೊರನಡೆದ...!!!!!!!
ಹೆಚ್. ಆರ್. ಪ್ರಭಾಕರ್.
chennagide sir putta premakathe.
ReplyDelete